»   » ಗೆದ್ದೇ ಗೆಲ್ಲುವ ಛಲದಲ್ಲಿ ‘ಮಲ್ಲ’ !

ಗೆದ್ದೇ ಗೆಲ್ಲುವ ಛಲದಲ್ಲಿ ‘ಮಲ್ಲ’ !

Posted By: Staff
Subscribe to Filmibeat Kannada

ರಾಮು ಎಂಟರ್‌ಪ್ರೆೃಸಸ್‌ ನಿರ್ಮಾಣದ 'ಮಲ್ಲ" ರವಿಚಂದ್ರನ್‌ ಪಾಲಿಗೆ ಅತ್ಯಂತ ಮಹತ್ವದ ಚಿತ್ರ. ರವಿ ಮಾತ್ರವಲ್ಲ , ನಿರ್ಮಾಪಕ ರಾಮು ಪಾಲಿಗೂ 'ಮಲ್ಲ" ಅಗ್ನಿ ಪರೀಕ್ಷೆಯ ಚಿತ್ರ. ಏಕೆ ಗೊತ್ತಾ -

ಸಾಲುಸಾಲು ತೋಪು ಚಿತ್ರಗಳಿಂದ ಕಂಗೆಟ್ಟಿರುವ ರವಿಚಂದ್ರನ್‌ಗೆ ತುರ್ತಾಗಿ ಒಂದು ಯಶಸ್ಸು ಬೇಕಾಗಿದೆ. ರಾಕ್‌ಲೈನ್‌ ನಿರ್ಮಾಣದ 'ಒಂದಾಗೋಣ ಬಾ" ಚಿತ್ರ ನಿರೀಕ್ಷಿಸಿದ ಮಟ್ಟಿಗೆ ಗೆಲ್ಲದ ಕಾರಣ ರವಿಚಂದ್ರನ್‌ಗೆ 'ಮಲ್ಲ" ಗೆಲ್ಲುವುದು ಅನಿವಾರ್ಯವಾಗಿ ಪರಿಣಮಿಸಿದೆ. ಆ ಕಾರಣದಿಂದಾಗಿ 'ಮಲ್ಲ" ಚಿತ್ರದ ಬಗ್ಗೆ ರವಿ ಅತೀವ ಕಾಳಜಿ ವಹಿಸಿದ್ದಾರೆ. ಸ್ವತಃ ರವಿಚಂದ್ರನ್‌ ಹೇಳಿಕೊಳ್ಳುವಂತೆ, ಇದು ಕನಸುಗಾರನ ಕನಸು !

ರವಿಚಂದ್ರನ್‌ಗೆ ಕನ್ನಡ ಚಿತ್ರರಂಗದಲ್ಲಿ ಸ್ಥಾನಮಾನ ಕಲ್ಪಿಸಿದ ಪ್ರೇಮಲೋಕ ಹಾಗೂ ರಣಧೀರ ಚಿತ್ರಗಳ ವೈಭವ 'ಮಲ್ಲ" ಚಿತ್ರದಲ್ಲಿ ಮರುಕಳಿಸಿದೆ ಎಂದು ಗಾಂಧಿನಗರ ಹೇಳುತ್ತಿದೆ. 'ಮಲ್ಲ" ಚಿತ್ರದ ಹಾಡುಗಳು ಈಗಾಗಲೇ ಟೀವಿಯಲ್ಲಿ ಕಾಣಿಸಿಕೊಂಡು ಚಿತ್ರರಸಿಕರಿಗೆ ಕಚಗುಳಿಯಿಡುತ್ತಿವೆ. 'ಮಲ್ಲ" ಚಿತ್ರದ ನಾಯಕಿ ಉಪೇಂದ್ರ ಅವರ ತಾರಾಪತ್ನಿ ಪ್ರಿಯಾಂಕ. ಈಕೆ ಚಿತ್ರದಲ್ಲಿ ರೋಚಕವಾಗಿ ಕಾಣಿಸಿಕೊಂಡಿರುವುದು ಚಿತ್ರದ ಯಶಸ್ಸಿಗೆ ನೆರವಾಗಬಹುದು ಎನ್ನಲಾಗಿದೆ.

ಇನ್ನು ನಿರ್ಮಾಪಕ ರಾಮು ಅವರಿಗೆ ಕೂಡ 'ಮಲ್ಲ" ಗೆಲ್ಲಲೇಬೇಕಾಗಿರುವ ಚಿತ್ರ. ರವಿಚಂದ್ರನ್‌ರಂತೆ ಸೋಲುಗಳನ್ನುಂಡು ನಂಜುಂಡನಾಗಿರುವ ರಾಮು ಸಿಹಿ ಕಾಣುವ ಬಗ್ಗೆ ಕಾತರರಾಗಿದ್ದಾರೆ. 'ಮಲ್ಲ" ಗೆದ್ದರೆ ಮುಂದಿನ ಚಿತ್ರಗಳಲ್ಲಿ ರಾಮು ನೆಮ್ಮದಿಯಾಗಿ ತೊಡಗಿಕೊಳ್ಳಬಹುದು.

'ಮಲ್ಲ" ಚಿತ್ರ ಸಂಕ್ರಾಂತಿಯ ವೇಳೆಗೇ ಬಿಡುಗಡೆಯಾಗಬೇಕಿತ್ತು . ಆದರೆ ಥಿಯೇಟರ್‌ಗಳ ಸಮಸ್ಯೆ, ದೊಡ್ಡ ಬ್ಯಾನರ್‌ಗಳ ಸ್ಪರ್ಧೆಯಿಂದಾಗಿ ಚಿತ್ರದ ಬಿಡುಗಡೆ ಅನೇಕ ಬಾರಿ ಮುಂದಕ್ಕೆ ಹೋಗಿತ್ತು . ಅರ್ಜೆಂಟು ಮಾಡುವುದು ಬೇಡ ಎಂದು ರವಿಚಂದ್ರನ್‌ ತಾಳ್ಮೆ ವಹಿಸಿದ್ದರು. ತಾಳಿದವನು ಬಾಳಿಯಾನು ಎನ್ನುವ ನಾಣ್ಣುಡಿ ನಿಜವಾಗಲಿ.
ಮುಖಪುಟ / ಸ್ಯಾಂಡಲ್‌ವುಡ್‌

English summary
Malla' to hit the screen on 27th Feb, 2004
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada