ಸೋನಾಕ್ಷಿ ಸಿನ್ಹಾ ಮೈಭಾರ ಇದೀಗ ರಾಷ್ಟ್ರೀಯ ಸಮಸ್ಯೆ
ಬಾಲಿವುಡ್ ಬ್ಯೂಟಿ, ದಬಾಂಗ್ ಗರ್ಲ್ ಸೋನಾಕ್ಷಿ ಸಿನ್ಹಾ ಮೈಭಾರ ಈಗ ರಾಷ್ಟ್ರೀಯ ಸಮಸ್ಯೆ! ಗಾಂಧಿವಾದಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಹತ್ತನೆ ದಿನಕ್ಕೆ ಅಡಿಯಿಟ್ಟಿದೆ. ಆದರೆ ಬಾಲಿವುಡ್‌ನಲ್ಲಿ ಅಣ್ಣಾ ತೂಕಕ್ಕಿಂತಲೂ ಸೋನಾಕ್ಷಿ ಮೈಭಾರದ ಸುದ್ದಿ ಎಲೆ ಅಡಿಕೆ ತರಹ ಜಗಿಯುವಂತಾಗಿದೆ. ಬೇಕಿದ್ದರೆ ವಿಡಿಯೋ ನೋಡಿ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಮಲ ಹಾಸನ್ ಅವರ ಮಹತ್ವಾಕಾಂಕ್ಷಿ ಚಿತ್ರ 'ವಿಶ್ವರೂಪಂ'ಗೆ ಸೋನಾಕ್ಷಿ ಸಿನ್ಹಾ ನಾಯಕಿಯಾಗಬೇಕಿತ್ತು. ಆದರೆ ಸೋನಾಕ್ಷಿ ಅದ್ಯಾಕೋ ಏನೋ ಚಿತ್ರದಿಂದ ಹೊರಬಿದ್ದರು. ಅಯ್ಯೋ ಆಕೆ ಹೊರಬಿದ್ದಿದ್ದಲ್ಲ, ಸಿಕ್ಕಾಪಟ್ಟೆ ಮೈಭಾರದ ಕಾರಣ ಚಿತ್ರತಂಡ ಹೊರದಬ್ಬಿದ್ದು ಎಂಬ ಮಾತುಗಳು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ.
ಮೈಭಾರ ಈ ಪಾಟಿ ಜಾಸ್ತಿಯಾಗಲು ಕಾರಣ ಏನು ಎಂದು ಸೋನಾಕ್ಷಿ ಸಿನ್ಹಾ ತಲೆಮೇಲೆ ಕೈಹೊತ್ತು ಕುಳಿದಿದ್ದಾರೆ. ಇನ್ನೊಂದು ಕಡೆ ಬಾಲಿವುಡ್‌ನ ಗಯ್ಯಾಳಿ ರಾಖಿ ಸಾವಂತ್ ಮೈತೂಕ ಇಳಿಸಿಕೊಳ್ಳಲು ಪುಗಸಟ್ಟೆ ಸಲಹೆಯನ್ನೂ ಕೊಟ್ಟು ಸೋನಾಕ್ಷಿ ಪಿತ್ತ ಮತ್ತಷ್ಟು ಕೆರಳುವಂತೆ ಮಾಡಿದ್ದಾರೆ.
ರಾಖಿ ಸಾವಂತ್ ಪುಗಸಟ್ಟೆ ಸಲಹೆ ಏನೆಂದರೆ, ತೂಕ ಇಳಿಸಿಕೊಳ್ಳಲು ಜನಾ ನಾನಾ ತರಹದ ಪ್ರಯೋಗಗಳಿಗೆ ಮೊರೆ ಹೋಗುತ್ತಾರೆ. ಯೋಗ, ಕಸರತ್ತು ಎಂಥಹದ್ದೂ ಮಾಡಬೇಕಾಗಿಲ್ಲ. ಇದನ್ನು ಬಾಲಿವುಡ್ ಡಯಟ್ ಅಂತಾರೆ. ಯುಕೆಯ ನನ್ನ ಗೆಳೆಯನೊಬ್ಬ ಹೇಳಿಕೊಟ್ಟಿದ್ದು. ಬೇಕಿದ್ದರೆ ಸೋನಾಕ್ಷಿ ಸಿನ್ಹಾಗೆ ಹೇಳಿಕೊಡುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications











