»   » ಚಿತ್ರ ನಿರ್ಮಾಣ : ದರ್ಶನ್‌ರ ಲೇಟೆಸ್ಟ್‌ ಅವತಾರ!

ಚಿತ್ರ ನಿರ್ಮಾಣ : ದರ್ಶನ್‌ರ ಲೇಟೆಸ್ಟ್‌ ಅವತಾರ!

Posted By:
Subscribe to Filmibeat Kannada

ನಾಯಕರು ನಿರ್ದೇಶಕರಾಗಿ ಬದಲಾಗುವುದು, ನಿರ್ಮಾಪಕರಾಗಿ ಬದಲಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಈ ಹಾದಿಯಲ್ಲಿ ಈಗ ಹೊರಡವರು, ದರ್ಶನ್‌!

ತಮ್ಮ ತಂದೆಯವರ ಹೆಸರಲ್ಲಿ ತೂಗುದೀಪ ಪ್ರೊಡಕ್ಷನ್‌ ಆರಂಭಿಸಿರುವ ದರ್ಶನ್‌ಗೆ ಹತ್ತಾರು ಉತ್ತಮ ಚಿತ್ರಗಳನ್ನು ನಿರ್ಮಿಸುವ ಕನಸಿದೆ. ಆ ಚಿತ್ರಗಳಿಂದ ಬಂದ ಲಾಭವನ್ನು ಬಡವರಿಗೆ ಮತ್ತು ಅನಾಥರಿಗೆ ಬಳಸುವ ಹಂಬಲವಿದೆ. ತೂಗುದೀಪ ಪ್ರೊಡಕ್ಷನ್‌ನ ಮೊದಲ ಚಿತ್ರ ‘ಜೊತೆ ಜೊತೆಯಲಿ’ ಚಿತ್ರೀಕರಣ ಆರಂಭಗೊಂಡಿದೆ.

ದರ್ಶನ್‌ರ ಸೋದರ ದಿನಕರ್‌, ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಕ್ಯಾಮರಾ ಹಿಂದೆ, ಸಹಾಯಕ ನಿರ್ದೇಶಕರಾಗಿ ದುಡಿದು ಅನುಭವಗಳಿಸಿರುವ ದಿನಕರ್‌ ಚಿತ್ರಕ್ಕೆ ಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ.

‘ನೆನಪಿರಲಿ’ ಚಿತ್ರದ ನಾಯಕ ಪ್ರೇಮ್‌ ಕುಮಾರ್‌ ಮತ್ತು ರಮ್ಯಾ ಜೋಡಿ ಚಿತ್ರದಲ್ಲಿದೆ. ತೂಗುದೀಪ್‌ ಶ್ರೀನಿವಾಸ್‌ ಪತ್ನಿ ಮೀನಾ ಕಣ್ಣಲ್ಲಿ ಈಗ ಸಂಭ್ರಮದ ಖುಷಿ. ನಮ್ಮ ಯಾಜಮಾನರ ಚಿತ್ರನಿರ್ಮಾಣದ ಬಯಕೆ, ಮಕ್ಕಳಿಂದ ಪೂರ್ಣವಾಗುತ್ತಿದೆ ಎನ್ನುತ್ತಾರೆ ಮೀನಾ.

ವರ್ಷವಿಡಿ ಬ್ಯುಸಿ : ನಟ ದರ್ಶನ್‌ ಚಿತ್ರರಂಗದಲ್ಲೀಗ ಓಡುವ ಕುದುರೆ. ದ್ವಾರಕೀಶ್‌ ಚಿತ್ರ, ರಾಮು ಫಿಲಂಸ್‌, ಲಕ್ಷ್ಮಿ ಕಂಬೈನ್ಸ್‌, ಸೂಪರ್‌ ಗೋಲ್ಡ್‌ ಕಂಬೈನ್ಸ್‌ ಸೇರಿದಂತೆ ವಿವಿಧ ಪ್ರೊಡಕ್ಷನ್‌ಗಳ ಚಿತ್ರಗಳು ದರ್ಶನ್‌ ಮುಂದಿವೆ. 2007ವರೆಗೆ ಅವರಿಗೆ ಕಾಲು ಕೆರೆದುಕೊಳ್ಳಲು ಸಹಾ ಪುರಸೊತ್ತಿಲ್ಲ! ಈ ಮಧ್ಯೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಒಳ್ಳೆಯದಾಗಲಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada