»   » ಸೆನ್ಸಾರ್ ಮಂಡಳಿಯ ಆನ್ ಲೈನ್ ಸೇವೆ ಶುರು

ಸೆನ್ಸಾರ್ ಮಂಡಳಿಯ ಆನ್ ಲೈನ್ ಸೇವೆ ಶುರು

Subscribe to Filmibeat Kannada

ಕರ್ನಾಟಕ ಪ್ರಾದೇಶಿಕ ಚಲನಚಿತ್ರಸೆನ್ಸಾರ್ ಮಂಡಳಿ ಯನ್ನು ಈಗ ಆನ್ ಲೈನ್ ನಲ್ಲಿ ಭೇಟಿ ಮಾಡಬಹುದು. ಚಿತ್ರದ ಯಾವ ದೃಶ್ಯಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ? ಚಿತ್ರದ ಯಾವ ಸಂಭಾಷಣೆಗೆ ತಡೆ ಒಡ್ಡಲಾಗಿದೆ? ಚಿತ್ರವನ್ನು ನಿಷೇಧಿಸಲು ಕಾರಣ ಏನು? ಎಂಬಿತ್ಯಾದಿ ಪ್ರಶ್ನೆಗಳನ್ನು ಪ್ರೇಕ್ಷಕರುಸೆನ್ಸಾರ್ ಮಂಡಳಿಯ ಅಂತರ್ಜಾಲ ತಾಣಕ್ಕೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.

ಈ ಹಿಂದೆ ನಿರ್ಮಾಪಕರು ಕೋರಮಂಗಲದ ಕೇಂದ್ರೀಯ ಸದನದಲ್ಲಿರುವ ಸೆನ್ಸಾರ್ ಮಂಡಳಿಗೆ ಬಂದು ಅರ್ಜಿ ಸಲ್ಲಿಸುವ ಪರಿಪಾಠವಿತ್ತು.ಇನ್ನು ಮುಂದೆ ಅವರು ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸ ಬಹುದು. ತಮ್ಮ ಚಿತ್ರವನ್ನು ಸೆನ್ಸಾರ್ ಮಂಡಳಿ ಯಾವತ್ತು ವೀಕ್ಷಿಸುತ್ತದೆ? ಶುಲ್ಕವನ್ನು ಯಾವಾಗ ಕಟ್ಟಬೇಕು? ಎಷ್ಟು ಕಟ್ಟಬೇಕು? ಮಂಡಳಿಗೆ ಚಿತ್ರಕಥೆಯನ್ನು ಕಳುಹಿಸಲು ಕೊನೆಯ ದಿನಾಂಕ ಇತ್ಯಾದಿ ವಿವರಗಳನ್ನು ನಿರ್ಮಾಪಕರು ತಿಳಿದುಕೊಳ್ಳಬಹುದು. ಇದಕ್ಕಾಗಿ ನಿರ್ಮಾಪಕರಿಗೆ ಮಂಡಳಿ ಪಾಸ್ ವರ್ಡ್ ಸಹ ಕೊಟ್ಟಿರುತ್ತದೆ.

ಪ್ರೇಕ್ಷಕರಿಗೆ ಏನು ಅನುಕೂಲ?
ಅಶ್ಲೀಲ ಚಿತ್ರಗಳನ್ನು ಯಾವುದಾದರೂ ಚಿತ್ರಮಂದಿರದಲ್ಲಿ ಪ್ರದರ್ಶಿಸುತ್ತಿದ್ದರೆ, ಕತ್ತರಿ ಪ್ರಯೋಗ ಮಾಡಿದ ದೃಶ್ಯಗಳನ್ನು ಮರು ಜೋಡಿಸಿ ಪ್ರದರ್ಶಿಸುತ್ತಿದ್ದರೆ ಆನ್ ಲೈನ್ ನಲ್ಲಿ ಪ್ರೇಕ್ಷಕರು ದೂರು ಸಲ್ಲಿಸಬಹುದು. ಈ ಚಿತ್ರಕ್ಕೆ ಯು,ಎ,ಎಸ್ ಪ್ರಮಾಣ ಪತ್ರ ಕೊಟ್ಟಿದ್ದು ಯಾಕೆ?ಆಕ್ಷೇಪಾರ್ಹ ದೃಶ್ಯ, ಸಂಭಾಷಣೆಗಳಿಗೆ ಕತ್ತರಿ ಪ್ರಯೋಗ ಮಾಡಿದ್ದು ಯಾಕೆ? ಎಂದು ಆನ್ ಲೈನ್ ನಲ್ಲಿ ಪ್ರಶ್ನಿಸಿ ಉತ್ತರ ಪಡೆಯಬಹುದು.
(ದಟ್ಸ್ ಕನ್ನಡಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada