ಡ್ರಗ್ಸ್, ಸೆಕ್ಸ್ ಹಗರಣದಲ್ಲಿ ತಬ್ಬಿಬ್ಬಾದ ಟಾಲಿವುಡ್
ದೇಶದಲ್ಲಿ ಅತಿ ಹೆಚ್ಚು ಸಿನಿಮಾ ನಿರ್ಮಾಣಗೊಳ್ಳುತ್ತಿರುವುದು ಬಾಲಿವುಡ್ ನಲ್ಲೆಂದು ನಿಮ್ಮ ಊಹೆಯಾದರೆ ಅದು ತಪ್ಪು. ಚಿತ್ರ ನಿರ್ಮಿಸುವುದರಲ್ಲಿ ತೆಲುಗು ಚಿತ್ರರಂಗ ನಂಬರ್ ಒನ್ ಸ್ಥಾನದಲ್ಲಿದ್ದರೆ ನಂತರದ ಸ್ಥಾನ ಬಾಲಿವುಡ್ ಗೆ. ಬಹುಶ ದಕ್ಷಿಣ ಭಾರತೀಯರಿಗೆ ಇದ್ದಷ್ಟು ಸಿನಿಮಾ ಹುಚ್ಚು ದೇಶದ ಉಳಿದ ಭಾಗದವರಿಗಿಲ್ಲವೇನೋ? ಇಲ್ಲಿ ನಾಯಕ/ನಾಯಕಿಯರ ಕಟೌಟ್ ಗೆ ಹಾಲಿನ ಅಭಿಷೇಕ ನಡೆಯುತ್ತದೆ. ಬಿಡುಗಡೆ ದಿನ ದೇವಾಲಯದಲ್ಲಿ ಹೋಮ, ಹವನ, ಅನ್ನಸಂತರ್ಪಣೆ ನಡೆಯುತ್ತದೆ. ಅದಕ್ಕಿಂತ ಹೆಚ್ಚಾಗಿ ದೇವಾಲಯವನ್ನೇ ಕಟ್ಟುತ್ತಾರೆ.
| 'ಶೌರ್ಯ' ಚಿತ್ರದಲ್ಲಿ ಕುಣಿದು ಕುಪ್ಪಳಿಸಿ ಪಡ್ಡೆಗಳ ಮನತಣಿಸಿದ್ದ ಮಮೈತ್ ಖಾನ್ ಹೆಸರೂ ಕೇಳಿಬಂದಿದೆ. | |
ಸುಮಾರು ಆರು ತಿಂಗಳಿನಿಂದ ಹೈದರಾಬಾದ್ ಪೊಲೀಸರಿಗೆ ಟಾಲಿವುಡ್ ನಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ಅಲ್ಪಸ್ವಲ್ಪ ಸುಳಿವಿತ್ತು. ಸರಿಯಾದ ಸಮಯಕ್ಕೆ ಹೊಂಚು ಕಾಯುತ್ತಿದ್ದ ಪೊಲೀಸರಿಗೆ ಉಗಾಂಡ ದೇಶದ ಪ್ರಜೆಯೊಬ್ಬ ಡ್ರಗ್ಸ್ ಮಾರಾಟದಲ್ಲಿ ಸಿಕ್ಕಿಬಿದ್ದಾಗ ವಿಷಯ ಬಟ್ಟಬಯಲಾಯಿತು. ಅವನಿಂದ 51 ಗ್ರಾಂ ನಷ್ಟು ಕೊಕೇನ್ ವಶ ಪಡಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ಅವನು ಬಹಿರಂಗ ಪಡಿಸಿದ ವಿಷಯ ತಿಳಿದು ಬೆಚ್ಚಿ ಬಿದ್ದರು. ಕಾರಣವೇನೆಂದರೆ ಈ ಮಾಫಿಯಾದ ರೂವಾರಿ ತೆಲುಗಿನ ಕ್ರೇಜಿ ಸ್ಟಾರ್ ರವಿತೇಜಾ ಅವರ ಸಹೋದರರು. ಇವರು ತೆಲುಗು ಚಿತ್ರರಂಗ ಬಹುತೇಕ ಹೆಚ್ಚಿನ ತಾರೆಯರು, ತಾಂತ್ರಿಕ ವರ್ಗದವರಿಗೆ ಡ್ರಗ್ಸ್ ವಿತರಿಸುತ್ತಿದ್ದಾರೆನ್ನುವ ವಿಚಾರ.
ಇವನ ಮಾಹಿತಿ ಆಧರಿಸಿ ಪೊಲೀಸರು ರವಿತೇಜಾ ಸಹೋದರರಾದ ಭರತ್ ಮತ್ತು ರಘುಬಾಬುನನ್ನು ಬಂಜಾರ ಹಿಲ್ಸ್ ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಿದರು. ತೀವ್ರ ವಿಚಾರಣೆ ನಡೆಸಿದ ಪೊಲೀಸರು ಇವರಿಂದ ಮತ್ತಷ್ಟು ವಿಷಯವನ್ನು ತಿಳಿದುಕೊಂಡರು. ಬಂಧಿಯಾದ ಸಹೋದರರ ಪ್ರಕಾರ ತೆಲುಗು ಮತ್ತು ತಮಿಳಿನ ಖ್ಯಾತ ನಟಿ ತ್ರಿಷಾ ಮಾದಕಿ ದ್ರವ್ಯವ್ಯಸನಿ. ಈಕೆಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದವರು ನಾವೇ ಎಂದು ಹೇಳಿಕೆ ನೀಡಿದ್ದಾರೆಂದು ಗುಲ್ಲೆಬ್ಬಿದೆ.
ನಗರದ ಪ್ರತಿಷ್ಠಿತ ಬಡಾವಣೆಯಾದ ಕುಂದನ್ ಬಾಗ್ ನ ಅಪಾರ್ಟಮೆಂಟ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಸುಳಿವು ಸಿಕ್ಕಿ ತೆಲುಗು ಚಿತ್ರನಟಿಯರು ರೆಡ್ ಹ್ಯಾಂಡ್ ಸಿಕ್ಕಿ ಬಿದ್ದ ವಿಷಯ ಈಗಾಗಲೇ ವರದಿಯಾಗಿದೆ. ಬಂಜಾರ ಹಿಲ್ಸ್ ನಲ್ಲಿರುವ ಪ್ರತಿಷ್ಠಿತ ಪಬ್ ನಲ್ಲಿ ತೆಲುಗು ಚಿತ್ರರಂಗದ ನಿರ್ದೇಶಕರು ಹಿರೋಯಿನ್ ಗಳ ಜೊತೆ ಮಜಾ ಉಡಾಯಿಸು ತ್ತಿದ್ದಾರೆನ್ನುವ ವಿಷಯ ಕೂಡ ಈಗ ಹೊರ ಬಿದ್ದಿದೆ.
ಇತ್ತೀಚಿಗೆ ಬಿಡುಗಡೆಯಾದ ದರ್ಶನ್ ಅಭಿನಯದ 'ಶೌರ್ಯ' ಚಿತ್ರದ ಐಟಂ ಸಾಂಗ್ ನಲ್ಲಿ ಬಂದು ಕುಣಿದು ಕುಪ್ಪಳಿಸಿ ಪಡ್ಡೆಗಳ ಮನತಣಿಸಿದ್ದ ಮಮೈತ್ ಖಾನ್ [ಗ್ಯಾಲರಿ]ಹೆಸರೂ ಕೂಡ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿರುವ ಪರಿ ನೋಡಿದರೆ ಇನ್ನೂ ಯಾರು ಯಾರ ಹೆಸರು ಹೊರಬರುತ್ತೋ ದೇವರೇ ಬಲ್ಲ.


Click it and Unblock the Notifications











