ಪ್ರಿನ್ಸ್ ಮಹೇಶ್ ಬಾಬು-ರಾಜಮೌಳಿ ಮ್ಯಾಜಿಕ್ ಕನ್ಫರ್ಮ್
ತೆಲುಗು ಪ್ರಿನ್ಸ್ ಮಹೇಶ್ ಬಾಬು ಅಭಿಮಾನಿಗಳಿಗೆ ಸಿಹಿಸಿಹಿ ಸುದ್ದಿ. 'ದೂಕುಡು' ಚಿತ್ರದ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ಸ್ಪೋಟವಾಗಿದ್ದ ಈ ಸುದ್ದಿ ನಿರ್ದೇಶಕ ರಾಜಮೌಳಿ ಬಾಯಿಂದ 'ದಿ ಬಿಸಿನೆಸ್ ಮನ್' ಚಿತ್ರದ ಆಡಿಯೋ ಬಿಡುಗಡೆ ವೇಳೆ ದೃಢೀಕರಿಸಲ್ಪಟ್ಟಿದೆ. ನಾಲ್ಕು ತಿಂಗಳ ಸುದೀರ್ಘ ಅವಧಿಯ ನಂತರ ಈ ವಿಷಯ ಪಕ್ಕಾ ಆಗಿದೆ.
ಆಡಿಯೋ ಬಿಡುಗಡೆ ವೇಳೆ, "ನಾನು ಈ ಪೋಕಿರಿ ಸ್ಟಾರ್ ಸಿನಿಮಾವನ್ನು ನಿರ್ದೇಶಿಸಲು ಇಷ್ಟಪಡುತ್ತೇನೆ" ಎಂದು ತಮ್ಮ ಅಂತರಂಗದ ಮಾತನ್ನು ಬಹಿರಂಗಪಡಿಸಿದ್ದರು ರಾಜಮೌಳಿ. ಇದೀಗ ಮಹೇಶ್ ಕಡೆಯಿಂದಲೂ 'ಗ್ರೀನ್ ಸಿಗ್ನಲ್' ದೊರೆತಿದೆ. ಹಾಗಾಗಿ ದೃಢೀಕರಿಸಿರುವ ರಾಜಮೌಳಿ, "2012ರಲ್ಲಿ ಇದು ಪ್ರಾರಂಭ" ಎಂದಿದ್ದಾರೆ.
"ನನ್ನ ನಿರ್ದೆಶನ ಹಾಗೂ ಮಹೇಶ್ ನಟನೆಯಲ್ಲಿ ನೀವು ಏನನ್ನು ಬಯಸುತ್ತೀರಿ? ಕೌವ್ ಬಾಯ್ ಫಿಲ್ಮ್, ಜೇಮ್ಸ್ ಬಾಂಡ್ ಫಿಲ್ಮ್ ಅಥವಾ ಅಲ್ಲರಿ ಸೀತಾರಾಮರಾಜು?" ಎಂದು ಪ್ರೇಕ್ಷಕರನ್ನೇ ಪ್ರಶ್ನಿಸಿ ನಿರ್ಧರಿಸುವ ಅವಕಾಶ ನೀಡಿದ್ದಾರೆ ರಾಜಮೌಳಿ. ಒಟ್ಟಿನಲ್ಲಿ ಮಹೇಶ್ ಬಾಬು ಹಾಗೂ ರಾಜಮೌಳಿ ಸಂಗಮದ ಸಿನಿಮಾ ಸೆಟ್ಟೇರುತ್ತದೆ ಎಂದರೆ ಕೇವಲ ಟಾಲಿವುಡ್ ಅಲ್ಲದೇ ನೆರೆಭಾಷೆಯ ಚಿತ್ರರಂಗವೂ ಪುಳಕಗೊಳ್ಳುತ್ತದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











