For Quick Alerts
  ALLOW NOTIFICATIONS  
  For Daily Alerts

  ಸುದೀಪ್ 'ಬೆಳ್ಳಿಹಬ್ಬ': 25 ವರ್ಷದ ಪಯಣದ ಬಗ್ಗೆ ಕಿಚ್ಚನ ಭಾವುಕ ಮಾತು

  |

  ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಕಿಚ್ಚ ಸುದೀಪ್ ಅವರಿಗಾಗಿ ಇಂದು (ಮಾರ್ಚ್ 15) 'ಸುದೀಪ್ ಬೆಳ್ಳಿಹಬ್ಬ' ಆಯೋಜಿಸಲಾಗಿತ್ತು. ಸಿಎಂ ಯಡಿಯೂರಪ್ಪ, ನಟ ಶಿವರಾಜ್ ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್‌, ರವಿಶಂಕರ್, ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಹಾಗೂ ಇನ್ನೂ ಕೆಲವು ಸಿನಿ ಹಾಗೂ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  Kichcha Sudeep's 25Y Celebration : ಬೆಳ್ಳಿಹಬ್ಬದ ಸಂಭ್ರಮದಲ್ಲಿ ಶಿವಣ್ಣ,ರವಿಚಂದ್ರನ್ ಬಗ್ಗೆ ಕಿಚ್ಚ ಹೇಳಿದ್ದೇನು

  ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್, 'ನನಗಿಂತಲೂ ಹಿರಿಯರು ಇಲ್ಲಿದ್ದಾರೆ. ನನಗಿಂತಲೂ ಮುಂಚೆ ಅವರು ಸಿನಿಯಾನ ಆರಂಭಿಸಿದ್ದಾರೆ, ಅವರ ನೆರಳಿನಲ್ಲಿ ನಾನು ಸಾಗಿಬಂದಿದ್ದೇನೆ' ಎಂದರು.

  'ಕನ್ನಡ ಸಿನಿಮಾರಂಗದ ಅದ್ಭುತ ಇತಿಹಾಸದಲ್ಲಿ ನನ್ನನ್ನೂ ಒಂದು ಪುಟವಾಗಲು ಅವಕಾಶ ಮಾಡಿಕೊಟ್ಟ ಎಲ್ಲರಿಗೂ ನಾನು ಋಣಿಯಾಗಿರುತ್ತೇನೆ. ಈಗ ಹಿಂತಿರುಗಿ ನೋಡಿದಾಗ ನಾನು ನೀಡಿದ ಹಿಟ್ ಸಿನಿಮಾಗಳು ಗಳಿಸಿದ ಲಾಭ ಯಾವುದೂ ನೆನಪಿಗೆ ಬರುವುದಿಲ್ಲ. ಬದಲಿಗೆ ಸಿನಿಮಾ ಕಟ್ಟಿಕೊಟ್ಟ ಸುಂದರ ನೆನಪುಗಳು ಮಾತ್ರವೇ ಕಣ್ಣ ಮುಂದೆ ಮೂಡುತ್ತವೆ' ಎಂದರು ಸುದೀಪ್.

  'ಚಿತ್ರರಂಗದಲ್ಲಿ 25 ವರ್ಷ ಪೂರೈಸಿರುವುದು ನಾನೊಬ್ಬನೇ ಅಲ್ಲ. ನಾನು 25 ವರ್ಷ ಪೂರೈಸಲು ಹಲವಾರು ಮಂದಿ ಪರೋಕ್ಷವಾಗಿ. ಪ್ರತ್ಯಕ್ಷವಾಗಿ ಸಹಾಯ ಮಾಡಿದ್ದಾರೆ. ನನ್ನೊಂದಿಗೆ ಅವರೂ ಸಿನಿಪಯಣ ಮಾಡಿದ್ದಾರೆ ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ' ಎಂದರು ಸುದೀಪ್.

  ಸಿನಿಮಾ ರಂಗದ ಆರಂಭದ ದಿನಗಳಲ್ಲಿ ತಮಗೆ ಸಹಾಯ ಮಾಡಿದ ವ್ಯಕ್ತಿಗಳನ್ನು, ತಾವು ಆದರ್ಶ ಅಂದುಕೊಂಡಿದ್ದ ವ್ಯಕ್ತಿಗಳನ್ನು ಸುದೀಪ್ ಅವರು ನೆನಪಿಸಿಕೊಂಡರು ಸುದೀಪ್. ಕೊರೊನಾ ಸಮಯದಲ್ಲಿ ಚಿತ್ರರಂಗಕ್ಕೆ ಸಹಾಯ ಮಾಡಿದ ಯಡಿಯೂರಪ್ಪ ಅವರಿಗೆ ವಿಶೇಷ ಧನ್ಯವಾದವನ್ನು ಸುದೀಪ್ ಹೇಳಿದರು.

  English summary
  25 Years In Movie Industry: Sudeep attends Silver Jubilee function celebrating his 25 years in Kannada movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X