Just In
- 10 min ago
ಕೊರೊನಾ ನಡುವೆಯೂ 100 ಕೆಜಿ ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸಂಭ್ರಮಿಸಿದ ನಿಖಿಲ್
- 41 min ago
ಟೀಸರ್ ಬಿಡುಗಡೆ: ನಿಖಿಲ್ ಹುಟ್ಟುಹಬ್ಬಕ್ಕೆ ಬಂದ 'ರೈಡರ್'
- 42 min ago
ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ
- 1 hr ago
ಶಿವಮೊಗ್ಗ ಗಣಿಗಾರಿಕೆ ಸ್ಥಳದಲ್ಲಿ ಸ್ಫೋಟ: ಕಿಚ್ಚ ಸುದೀಪ್ ಪ್ರತಿಕ್ರಿಯೆ
Don't Miss!
- News
ಶಿವಮೊಗ್ಗ ಸ್ಪೋಟ ಪ್ರಕರಣ: ಮೃತರ ಕುಟುಂಬಕ್ಕೆ ಪರಿಹಾರ ಘೊಷಣೆ ಮಾಡಿದ ಸಿಎಂ ಯಡಿಯೂರಪ್ಪ!
- Automobiles
ಸೀಟ್ ಬೆಲ್ಟ್ ಧರಿಸುವುದರ ಮಹತ್ವ ವಿವರಿಸಿದ ಪೊಲೀಸ್ ಅಧಿಕಾರಿ
- Sports
ಪೂಜಾರ ನಿಜವಾಗಿಯೂ ಸೈನಿಕನಂತೆ ಹೋರಾಡಿದ್ದರು: ಶಾರ್ದೂಲ್ ಠಾಕೂರ್
- Finance
ಗಿರಗಿಟ್ಲೆಯಾದ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್; $ 30 ಸಾವಿರದ ಕೆಳಗೆ ವಹಿವಾಟು
- Education
Karnataka State Police Recruitment 2021: 545 ಸಬ್-ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಫಟಾಫಟ್ ಅಂತ ರೆಡಿಯಾಗುತ್ತೆ ಈ ಸಬ್ಬಕ್ಕಿ ವಡೆ...
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಮನಾ ಕಿತ್ತೂರು ನಿರ್ದೇಶನದಲ್ಲಿ ಕಿಶೋರ್
ಈಗಾಗಲೆ ತಮ್ಮ ಎರಡು ಚಿತ್ರಗಳ ಮೂಲಕ ಗಮನಸೆಳೆದ ನಿರ್ದೇಶಕಿ ಸುಮನಾ ಕಿತ್ತೂರು. ಈಗವರು ಮತ್ತೊಂದು ಕಾದಂಬರಿ ಆಧಾರಿತ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಪತ್ರಕರ್ತ ಅಗ್ನಿ ಶ್ರೀಧರ್ ಅವರ 'ಎದೆಗಾರಿಕೆ' ಕಾದಂಬರಿ ಬೆಳ್ಳಿತೆರೆಗೆ ತರಲಿದ್ದಾರೆ ಸುಮನಾ ಕಿತ್ತೂರು.
ಭೂಗತ ಜಗತ್ತಿನ ಕಥಾಹಂದರವನ್ನು 'ಎದೆಗಾರಿಕೆ' ಒಳಗೊಂಡಿದ್ದು, ಸುಪಾರಿ ಕಿಲ್ಲರ್ ಒಬ್ಬನ ಸುತ್ತ ಕತೆ ಸುತ್ತುತ್ತದೆ. ಇದೊಂದು ಭೂಗತ ಕಥಾಹಂದರದ ಕಾದಂಬರಿಯಾದರೂ ಅಗ್ನಿ ಶ್ರೀಧರ್ ಅವರ ಬರವಣಿಗೆ ಶೈಲಿ ಹೆಜ್ಜೆಹೆಜ್ಜೆಗೂ ಕುತೂಹಲ ಮೂಡಿಸುವಂತಿದೆ.
ಈ ಹಿಂದೆ ಸುಮನಾ ಕಿತ್ತೂರು ಅವರು 'ಕಳ್ಳರ ಸಂತೆ' ಮತ್ತು 'ಸ್ಲಂಬಾಲ' ಚಿತ್ರಗಳಿಗೆ ಆಕ್ಷನ್, ಕಟ್ ಹೇಳಿದ್ದರು. 'ಎದೆಗಾರಿ'ಗೆ ಅವರು ನಿರ್ದೇಶಿಸಲಿರುವ ಮೂರನೆ ಚಿತ್ರ. ಮೊದಲು ಚಿತ್ರಕತೆಯನ್ನು ಸೆನ್ಸಾರ್‌ಗೆ ತೋರಿಸಿ ಮತ್ತೆ ಚಿತ್ರೀಕರಣ ಆರಂಭಿಸುವುದಾಗಿ ಸುಮನಾ ಕಿತ್ತೂರು ತಿಳಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಕ್ಕೆ ಕಿಶೋರ್ ಅವರನ್ನು ಸುಮನಾ ಆಯ್ಕೆ ಮಾಡಿದ್ದಾರೆ.
ಉಳಿದ ಪಾತ್ರವರ್ಗ, ತಾಂತ್ರಿಕ ಬಳಗ, ಪೋಷಕ ಪಾತ್ರಗಳ ಆಯ್ಕೆ ಇನ್ನಷ್ಟೆ ನಡೆಯಬೇಕಿದೆ. ಸುಪಾರಿ ಕಿಲ್ಲರ್ ಒಬ್ಬನಿಗೆ ಮುಂಚಿತವಾಗಿಯೇ ತನ್ನನ್ನು ಹತ್ಯೆ ಮಾಡುವ ವಿಚಾರ ಗೊತ್ತಾಗುತ್ತದೆ. ಇಲ್ಲಿ ಅವನ ಮನಸ್ಥಿತಿಯನ್ನು ಅಗ್ನಿ ಶ್ರೀಧರ್ ತನ್ನ ಕತೆಯ ಮೂಲಕ ಬಿಚ್ಚಿಡುತ್ತಾ ಹೋಗುತ್ತಾರೆ.