»   » ಶ್ಯಾಮ್‌ ಬೆನಗಲ್‌ರ ‘ನೇತಾಜಿ’ ಸಿನಿಮಾಗೆ ಶನಿಕಾಟ

ಶ್ಯಾಮ್‌ ಬೆನಗಲ್‌ರ ‘ನೇತಾಜಿ’ ಸಿನಿಮಾಗೆ ಶನಿಕಾಟ

Subscribe to Filmibeat Kannada

*ಸುಂದರಿ

ನೇತಾಜಿ ಸುಭಾಷ್‌ ಚಂದ್ರಭೋಸ್‌ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ‘ನೇತಾಜಿ’ ಗೆ ಚಾಲನೆ ಸಿಕ್ಕಿದೆ. ಕಲ್ಕತ್ತಾದ ಜೈಲಿನಲ್ಲಿ ಶೂಟಿಂಗ್‌ ನಡೆಯಬೇಕಿದೆ. ಆದರೆ ಜೈಲಿನವರು ಶೂಟಿಂಗ್‌ಗೆ ಅನುಮತಿ ನೀಡುತ್ತಿಲ್ಲ. ಕಾರಣ ಬ್ರಿಟಿಷ್‌ ಯೂನಿಯನ್‌ ಜಾಕ್‌ !

ಜೈಲಿನಲ್ಲಿ ಎರಡು ಕ್ಷಣಗಳ ಕಾಲವೂ ಬ್ರಿಟಿಷ್‌ ಧ್ವಜವನ್ನು ಹಾರಿಸುವುದು ಸಾಧ್ಯವಿಲ್ಲ ಎಂದು ಪ್ರೆಸಿಡೆನ್ಸಿ ಜೈಲಿನ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಕಲ್ಕತ್ತಾದಲ್ಲಿ ಸ್ವಾತಂತ್ರ್ಯ ಪೂರ್ವ ವಾತಾವರಣವನ್ನು ಸೃಷ್ಟಿಸುವುದು ಸಾಧ್ಯವಿಲ್ಲ ಎಂಬುದಾಗಿ ಶ್ಯಾಮ್‌ ಬೆನೆಗಲ್‌ ಅವರಿಗೆ ಜೈಲು ಸಚಿವ ಬಿಸ್ವಂತ್‌ ಚೌಧುರಿ ಸ್ಪಷ್ಟವಾಗಿ ಹೇಳಿದ್ದಾರೆ.

ಬೆನೆಗಲ್‌ ಈಗ ಶೂಟಿಂಗ್‌ ಪ್ಲಾನ್‌ ಬದಲಾಯಿಸಲೇ ಬೇಕಾಗಿದೆ. ಜೈಲಿನ ಗೇಟ್‌ನ ಬಣ್ಣವನ್ನೂ ಬದಲಾಯಿಸಲು ಬೆನೆಗಲ್‌ಇಚ್ಛಿಸಿದ್ದ ರು. ಆದರೆ ಬೆನೆಗಲ್‌ ಮನವಿಗಳ್ಯಾವುದೂ ಪುರಸ್ಕೃತವಾಗಿಲ್ಲ. ಜೈಲಿನ ಅಧಿಕಾರಿ ಜಯದೇವ್‌ ಚಕ್ರವರ್ತಿ ಯಾವುದೇ ಬ್ರಿಟಿಷ್‌ ಸಂಗತಿಗಳನ್ನು ಮತ್ತೆ ಜೈಲಿನ ಆವರಣಕ್ಕೆ ತರುವುದಕ್ಕೆ ಬಿಲ್‌ಕುಲ್‌ ಒಪ್ಪುತ್ತಿಲ್ಲ.

ಸಿನೆಮಾಕ್ಕೋಸ್ಕರವಾಗಲೀ ಅಥವಾ ಇತರ ಯಾವುದೇ ಕಾರಣಕ್ಕಾಗಲೀ ಜೈಲನ್ನು ಬದಲಾಯಿಸಲು ಆಗುವುದಿಲ್ಲ.

ಜೈಲಿನಲ್ಲಿರುವ ಕೈದಿಗಳಿಂದಲೂ ಒಂದು ಕಾರ್ಯಕ್ರಮವನ್ನು ಶೂಟ್‌ ಮಾಡಲು ಬೆನಗಲ್‌ಬಯಸಿದ್ದರು. ಕೈದಿಗಳ ಪ್ರಕಾರ ಈ ಸಿನೆಮಾ ಚೆನ್ನಾಗಿರುತ್ತದೆ. ಆದರೆ ಜೈಲಿನ ಶೂಟಿಂಗ್‌ಗಳಿಂದ ಅವರಿಗೇನೂ ಲಾಭವಾಗುವುದಿಲ್ಲ. ಕನಿಷ್ಠ ಜೈಲಿನಲ್ಲಿ ಹೆಚ್ಚಿನ ಸೌಲಭ್ಯ ಕಲ್ಪಿಸುವ ಕುರಿತೂ ಯಾರೂ ಯೋಚಿಸುತ್ತಿಲ್ಲ. ಈ ಬಗ್ಗೆ ಕೈದಿಗಳು ಹೆಚ್ಚಿನ ಸೌಲಭ್ಯಕ್ಕಾಗಿ ಪಶ್ಚಿಮ ಬಂಗಾಳದ ಸಾರಿಗೆ ಮಂತ್ರಿ ಸುಭಾಷ್‌ ಚಕ್ರವರ್ತಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಕಳೆದ 20- 22 ವರ್ಷಗಳಿಂದ ಜೈಲಿನಲ್ಲೇ ಕೊಳೆಯುತ್ತಿರುವ ಕೈದಿಗಳು ತಮ್ಮ ಬಿಡುಗಡೆಗಾಗಿಯೂ ಚಕ್ರವರ್ತಿಯವರ ಮೊರೆ ಹೋಗಿದ್ದಾರೆ.

ನೇತಾಜಿ ಸಿನಿಮಾ ಚಾರಿತ್ರಿಕ ದಾಖಲೆಯಾಗಿ ಹೆಸರು ಮಾಡಬೇಕು ಎನ್ನುವುದು ಬೆನಗಲ್‌ ಬಯಕೆ. ಈದರೆ ಆಸೆಗೆ ಸಾಕಷ್ಟು ಅಡೆ ತಡೆ ಎದುರಾಗುತ್ತಿವೆ. ಬೆನಗಲ್‌ ಮುಂದೆ ಉಳಿದಿರುವುದು ಒಂದೇ ದಾರಿ. ಜೈಲಿನ ಸೆಟ್‌ ಹಾಕುವುದು !!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada