For Quick Alerts
  ALLOW NOTIFICATIONS  
  For Daily Alerts

  ನೂರನೇ ಚಿತ್ರವೆಂಬ ಹಣೆಪಟ್ಟಿಯ ಶಿವಣ್ಣನ 'ಶಿವ'

  |

  ಶಿವರಾಜ್ ಕುಮಾರ್ 100 ಚಿತ್ರ ಯಾವುದೆಂದು ಕೇಳಿದರೆ ಈಗ ಯಾರೂ ಹಿಂದೆಮುಂದೆ ನೋಡದೇ 'ಜೋಗಯ್ಯ' ಅನ್ನಬಲ್ಲರು. ಆದರೆ ಶಿವಣ್ಣನ ನೂರನೇ ಚಿತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡರೂ ಜೋಗಯ್ಯ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲಲಿಲ್ಲ. ಹಾಗಾಗಿ ಆ ಚಿತ್ರದ ಬದಲಿಗೆ ಬೇರೆ ಒಂದು ಚಿತ್ರವನ್ನು ಶಿವಣ್ಣನ ನೂರನೆ ಚಿತ್ರ ಎಂದು ಬಿಂಬಿಸಲು ಶತಪ್ರಯತ್ನ ಇನ್ನಿಲ್ಲದಂತೆ ನಡೆಯುತ್ತಿದೆ.

  ಅದು ಶಿವರಾಜ್ ಕುಮಾರ್ ಇತ್ತೀಚಿಗಷ್ಟೇ ಚಿತ್ರೀಕರಣ ಮುಗಿಸಿರುವ ಶಿವ. ಕೆಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರ ಅಭಿಮಾನಿಗಳ ಪಾಲಿನ ನೂರನೇ ಚಿತ್ರ ಎಂದೇ ಹೇಳುತ್ತಿದ್ದಾರೆ ಶ್ರೀಕಾಂತ್. ಅಷ್ಟೇ ಅಲ್ಲ, ಚಿತ್ರ ಚೆನ್ನಾಗಿ ಮೂಡಿಬಂದದ್ದು ಗೆಲ್ಲುವುದು ಗ್ಯಾರಂಟಿ ಎಂದು ಕೂಡ ಹೇಳಿಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಮೇ 18ರಂದು ಬಿಡುಗಡೆ ಮಾಡಲು ನಿರ್ಧರಿಸಿಲಾಗಿದೆ.

  ಆದರೆ ನಿರ್ಮಾಪಕ ಲೆಕ್ಕಾಚಾರದ ಬಗ್ಗೆ ಪ್ರೇಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಕಾರಣ ಶಿವಣ್ಣನ ನೂರನೆ ಚಿತ್ರ ಎಂದು ಡಂಗುರ ಸಾರಿದ್ದರೂ ಜೋಗಯ್ಯ ಕಥೆ ಏನಾಯ್ತು ಎಂಬುದು ಶ್ರೀಕಾಂತ್ ಅವರಿಗೂ ಗೊತ್ತಿದೆ. ಶಿವಣ್ಣನ ನೂರನೇ ಚಿತ್ರ ಎಂಬ ಕಾರಣಕ್ಕೆ ಶತದಿನೋತ್ಸವ ಆಚರಿಸುತ್ತದೆ ಎಂದಾಗಿದ್ದರೆ ಜೋಗಯ್ಯನಿಗೆ ಆ ಗತಿ ಬರುತ್ತಿರಲಿಲ್ಲ. ಮತ್ತೆ ನೂರನೆ ಚಿತ್ರ ಎಂದು ಹೇಳಿಕೊಂಡು ತಿರುಗುವುದೇಕೆ?

  ಪ್ರೇಕ್ಷಕರು ಚೆನ್ನಾಗಿರುವ ಚಿತ್ರವನ್ನು ಸ್ವೀಕರಿಸುತ್ತಾರೆಯೇ ಹೊರತೂ ನೂರನೇ ಚಿತ್ರ ಎಂದೇನಲ್ಲ. ಈ ವಿಷಯ ಜೋಗಯ್ಯ ಸೋತ ಮೇಲೂ ನಿರ್ಮಾಪಕ ಶ್ರೀಕಾಂತ್ ಅವರಿಗೆ ಅರ್ಥವಾಗದಿದ್ದರೆ ಹೇಗೆ ಎಂದು ಸಿನಿಪ್ರೇಕ್ಷಕರು ಮಾತನಾಡತೊಡಗಿದ್ದಾರೆ. ಚಿತ್ರ ಚೆನ್ನಾಗಿದ್ದರೆ ಪ್ರೇಕ್ಷಕರು ಬಂದೇ ಬರುತ್ತಾರೆ, ಅದು ನೂರಾ ಒಂದನೆಯದಾದರೂ ಚಿಂತೆಯೇನು ಎಂಬ ಪ್ರೇಕ್ಷಕರ ಮಾತು ನಿರ್ಮಾಪಕರಿಗೆ ಅರ್ಥವಾದರೆ ಒಳಿತು. (ಒನ್ ಇಂಡಿಯಾ ಕನ್ನಡ)

  English summary
  Actor Shivarajkumar upcoming movie is Shiva. Producer KP Srikanth gives Publicity as shiva is the 100th movie. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X