For Quick Alerts
  ALLOW NOTIFICATIONS  
  For Daily Alerts

  ಎಪ್ಪತ್ತು ಪ್ಲಸ್ ಚಿತ್ರಮಂದಿರಕ್ಕೆ ನಾಳೆ ಉಪೇಂದ್ರ ಭೇಟಿ

  |

  ಅಂದುಕೊಂಡಂತೆ ನಡೆದರೆ ಸೂಪರ್ ಸ್ಟಾರ್ ಉಪೇಂದ್ರ ಅಭಿನಯ, ಪಿ ವಾಸು ನಿರ್ದೆಶನ ಹಾಗೂ ಗುರುಕಿರಣ್ ಸಂಗೀತ ಸಂಗಮದ ಚಿತ್ರ 'ಆರಕ್ಷಕ' ನಾಳೆ (ಜನವರಿ 26, 2012) ರಾಜ್ಯದಾದ್ಯಂತ 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇದೇನೂ ದಾಖಲೆ ಆಗದಿದ್ದರೂ ಕನ್ನಡ ಚಿತ್ರವೊಂದಕ್ಕೆ ಇಷ್ಟೊಂದು ಥಿಯೇಟರ್ ಸಿಕ್ಕಿರುವುದು ಸದ್ಯದ ಪರಿಸ್ಥಿತಿಯಲ್ಲಿ ಆಶ್ಚರ್ಯವೇ ಸರಿ.

  ಆರಕ್ಷಕ ಚಿತ್ರ ನೂರಕ್ಕೂ ಹೆಚ್ಚು ಚಿತ್ರಮಂದಿರಕ್ಕೆ ಲಗ್ಗೆ ಹಾಕಲು ಯೋಚಿಸಿತ್ತು. ಆದರೆ ಚಿತ್ರತಂಡಕ್ಕೆ ಇಷ್ಟವಾದ ಥಿಯೇಟರ್ ಸಿಗಲಿಲ್ಲ, ಸಿಕ್ಕ ಥಿಯೇಟರ್ ಇಷ್ಟವಾಗಲಿಲ್ಲ. ಹಾಗಾಗಿ 70 ಪ್ಲಸ್ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿರುವುದು ಪಕ್ಕಾ ಆಗಿದೆ. ಆಕಸ್ಮಿಕ ಬೆಳವಣಿಗೆ ಏನಾದರೂ ಆದರೆ ಮಾತ್ರ ಹೆಚ್ಚು-ಕಡಿಮೆ ಆಗಬಹುದಷ್ಟೇ. ಒಟ್ಟಿನಲ್ಲಿ ನಾಳೆ ಎಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಸಿನಿಮಾ ಮೂಲಕ ಉಪ್ಪಿ ಭೇಟಿ ನೀಡಲಿದ್ದಾರೆ.

  ಆರಕ್ಷಕ 'ಪ್ರೀಮಿಯರ್ ಶೋ ನೋಡಿರುವ ಉಪೇಂದ್ರ ತಂದೆ-ತಾಯಿಗೆ ಚಿತ್ರ ತಂಬಾ ಇಷ್ಟವಾಗಿದೆಯಂತೆ. ಸಾಮಾನ್ಯವಾಗಿ ಉಪೇಂದ್ರರ ಯಾವ ಚಿತ್ರವನ್ನೂ ಇಷ್ಟು ಇಷ್ಟಪಡದ ಅವರಪ್ಪ ಇದನ್ನು ನೋಡಿ "ತುಂಬಾ ಚೆನ್ನಾಗಿದೆ, ಖಂಡಿತ ಚೆನ್ನಾಗಿ ಓಡುತ್ತೆ" ಎಂದಿದ್ದಾರಂತೆ. ಹೀಗಾಗಿ ಆತ್ಮವಿಶ್ವಾಸ ಹಾಗೂ ಆಶೀರ್ವಾದ ಸಿಕ್ಕ ಖುಷಿಯಲ್ಲಿದ್ದಾರೆ ಉಪ್ಪಿ. ನಾಳೆ ಆರಕ್ಷಕ ಹಣೆಬರಹ ತಿಳಿಯಲಿದೆ. (ಒನ್ ಇಂಡಿಯಾ ಕನ್ನಡ)

  English summary
  Super Star Upendra movie 'Arakshaka' to release on Seventy plus Theaters all over Karnataka. Release date tomorrow, Jan 26 2012.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X