»   » ಸದ್ದಿಲ್ಲದೆ ಚಿಗುರುತ್ತಿರುವ ಕನಸು ಹಾಗೂ ಅಭಿ

ಸದ್ದಿಲ್ಲದೆ ಚಿಗುರುತ್ತಿರುವ ಕನಸು ಹಾಗೂ ಅಭಿ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಜ್ಞಾನಪೀಠ ಪ್ರಶಸ್ತಿ ವಿಜೇತ ಕಾದಂಬರಿಕಾರ ಕೆ.ಶಿವರಾಮಕಾರಂತರ ಜನಪ್ರಿಯ ಕಾದಂಬರಿ ‘ಚಿಗುರಿದ ಕನಸು’ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದೆ.

ಟಿ.ಎಸ್‌.ನಾಗಾಭರಣ ನಿರ್ದೇಶನದ ‘ಚಿಗುರಿದ ಕನಸು’ ಚಿತ್ರದ ಚಿತ್ರೀಕರಣ ದೆಹಲಿಯ ಸುತ್ತಮುತ್ತ ಇತ್ತೀಚೆಗೆ ನಡೆದಿದ್ದು - ಶಿವರಾಜ್‌ಕುಮಾರ್‌ ಹಾಗೂ ಇತರರು ಅಭಿನಯಿಸಿದ ದೃಶ್ಯಗಳನ್ನು ಛಾಯಾಗ್ರಾಹಕ ಗೌರೀಶಂಕರ್‌ ಚಿತ್ರಿಸಿಕೊಂಡರು. ದೆಹಲಿಯ ವಿಮಾನ ನಿಲ್ದಾಣ, ಸಪ್ಧರ್‌ ಪಾರ್ಕ್‌, ಸುರಾನಾ ಕ್ಲೂ ಮುಂತಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಿತು.

ದೆಹಲಿ, ಬನಾರಸ್‌ಗಳಲ್ಲೂ ‘ಚಿಗುರಿದ ಕನಸು’ ಸಿನಿಮಾದ ಶೂಟಿಂಗ್‌ ನಡೆಯಲಿದೆ.

ಅಭಿ ಬಂದ ಅಭಿ

ಒಂದೆಡೆ ‘ಚಿಗುರಿದ ಕನಸು’ ಚಿತ್ರೀಕರಣದ ನ್ಯಾಪಕವಾಗಿ ನಡೆಯುತ್ತಿದ್ದರೆ, ಇನ್ನೊಂದೆಡೆ ಪುನೀತ್‌ ನಾಯಕನಟನಾಗಿ ಅಭಿನಯಿಸಿರುವ ಎರಡನೇ ಚಿತ್ರ ‘ಅಭಿ’ಗೆ ಅಭಿಮಾನಿಗಳ ಉತ್ಸಾಹ ಜೋರಾಗಿದೆ. ಯಥಾಪ್ರಕಾರ, ನಕ್ಷತ್ರ-ಮೆರವಣಿಗೆ-ಹಾಲಿನ ಅಭಿಷೇಕ-ಸಿಹಿ ಹಂಚಿಕೆಯ ಸಂಭ್ರಮ ತುಳುಕುತ್ತಿದೆ.

ಅಭಿಮಾನಿಗಳಿಗೆ ಅಣ್ಣಾವ್ರ ಹುಟ್ಟುಹಬ್ಬದ ಕೊಡುಗೆಯಾಗಿ ಬಿಡುಗಡೆಯಾಗಿರುವ ‘ಅಭಿ’ ಏಪ್ರಿಲ್‌ 25ರ ಶುಕ್ರವಾರ ತೆರೆ ಕಂಡಿದೆ. ಒಂದು ಮೂಲದ ಪ್ರಕಾರ, ಬಿಡುಗಡೆಗೆ ಮುನ್ನವೇ ‘ಅಭಿ’ 3 ಕೋಟಿ ರುಪಾಯಿ ಲಾಭದಲ್ಲಿದೆ.

ಅಂತೂ ರಾಜ್‌ ಕ್ಯಾಂಪ್‌ನಲ್ಲಿ ಕಲರವ ಮರಳಿದೆ ಎಂದಾಯಿತು!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada