ಗೋಲ್ಡನ್ ಗರ್ಲ್ ರಮ್ಯಾ ಮೇಲೆ ಯುವ ಕಾಂಗ್ರೆಸ್ ಸಿಡಿಮಿಡಿ
ಗೋಲ್ಡನ್ ಗರ್ಲ್ ರಮ್ಯಾ ಮೇಲೆ ಯುವ ಕಾಂಗ್ರೆಸ್ ಸಿಡಿಮಿಡಿಗೊಂಡಿದೆ. ಯುವ ಕಾಂಗ್ರೆಸ್‌ಗೆ ಹೊಸ ಚೈತನ್ಯ ತರುತ್ತಾರೆ. ಅವರನ್ನು ಹುರಿದುಂಭಿಸುತ್ತಾರೆ. ಅವರಲ್ಲಿ ಹೊಸ ಉತ್ಸಾಹ ಹುಮ್ಮಸ್ಸು ತರುತ್ತಾರೆ ಎಂದು ಯುವ ಕಾಂಗೈ ನಿರೀಕ್ಷಿಸಿತ್ತು. ಆದರೆ ಈಗ ಯುವ ಕಾಂಗೈ ಅಂದುಕೊಂಡದ್ದೇ ಬೇರೆ ಆದದ್ದೇ ಬೇರೆ ಎಂಬಂತಾಗಿದೆ.
ಯುವ ಕಾಂಗೈ ನಿರೀಕ್ಷಿಸಿದ ಮಟ್ಟದಲ್ಲಿ ರಮ್ಯಾ ಅವರು ಕೆಲಸ ಮಾಡಿಲ್ಲ ಎಂಬುದು ಅವರ ಆರೋಪ.ಸಾಲದಕ್ಕೆ ರಮ್ಯಾ ಮದುವೆ, ಬಾಯ್‌ಫ್ರೆಂಡ್ ಎಂದು ಕಾಲಹರಣ ಮಾಡುತ್ತಿದ್ದಾರೆ. ಮುಂದಿನ ವರ್ಷ ತನ್ನ ಬಾಯ್‌ಫ್ರೆಂಡ್ ಜೊತೆ ಸಪ್ತಪದಿ ತುಳಿದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸೆಟ್ಲ್ ಆಗುವ ಆಲೋಚನೆ ರಮ್ಯಾಗೆ ಇದೆಯಂತೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಮ್ಯಾ ಬಗ್ಗೆ ಯುವ ಕಾಂಗೈ ಇಟ್ಟುಕೊಂಡಿದ್ದ ಕನಸುಗಳು ನುಚ್ಚುನೂರಾಗಿವೆ. ರಮ್ಯಾ ಅವರ ಈ ವರ್ತನೆಯಿಂದ ವಿರೋಧ ಪಕ್ಷಗಳು ಕಾಂಗ್ರೆಸ್‌ನ ಪಡಿಪಾಟಲನ್ನು ನೋಡಿ ಮುಸಿಮುಸಿ ನಗುವಂತಾಗಿದೆ. ಯುವ ಕಾಂಗೈ ಈಗ ತಲೆ ಮೇಲೆ ಕೈಹೊತ್ತು ಮುಂದೇನು ಮಾಡುವುದು ಎಂದು ದೀರ್ಘವಾಗಿ ಚಿಂತನೆ ನಡೆಸುತ್ತಿದೆ ಎಂಬ ಸುದ್ದಿ ಗಾಂಧಿನಗರದಿಂದ ಬಂದಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











