For Quick Alerts
  ALLOW NOTIFICATIONS  
  For Daily Alerts

  ‘16 to 60’ ಬೆನ್ನಲ್ಲಿಯೇ ಸಾಲುಸಾಲು ‘ದೇವರ ಚಿತ್ರ’ಗಳು!

  By Staff
  |

  ಗುರುವಾರ ಅರಸು ತೆರೆಕಂಡಿದೆ. ಶುಕ್ರವಾರ ಪೂಜಾರಿ ತೆರೆಕಾಣುತ್ತಿದೆ. ಇದರೊಂದಿಗೆ ವಿಶೇಷ ಕ್ಯಾಟಗರಿ(ಇವುಗಳನ್ನು ‘ದೇವರ ಚಿತ್ರ’ ಎನ್ನುವುದೂ ಉಂಟು!)ಗೆ ಸೇರಿದ ‘16 ಟು 60’ ಚಿತ್ರ ತೆರೆಕಾಣಲು ಸಜ್ಜಾಗಿದೆ.

  ‘16 to 60’ --ಇದು ದೇವರ ಚಿತ್ರ ಎಂದು ಒತ್ತಿ ಹೇಳುವಂತೆ ‘ಮಸ್ತ್‌ ಮಜಾ ಮಾಡಿ!’ ಎನ್ನುವ ಉಪಶೀರ್ಷಿಕೆ ಜಾಹೀರಾತುಗಳಲ್ಲಿದೆ. ಅಷ್ಟು ಮಾತ್ರವಲ್ಲದೇ, ಶಕೀಲಾ ಮೇಡಂ ಚಿತ್ರದ ಜಾಹೀರಾತುಗಳಲ್ಲಿ ಧಾರಾಳತನ ಪ್ರದರ್ಶಿಸಿದ್ದಾರೆ!

  ಪದ್ಮಾವತಿ ಆರ್ಟ್‌ ಸಿನಿ ಕ್ರಿಯೇಷನ್ಸ್‌ನ ಈ ಚಿತ್ರ ಹತ್ತು ವರ್ಷಗಳ ಹಿಂದೆ ರೆಡಿಯಾಗಿತ್ತಂತೆ. ಸಿಲ್ಕ್‌ ಸ್ಮಿತಾ, ಡಿಸ್ಕೋಶಾಂತಿ ಚಿತ್ರದ ಮುಖ್ಯ ಆಕರ್ಷಣೆ. ಸಿಲ್ಕ್‌ ಈಗ ದಿವಂಗತೆ. ಡಿಸ್ಕೋಶಾಂತಿಗೆ ಮಾರುಕಟ್ಟೆಯಿಲ್ಲ. ಹೀಗಾಗಿ ಚಿತ್ರದಲ್ಲಿ ಪುಟ್ಟ ಪಾತ್ರ ನಿರ್ವಹಿಸಿದ್ದರೂ, ಶಕೀಲಾ ಫೋಟೊಗಳನ್ನೇ ಜಾಹೀರಾತುಗಳಲ್ಲಿ ದೊಡ್ಜದಾಗಿ ಬಳಸಿ, ಪ್ರೇಕ್ಷಕರ ಸೆಳೆಯಲಾಗುತ್ತಿದೆ.

  ‘ರಹಸ್ಯ’, ‘ನವಭಾರತಿ’, ಇತ್ತೀಚಿನ ‘ರಂಭಾ’ ಮತ್ತು ‘ಹೊಸವರ್ಷ’ ಮತ್ತಿತರ ‘ದೇವರ ಚಿತ್ರ’ಗಳ ಯಶಸ್ಸು ಕಂಡು ಕೆಲ ನಿರ್ಮಾಪಕರು ಮತ್ತು ನಿರ್ದೇಶಕರು, ಸ್ಯಾಂಡಲ್‌ವುಡ್‌ನಲ್ಲಿ ಉತ್ಸಾಹಗೊಂಡಿದ್ದಾರೆ!

  ಒಂದು ಬೆಡ್‌ ರೂಮ್‌, ಒಂದು ಬಾತ್‌ ರೂಮ್‌, ಒಂದಿಬ್ಬರು ಹುಡುಗಿಯರು ಸಿಕ್ಕಿದರೆ ಸಾಕು, ಇವರು ಚಿತ್ರ ಮುಗಿಸಿಬಿಡುತ್ತಾರೆ. ರೀಲ್‌ ಸುತ್ತುವಲ್ಲಿ ಪ್ರಾವಿಣ್ಯತೆ ಗಳಿಸಿರುವ ಈ ಗುಂಪಿನ ಜನ, ಕಡಿಮೆ ಬಟೆಟ್‌ ಚಿತ್ರ ಮಾಡಿ, ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ದೊಡ್ಡದೊಡ್ಡ ನಾಯಕರ ನಂಬಿ ಕೋಟ್ಯಂತರ ರೂಪಾಯಿ ಸುರಿದ ನಿರ್ಮಾಪಕರು ಕಣ್‌ಕಣ್‌ ಬಿಡುತ್ತಿದ್ದಾರೆ!

  ಸದ್ಯಕ್ಕೆ ಬಂದಿರುವ ವರದಿಗಳ ಪ್ರಕಾರ, ದೇವರ ಚಿತ್ರಗಳ ತಯಾರಿ ಜೋರಾಗಿಯೇ ಕರ್ನಾಟಕದಲ್ಲಿ ನಡೆಯುತ್ತಿದೆ.

  ಚಿತ್ರಮಂದಿರಗಳ ಕೊರತೆಯಿಂದ ಒಳ್ಳೆ ಚಿತ್ರಗಳು ಬಾಕ್ಸ್‌ನಲ್ಲಿಯೇ ಕೊಳೆಯುತ್ತಿದ್ದರೆ, ಹೇಗೋ ಈ ಚಿತ್ರಗಳು ಚಿತ್ರಮಂದಿರ ಗಿಟ್ಟಿಸುತ್ತಿವೆ. ಪ್ರೇಕ್ಷಕರನ್ನು ಸೆಳೆಯುತ್ತಿವೆ!

  ಈ ಅಬ್ಬರದಲ್ಲಿ ಸದಭಿರುಚಿ, ಕಲಾತ್ಮಕ ಚಿತ್ರಗಳು ಸವಕಲಾಗದಿರಲಿ! ‘ನೀಲಿಯಾದವೋ, ಎಲ್ಲ ನೀಲಿಯಾದವೋ...’ ಅನ್ನುವಂತಾಗದಿರಲಿ... ವಾಣಿಜ್ಯ ಮಂಡಳಿ ಅಧ್ಯಕ್ಷರಾದ ತಲ್ಲಂ ಅವರೇ, ಸ್ವಲ್ಪ ಕಣ್ಣಾಡಿಸಿ... ‘ಸರ್ವಂ ನೀಲ ಮಯಂ’ ಆಗುವುದನ್ನು ತಪ್ಪಿಸಿ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X