»   » ಕಾಡುವ ‘ಮೋಹಿನಿ’ಗೆ ಕ್ಲೈಮ್ಯಾಕ್ಸ್‌!

ಕಾಡುವ ‘ಮೋಹಿನಿ’ಗೆ ಕ್ಲೈಮ್ಯಾಕ್ಸ್‌!

Subscribe to Filmibeat Kannada

ತೆಲುಗಿನ ಮೋಹಕ ಬೆಡಗಿ ಸದಾ ಮತ್ತು ‘ಡೆಡ್ಲಿ ಸೋಮ’ ಖ್ಯಾತಿಯ ಆದಿತ್ಯ ಅಭಿನಯದ ‘ಮೋಹಿನಿ 94458 88888’ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಮೈಸೂರು ಲ್ಯಾಂಪ್ಸ್‌ ಕಾರ್ಖಾನೆಯಲ್ಲಿ ಭರದಿಂದ ನಡೆಯಿತು.

ಕಳೆದ ಐದು ದಿನಗಳಿಂದ ಥ್ರಿಲ್ಲರ್‌ ಮಂಜು ನಿರ್ದೇಶನದಲ್ಲಿ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ನಾಲ್ಕು ಕ್ಯಾಮೆರಾಗಳನ್ನು ಬಳಸಿ ಹೊಡೆದಾಟದ ಸನ್ನಿವೇಶಗಳನ್ನು ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಸೂಚನೆಯನ್ವಯ ಅತ್ಯದ್ಭುತವಾಗಿ ಸೆರೆಹಿಡಿಯಲಾಯಿತು. ಅಲ್ಲದೇ ಇದೇ ಸ್ಥಳದಲ್ಲಿ ಅನುಪ್ರಭಾಕರ್‌, ಆದಿತ್ಯ, ರಾಜೇಶ್‌ ಮತ್ತು ನಾಜರ್‌ ಅಭಿನಯದ ಇತರ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.

ಈ ಚಿತ್ರಕ್ಕೆ ಹಂಸಲೇಖ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ. ರಾಜೇಂದ್ರ ಕಾರಂತ್‌ ಮತ್ತು ಮಂಡ್ಯ ಮಂಜು ಜಂಟಿಯಾಗಿ ಸಂಭಾಷಣೆ ಹೊಸೆದಿದ್ದಾರೆ. ಸುಹಾಸಿನಿ, ಪೂನಾ, ಕೆ.ಎಸ್‌.ಎಲ್‌. ಸ್ವಾಮಿ, ಆದಿಲೋಕೇಶ್‌, ರಿಯಾಜ್‌ ಖಾನ್‌, ಶ್ರೀರಕ್ಷಾ, ರಮೇಶ್‌ ಪಂಡಿತ್‌, ಪ್ರಕಾಶ್‌, ಕೋಮಲ್‌ ಮತ್ತಿತರರು ತಾರಾಗಣದಲ್ಲಿದ್ದಾರೆ.

ಅಂದ ಹಾಗೆ ಮೊಬೈಲ್‌ ಸಂಖ್ಯೆ 94458 88888ಕ್ಕೆ ಕರೆ ಮಾಡಿ, ಮೋಹಿನಿ ಬಗ್ಗೆ ಚಿತ್ರ ನಿರ್ದೇಶಕರೊಂದಿಗೆ ಮಾತನಾಡಬಹುದಂತೆ!

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada