»   » ಮಾತಿನ ಲೇಪನ ನಂತರ ವಿದೇಶಕ್ಕೆ ಹಾರಿದ ನಂದ

ಮಾತಿನ ಲೇಪನ ನಂತರ ವಿದೇಶಕ್ಕೆ ಹಾರಿದ ನಂದ

Posted By:
Subscribe to Filmibeat Kannada

ಆನಂದದಿಂದ ಮಾತಿನ ಭಾಗದ ಚಿತ್ರೀಕರಣ ಮುಗಿಸಿದ ನಂದ ಹಾಡಿನ ಚಿತ್ರೀಕರಣಕ್ಕಾಗಿ ಮೂರುದಿನ ವಿದೇಶಯಾತ್ರೆ ನಡೆಸಲಿದ್ದಾನೆ ಎಂದು ನಿರ್ಮಾಪಕ ಮಾಹಿನ್ ತಿಳಿಸಿದ್ದಾರೆ. ನಿರ್ದೇಶಕರ ಕಾರ್ಯವೈಖರಿಗೆ ಮನಸೋತ್ತಿರುವ ನಿರ್ಮಾಪಕರು ಅನಂತರಾಜು ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 30ದಿನಗಳ ಎರಡನೇ ಹಂತದ ಚಿತ್ರೀಕರಣ ಮುಗಿಸಿರುವ ನಿರ್ದೇಶಕರು ಚಿತ್ರೀಕರಣೇತರ ಚಟುವಟಿಕೆಗಳಿಗೆ ಅಣಿಯಾಗುತ್ತಿದ್ದಾರೆ.

ಕೆ.ಕೆ.ಮೂವೀಸ್ ಲಾಂಛನದಲ್ಲಿ ಮಾಹಿನ್ ಅವರು ನಿರ್ಮಿಸುತ್ತಿರುವ ನಂದ ಚಿತ್ರಕ್ಕೆ ಅನಂತರಾಜು ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ರಮೇಶ್‌ಬಾಬು ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಎಸ್.ಮನೋಹರ್ ಸಂಕಲನ, ಮಾಹಿನ್ ಕತೆ, ಪಳನಿರಾಜ್ ಸಾಹಸ, ಇಸ್ಮಾಯಿಲ್ ಕಲೆ, ದೇವರಾಜ್ ಪಾಲನ್ ಸಹನಿರ್ದೇಶನ ಹಾಗೂ ರಾಮು, ಗಂಡಸಿರಾಜು ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸಂಧ್ಯಾ, ಮೈತ್ರೇಯಿ, ಶರಣ್, ಮಿಥನ್‌ತೇಜಸ್ವಿ, ಮಾಹಿನ್, ಜ್ಯೋತಿ, ಶ್ರೀನಾಥ್ ಮುಂತಾದವರಿದ್ದಾರೆ.

(ದಟ್ಸ್ ಸಿನಿವಾರ್ತೆ)

'ನಂದ' ಚಿತ್ರದಲ್ಲಿ ಶಿವಣ್ಣನ ಮೇಲೆ ಕೊಲೆ ಆರೋಪ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada