»   » ‘ಗಂಡ ಹೆಂಡತಿ’ : ಸಂಚಲನ ಮೂಡಿಸಿದ ಬೇಬಿ ಸಂಚಲಿ

‘ಗಂಡ ಹೆಂಡತಿ’ : ಸಂಚಲನ ಮೂಡಿಸಿದ ಬೇಬಿ ಸಂಚಲಿ

Subscribe to Filmibeat Kannada

‘ಗಂಡ ಹೆಂಡತಿ’ ಚಿತ್ರದಲ್ಲಿ ನಾಯಕ ವಿಶಾಲ್‌ನ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲನಟಿ ಸಂಚಲಿ, ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಶೂಟಿಂಗಿನಲ್ಲಿ ಭಾರೀ ಸಂಚಲನ ಉಂಟುಮಾಡಿದ್ದಾಳೆ.

ಎಚ್‌ಎಎಲ್‌ ಸಾರ್ವಜನಿಕ ಶಾಲೆ(ಪಬ್ಲಿಕ್‌ ಸ್ಕೂಲ್‌)ಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಬೇಬಿ ಸಂಚಲಿ ಬುದ್ಧಿವಂತ ಪುಟಾಣಿ. ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಈಕೆ, ಶಾಲೆಯಲ್ಲಿ ಎಂದೂ ಮೊದಲ ರ್ಯಾಂಕ್‌ ಬೇರೆಯವರಿಗೆ ಬಿಟ್ಟುಕೊಟ್ಟಿಲ್ಲವಂತೆ.

ಶೂಟಿಂಗಿಗಾಗಿ ತನ್ನ ಅಜ್ಜಿಯಾಂದಿಗೆ ಬ್ಯಾಂಕಾಕ್‌ ತೆರಳಿದ್ದ ಸಂಚಲಿ, ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಎಲ್ಲರಿಗೂ ಗುಡ್‌ ಮಾರ್ನಿಂಗ್‌ ಹೇಳುತ್ತಿದ್ದರೆ ಮಲಗಿದ್ದ ದೊಡ್ಡವರಿಗೆ ನಾಚಿಕೆ... ಮಗುವಿನ ಉತ್ಸಾಹದಿಂದ ಇಡೀ ಚಿತ್ರ ತಂಡಕ್ಕೆ ಒಂದು ಬಗೆಯ ಸ್ಫೂರ್ತಿ...

ಮುಂದೆ ವೈದ್ಯೆಯಾಗಬೇಕೆಂಬ ಕನಸು ಹೊಂದಿರುವ ಸಂಚಲಿ, ಶಾಸ್ತ್ರೀಯ ಸಂಗೀತ ಹಾಗೂ ನೃತ್ಯವನ್ನೂ ಕಲಿಯುತ್ತಿದ್ದಾಳೆ. ‘ಇದು ಇವಳ ಮೊದಲ ಚಿತ್ರವಾದರೂ ಕ್ಯಾಮೆರಾ ಮುಂದೆ ನಿಂತರೆ ಸಾಕು, ಈಕೆ ಒನ್‌ ಟೇಕ್‌ ಆರ್ಟಿಸ್ಟ್‌ ’ ಎನ್ನುತ್ತಾರೆ ಚಿತ್ರ ನಿರ್ದೇಶಕ ರವಿ ಶ್ರೀವತ್ಸ.

ಸಂಚಲಿಯ ಹಿರಿಯರು ಮೂಲತಃ ತಮಿಳುನಾಡಿನ ದಿಂಡಿಗಲ್‌ನವರು. ತಾಯಿ ನಿತ್ಯಾ ಎಚ್‌ಎಎಲ್‌ ಸಾರ್ವಜನಿಕ ಶಾಲೆಯಲ್ಲೇ ಟೀಚರ್‌ ಆಗಿ ಕೆಲಸ ನಾಡುತ್ತಿದ್ದಾರೆ. ತಂದೆಗೆ ಫಾರ್ಚ್ಯೂನ್‌ ಅಡುಗೆ ಎಣ್ಣೆ ಕಂಪನಿಯಲ್ಲಿ ಉದ್ಯೋಗ.

‘ಗಂಡ ಹೆಂಡತಿ’ ಚಿತ್ರದಲ್ಲಿ ನಿನಗೆ ಯಾವ ದೃಶ್ಯ ಇಷ್ಟ ಎಂದು ಕೇಳಿದರೆ, ನನ್ನ ಅಮ್ಮನಿಗೆ ಕಾಡುವ ವಿಲನ್‌ಗೆ ಹೊಡೆಯೋ ದೃಶ್ಯ ಎಂದು ತಕ್ಷಣ ಹೇಳುತ್ತಾಳೆ. ಶೂಟಿಂಗಿಗೆ ಎರಡು ವಾರಗಳ ಕಾಲ ರಜೆ ಕೊಟ್ಟ ಶಾಲಾ ಸಿಬ್ಬಂದಿಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಾಳೆ. ಚಾಕಲೇಟ್‌ ಪ್ರಿಯಳಾದ ಸಂಚಲಿ, ಬ್ಯಾಂಕಾಕ್‌ನಲ್ಲಿ ತಿಂದದ್ದು ಮಾತ್ರ ಐದೇ ಚಾಕಲೇಟ್‌ ಅಂತೆ...!

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada