ಕನ್ನಡ ಚಿತ್ರಗಳಲ್ಲಿ ನಟಿಸುವ ಆಸೆ: ಶ್ರುತಿ ಹಾಸನ್
ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಆಸೆಯನ್ನು ತೋಡಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪೃಥ್ವಿ ' ಚಿತ್ರದ ಹಾಡೊಂದನ್ನು ಹಾಡಲಿರುವ ಶ್ರುತಿ ಇತ್ತೀಚೆಗೆ ತನ್ನ ಮನದಾಳದ ಆಸೆಯನ್ನು ಬಿಚ್ಚಿಟ್ಟರು.
ಪ್ರಸ್ತುತ ತೆಲುಗಿನ ಚಿತ್ರವೊಂದರಲ್ಲಿ ನಾಯಕಿಯಾಗಿ ಶ್ರುತಿ ಅಭಿನಯಿಸುತ್ತಿದ್ದಾರೆ. ಆ ಬಳಿಕ ತಮಿಳಿನ ಜಯಂ ರವಿ ಜೊತೆ ರೊಮ್ಯಾಂಟಿಕ್ ಚಿತ್ರವೊಂದರಲ್ಲಿ ಶ್ರುತಿ ಅಭಿನಯಿಸಲಿದ್ದಾರೆ. ಇದರ ಜೊತೆಗೆ ಕನ್ನಡ ಚಿತ್ರವೊಂದನ್ನು ಕೈಗೆತ್ತಿಕೊಳ್ಳುವ ಮುನ್ಸೂಚನೆಯನ್ನು ಶ್ರುತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರುತಿ, ಕನ್ನಡ ಚಿತ್ರಗಳಲ್ಲಿ ನಟಿಸಲಿರುವುದು ನೂರಕ್ಕೆ ನೂರು ಸತ್ಯ. ಆದರೆ ಈಗಲೇ ಈ ಬಗ್ಗೆ ವಿವರಗಳನ್ನು ನೀಡಲು ಸಾಧ್ಯವಿಲ್ಲ. 'ಪೃಥ್ವಿ ಚಿತ್ರದಲ್ಲಿ ತಾನು ಕಾಣಿಸಿಕೊಳ್ಳಲಿರುವ ಸುದ್ದಿ ಸುಳ್ಳಲ್ಲ. ಸೂಕ್ತ ಸಮಯ, ಸಂದರ್ಭ ನೋಡಿ ಈ ಬಗ್ಗೆ ವಿವರ ನೀಡುತ್ತೇನೆ. ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಉತ್ಕಟ ಬಯಕೆ ಇದೆ ಎಂದು ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ jacob verghese puneeth rajkumar ಜಾಕಬ್ ವರ್ಗೀಸ್ ಮಣಿಕಾಂತ್ ಕದ್ರಿ ಪಾರ್ವತಿ ಮೆನನ್ parvathi menon ಶ್ರುತಿ ಹಾಸನ್ prithvi ಪೃಥ್ವಿ manikanth khadri shruti hassan


Click it and Unblock the Notifications