»   » ಮೋಹಕ ತಾರೆ ತ್ರಿಷಾ ಕೃಷ್ಣನ್‌ ಮ್ಯಾರೇಜ್ ಸ್ಟೋರಿ

ಮೋಹಕ ತಾರೆ ತ್ರಿಷಾ ಕೃಷ್ಣನ್‌ ಮ್ಯಾರೇಜ್ ಸ್ಟೋರಿ

Posted By:
Subscribe to Filmibeat Kannada

ಮೋಹಕ ತಾರೆ ತ್ರಿಷಾ ಕೃಷ್ಣನ್ ಮ್ಯಾರೇಜ್ ಸ್ಟೋರಿ ಇದು. ಶೀಘ್ರದಲ್ಲೆ ಈಕೆ ಹಸೆಮಣೆ ಏರುವ ಸಿದ್ಧತೆಯಲ್ಲಿದ್ದಾರೆ. ತ್ರಿಷಾ ಯಾವುದೇ ಹೊಸ ಚಿತ್ರಕ್ಕೆ ಸಹಿಹಾಕದೆ ಇರುವುದು ಮದುವೆ ಸುದ್ದಿಯನ್ನು ಮತ್ತಷ್ಟು ಬಲಪಡಿಸಿದೆ. ಕಡೆಯದಾಗಿ ಪೌರಾಣಿಕ ಚಿತ್ರವೊಂದರಲ್ಲಿ ಅಭಿನಯಿಸಿ ನಟಿ ನಯನತಾರಾ ಅವರಂತೆಯೇ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರಂತೆ.

ಸದ್ಯಕ್ಕೆ ಟಾಲಿವುಡ್‌ನಲ್ಲಿ ಒಂದೇ ಒಂದು ಚಿತ್ರ ಬಿಟ್ಟರೆ ತ್ರಿಷಾ ಕೈಯಲ್ಲಿ ಯಾವುದೇ ಚಿತ್ರಗಳೂ ಇಲ್ಲ. ಮದುವೆ ಮೂಡ್‌ನಲ್ಲಿರುವ ಕಾರಣ ಬಂದ ಆಫರ್‌ಗಳನ್ನೆಲ್ಲಾ ತ್ರಿಷಾ ಒಲ್ಲೆ ಎನ್ನುತ್ತಿದ್ದಾರಂತೆ. ತ್ರಿಷಾ ಅವರ ತಾಯಿಯೂ ಸೂಕ್ತ ವರನ ಹುಡುಕಾಟದಲ್ಲಿದ್ದು ಶೀಘ್ರದಲ್ಲೆ ಮಂಗಳವಾದ್ಯಗಳು ಮೊಳಗಲಿವೆ.

ಈಗಾಗಲೆ ತ್ರಿಷಾ ಅವರಿಗೆ ಸಂಬಂಧಗಳು ಬಂದಿದ್ದು ಅವರಲ್ಲಿ ಒಬ್ಬ ವೈದ್ಯ ಹಾಗೂ ಇನ್ನೊಬ್ಬ ಬ್ಯುಸಿನೆಸ್ ಮ್ಯಾನ್ ಎನ್ನಲಾಗಿದೆ. ಈ ಎರಡೂ ಸಂಬಂಧಗಳನ್ನು ತ್ರಿಷಾ ಒಪ್ಪಲಿಲ್ಲ ಎಂಬ ಸುದ್ದಿಯೂ ಇದೆ. ಆದರೆ ತ್ರಿಷಾ ಮಾತ್ರ ಇವೆಲ್ಲಾ ಅಲ್ಲಗುಲ್ಲಾ ಕತೆಗಳು ಎಂದಿದ್ದಾರೆ. (ಏಜೆನ್ಸೀಸ್)

English summary
Here is a well known South Indian actress Trisha Krishnan Marriage Story. The is all set to enter wedlock soon. It is believed that Trisha’s mother is in search of suitable groom for Trisha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada