twitter
    For Quick Alerts
    ALLOW NOTIFICATIONS  
    For Daily Alerts

    ಕೈಯಲ್ಲಿ ಸಾರಾಯಿ ಬಾಟಲಿ ಹಿಡಿದ ದೇವದಾಸ

    By Rajendra
    |

    ಈಗಾಗಲೆ ದೇವದಾಸ ಹಲವು ಭಾಷೆಗಳಲ್ಲಿ ತೆರೆಗೆ ಬಂದು ಹೋಗಿದ್ದಾನೆ. ಆದರೆ ಕನ್ನಡದಲ್ಲಿ ಬರುತ್ತಿರುವ 'ದೇವದಾಸ' ಕೊಂಚ ಭಿನ್ನವಾಗಿರುತ್ತಾನೆ.ಆದರೆ ಕೈಯಲ್ಲಿ ಸಾರಾಯಿ ಬಾಟಲಿ ಇರುವುದಿಲ್ಲವೆ?ಎಂದು ಕೇಳಬೇಡಿ, ಖಂಡಿತ ಇರುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಎಬಿಸಿಡಿ ಶಾಂತಕುಮಾರ್.

    ಈ ದೇವದಾಸ ಸಾಫ್ಟ್‌ವೇರ್ ಇಂಜಿನಿಯರ್. ತಾನು ಪ್ರೀತಿಸುತ್ತಿರುವ ಹುಡುಗಿಯನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ತಿರುಗುತ್ತಿರುತ್ತಾನೆ . ಜೊತೆಗೆ ಅವನ ಪ್ರೀತಿಯ ನಾಯಿಯೂ ಇರುತ್ತದೆ. ಇವನು ಯಾಕೆ ಹೀಗಾದ. ಇವನ ಕೈಗೆ ಸಾರಾಯಿ ಬಾಟಲಿ ಏಕೆ ಬಂತು ಎಂಬ ಪ್ರಶ್ನೆಗಳಿಗೆ ಉತ್ತರ ತೆರೆಯ ಮೇಲೆಯೇ ಸಿಗಲಿದೆ.

    ಚಿತ್ರದ ನಿರ್ದೇಶಕರು ಚಿತ್ರಕತೆಯನ್ನು ಐದು ವರ್ಷಗಳ ಹಿಂದೆಯೇ ಹೆಣೆದಿದ್ದರಂತೆ. ಆದರೆ ಅವರ ಅಭಿರುಚಿಯ ನಾಯಕ ಸಿಗದೆ ಸುಮ್ಮನಾಗಿದ್ದರಂತೆ. ಲೂಸ್ ಮಾದ ಯೋಗೀಶ್‌ನನ್ನು ನೋಡಿದ ಬಳಿಕ 'ದೇವದಾಸ' ಚಿತ್ರಕ್ಕೆ ಮರು ಜೀವ ಬಂತು ಎನ್ನುತ್ತಾರೆ ಶಾಂತಕುಮಾರ್.

    ಆಧುನಿಕ ದೇವದಾಸನಿಗೆ ಪಾರು ಆಗಿ ಜಿನಾಲ್ ಪಾಂಡೆ ಎಂಬ ದಂತದ ಗೊಂಬೆ ಅಭಿನಯಿಸಿದ್ದಾರೆ. ಈ ಚಿತ್ರ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಜೋಶ್ವಾ ಶ್ರೀಧರ್ ಅವರ ಸಂಗೀತ, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಚಿತ್ರಕ್ಕಿದೆ.ನೇತಾನ್ಯ, ಚಿತ್ರದ ಮತ್ತೊಬ್ಬ ನಾಯಕಿ. ಸ್ವಸ್ತಿಕ್ ಮುನಿರಾಜು ಹಾಗೂ ಎಚ್ ಎಂ ಕೃಷ್ಣಮೂರ್ತಿ ನಿರ್ಮಾಪಕರು. [ಲೂಸ್ ಮಾದ]

    English summary
    Actor Yogesh is a appearing as modern Devadas in his upcoming movie Devadas. The movie is not the traditional Sharat Chandra Chattopadhyay’s novel’s remake. Shantha’s Devadas spans a modern life where the hero plays the role of a software engineer. The music of the film has been given by Joshua Sridhar.
    Tuesday, January 25, 2011, 17:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X