ಸಿಂಗಪುರದಲ್ಲಿ ರಾಧಿಕಾ ರಮ್ಯಾ 'ಲಕ್ಕಿ' ವಸ್ತ್ರ ಖರೀದಿ
ಕನ್ನಡ ಚಿತ್ರರಂಗದ 'ತಂಗಿ' ರಾಧಿಕಾ ಚೊಚ್ಚಲ ನಿರ್ಮಾಣದ 'ಲಕ್ಕಿ' ಚಿತ್ರೀಕರಣ ಇಂದಿನಿಂದ(ಜು.25) ಆರಂಭವಾಗಿದೆ. ಈ ಚಿತ್ರದಲ್ಲಿ ಗೋಲ್ಡನ್ ಗರ್ಲ್ ರಮ್ಯಾ ಹಾಗೂ ಯಶ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಸೂರಿ (ದುನಿಯಾ ಸೂರಿ ಅಲ್ಲ) ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.
ಅರ್ಜುನ್ ಜನ್ಯ ಸಂಗೀತ ನೀಡಿರುವ ಚಿತ್ರಕ್ಕೆ 'ಮುಂಗಾರು ಮಳೆ'ಗೆ ಕ್ಯಾಮೆರಾ ಹಿಡಿದ ಕೃಷ್ಣಕುಮಾರ್ ಛಾಯಾಗ್ರಹಣವಿದೆ. ಬೆಂಗಳೂರು ಮತ್ತು ರಾಜ್ಯದ ಇತರೆಡೆ ಚಿತ್ರೀಕರಣ ನಡೆಯಲಿದೆ. ಮಲೆಗಾಲ ಮುಗಿದ ಬಳಿಕ ಚಿತ್ರತಂಡ ರಾಜ್ಯದ ಇತರೆಡೆ ಚಿತ್ರೀಕರಣ ಆರಂಭಿಸಲಿದೆ.
ಅತ್ತ ರಮ್ಯಾ ಇತ್ತ ರಾಧಿಕಾ ಅವರಿಗೆ 'ಲಕ್ಕಿ' ಚಿತ್ರ ಒಂಥರಾ ಥ್ರಿಲ್ ಕೊಟ್ಟಿದೆಯಂತೆ. ಸದ್ಯಕ್ಕೆ ಇಬ್ಬರೂ ಚಿತ್ರೀಕರಣದ ಕಾಸ್ಟ್ಯೂಮ್ ಖರೀದಿಯಲ್ಲಿ ಬ್ಯುಸಿ. ಚಿತ್ರೀಕರಣಕ್ಕೆ ಬೇಕಾಗುವ ವಸ್ತ್ರಗಳ ಖರೀದಿಗೆ ಸಿಂಗಪುರಗೆ ಹೋಗುವುದಾಗಿ ರಮ್ಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Actor Yash and actress Ramya are teaming up for the first time for the movie Lucky. This Kannada film is directed by debutant Soori and produced by actress Radhika. The film is all set to start shooting from today, 25th July in Bangalore.


Click it and Unblock the Notifications











