»   » ಪನೋರಮಾಗೆ ಕನ್ನಡದ ಮೂರು ಚಿತ್ರಗಳು

ಪನೋರಮಾಗೆ ಕನ್ನಡದ ಮೂರು ಚಿತ್ರಗಳು

Subscribe to Filmibeat Kannada

ನವದೆಹಲಿ, ಅ.25: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗಕ್ಕೆ ಈ ಬಾರಿ 3 ಕನ್ನಡ ಚಿತ್ರಗಳು ಆಯ್ಕೆಯಾಗಿವೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಗುಲಾಬಿ ಟಾಕೀಸ್', ಉಮಾಶಂಕರ ಸ್ವಾಮಿ ಅವರ 'ಬನದ ನೆರಳು' ಹಾಗೂ ಅಭಯ ಸಿಂಹ ನಿರ್ದೇಶನದ 'ಗುಬ್ಬಚ್ಚಿಗಳು' ಪನೋರಮಾಗೆ ಆಯ್ಕೆಯಾದ ಚಿತ್ರಗಳು.

ಪನೋರಮಾಗೆ ಆಯ್ಕೆಯಾಗಿರುವ 20 ಸಾಕ್ಷ್ಯ ಚಿತ್ರಗಳಲ್ಲಿ ಕನ್ನಡದ 'ಪುಟ್ಟಿ' ಚಿತ್ರಕ್ಕೂ ಸ್ಥಾನ ದೊರಕಿದೆ. ಈ ಚಿತ್ರವನ್ನು ಜೇಕಬ್ ವರ್ಗೀಸ್ ನಿರ್ದೇಶಿಸಿದ್ದಾರೆ. ಈ ವರ್ಷ ಪನೋರಮಾಗೆ ಕನ್ನಡದ ಮೂರು ಚಿತ್ರಗಳು ಆಯ್ಕೆಯಾಗಿರುವುದು ವಿಶೇಷ. ಮಲೆಯಾಳಂನ ಆರು ಚಿತ್ರಗಳು ಪನೋರಮಾಗೆ ಆಯ್ಕೆಯಾಗಿವೆ.

ತೀರ್ಪುಗಾರರ ಸಮಿತಿ ಒಟ್ಟು 104 ಕಥಾಚಿತ್ರಗಳುಹಾಗೂ 82 ಸಾಕ್ಷ್ಯ ಚಿತ್ರಗಳನ್ನು ವೀಕ್ಷಿಸಿ 25 ಕಥಾಚಿತ್ರಗಳನ್ನು ಹಾಗೂ 20 ಸಾಕ್ಷ್ಯ ಚಿತ್ರಗಳನ್ನು ಪನೋರಮಾಗೆ ಆಯ್ಕೆ ಮಾಡಿದ್ದಾರೆ. ಕನ್ನಡದವರೇ ಆದ ಕೋಲಾರ ಮೂಲದ ಕೆ.ಎನ್.ಟಿ.ಶಾಸ್ತ್ರಿಕಥಾ ಚಲನಚಿತ್ರಗಳ ಆಯ್ಕೆ ಸಮಿತಿಯ ಅಧ್ಯಕ್ಷರು. ಸಿನಿಮಾ, ಕಥಾವಸ್ತು, ಸೌಂದರ್ಯ ಪ್ರಜ್ಞೆಯ ಮೌಲ್ಯಗಳನ್ನು ಬಿಂಬಿಸುವ ಚಿತ್ರಗಳನ್ನು ಆಯ್ಕೆ ಮಾಡಬೇಕೆಂಬ ಉದ್ದೇಶವನ್ನು ಪನೋರಮಾ ಹೊಂದಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada