For Quick Alerts
  ALLOW NOTIFICATIONS  
  For Daily Alerts

  ಜರಾಸಂಧ ಪ್ರಣೀತಾ 'ಸ್ನೇಹಿತರು' ಬಳಗದಲ್ಲಿ ಬ್ಯುಸಿ

  |

  ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ ಸ್ನೇಹಿತರು ಚಿತ್ರತಂಡ. ಗೀತಸಾಹಿತಿ ರಾಮ್ ನಾರಾಯಣ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರವನ್ನು ಸೌಂದರ್ಯ ಜಗದೀಶ್ ನಿರ್ಮಿಸುತ್ತಿದ್ದಾರೆ. ಮೊದಲ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸುತ್ತಿರುವ ಚಿತ್ರತಂಡ, ಎರಡನೇ ಹಂತಕ್ಕಾಗಿ ಸಕಲೇಶಪುರಕ್ಕೆ ಪ್ರಯಾಣ ಬೆಳೆಸಲಿದೆ.

  ಸ್ನೇಹಿತರ ಬಳಗದಲ್ಲಿ ತರುಣ್, ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ರವಿಶಂಕರ್ ಜೊತೆ ಪ್ರಣೀತಾ ಇದ್ದಾರೆ. ಈಗಾಗಲೇ ಗೀತ ಸಾಹಿತ್ಯದಲ್ಲಿ ಹೆಸರು ಮಾಡಿರುವ ರಾಮ್ ನಾರಾಯಣ್ ಚಿತ್ರವಾದ್ದರಿಂದ ಸಾಕಷ್ಟು ನಿರೀಕ್ಷೆ ಸಹಜ. ಜರಾಸಂಧನ ಜೋಡಿಯಾಗಿದ್ದ ಪ್ರಣೀತಾ ಮತ್ತೆ ಸ್ನೇಹಿತರು ಮೂಲಕ ಸ್ಯಾಂಡಲ್ ವುಡ್ ಯಾನ ಮುಂದುವರಿಸಿದ್ದಾರೆ.

  ಸ್ನೇಹಿತರ ಜೊತೆ ಹಿರಿಯ ಕಲಾವಿದರಾದ ರಮೇಶ್ ಭಟ್, ಗಿರಿಜಾ ಲೋಕೇಶ್ ಕೂಡ ಇದ್ದಾರೆ. ಮಾ. ಸ್ನೇಹಿತ್, ಶರಣ್, ಬುಲೆಟ್ ಪ್ರಕಾಶ್, ಸಿಹಿಕಹಿ ಚಂದ್ರು, ಸಾಧುಕೋಕಿಲ, ವಿ. ಮನೋಹರ್ ಮುಂತಾದವರು ಪೋಷಕ ವರ್ಗದಲ್ಲಿದ್ದಾರೆ. ತರಾತುರಿಯಲ್ಲಿ ಚಿತ್ರೀಕರಣ ಮುಗಿಸುತ್ತಿರುವ ಚಿತ್ರ ಯಾವಾಗ ತೆರೆಗೆ ಬರುತ್ತದೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್. (ಒನ್ ಇಂಡಿಯಾ ಕನ್ನಡ)

  English summary
  Kannada movie Snehitaru shooting is going on around the Bangalore. Lyricist Ram narayana directs this movie and Praneeta is the heroine. This is Sowdarya jagadish Production.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X