»   » ಡಾ.ರಾಜ್‌ಕುಮಾರ್‌ ಟ್ರಸ್ಟ್‌ನಲ್ಲಿ ಬರಗೂರು ಮತ್ತು ನಿಸಾರ್‌

ಡಾ.ರಾಜ್‌ಕುಮಾರ್‌ ಟ್ರಸ್ಟ್‌ನಲ್ಲಿ ಬರಗೂರು ಮತ್ತು ನಿಸಾರ್‌

Subscribe to Filmibeat Kannada


ಬೆಂಗಳೂರು : ಕೆರೆಯ ನೀರನು ಕೆರೆಗೆ ಚೆಲ್ಲಲು ಡಾ.ರಾಜ್‌ಕುಮಾರ್‌ ಕುಟುಂಬ ಮುಂದಾಗಿದೆ. ಬರಗೂರು ರಾಮಚಂದ್ರಪ್ಪ ಮತ್ತು ನಿಸಾರ್‌ ಅಹಮದ್‌ ಅವರ ಮಾರ್ಗದರ್ಶನದಲ್ಲಿ ಡಾ.ರಾಜ್‌ಕುಮಾರ್‌ ಟ್ರಸ್ಟ್‌ ರೂಪುಗೊಂಡಿದೆ.

ರಾಜ್‌ರ 79ನೇ ಜನ್ಮದಿನದಂದು ಟ್ರಸ್ಟ್‌ ಅಸ್ತಿತ್ವಕ್ಕೆ ಬಂದಿದ್ದು, ಐದು ಲಕ್ಷ ರೂ.ಗಳ ಮೂಲಧನದೊಂದಿಗೆ, ಸೇವಾ ಕೈಂಕರ್ಯವನ್ನು ಆರಂಭಿಸಿದೆ. ಯಾರ ಬಳಿಯೂ ಚಂದಾ ಕೇಳದೇ(ಅವರಾಗಿ ನೀಡಿದರೆ ಅಭ್ಯಂತರವಿಲ್ಲ), ಆದಾಯದ ಒಂದು ಭಾಗವನ್ನು ಟ್ರಸ್ಟ್‌ ಚಟುವಟಿಕೆಗೆ ಮೀಸಲಿಡುವುದಾಗಿ ರಾಜ್‌ ಕುಟುಂಬ ಹೇಳಿದೆ.

ಪದಾಧಿಕಾರಿಗಳು : ಪಾರ್ವತಮ್ಮ ರಾಜ್‌ಕುಮಾರ್‌(ಅಧ್ಯಕ್ಷೆ), ಶಿವರಾಜ್‌ ಕುಮಾರ್‌(ಉಪಾಧ್ಯಕ್ಷ), ರಾಘವೇಂದ್ರ ರಾಜ್‌ಕುಮಾರ್‌(ಕಾರ್ಯದರ್ಶಿ ಮತ್ತು ಖಜಾಂಚಿ), ಪುನೀತ್‌(ಪ್ರಧಾನ ಸದಸ್ಯ), ಭುಜಂಗ ಶೆಟ್ಟಿ, ಬರಗೂರು ರಾಮಚಂದ್ರಪ್ಪ ಮತ್ತು ನಿಸಾರ್‌ ಅಹಮದ್‌(ಮಾರ್ಗದರ್ಶಕರು)

ಟ್ರಸ್ಟ್‌ ಉದ್ದೇಶ : ಅಶಕ್ತ ರಂಗ ಮತ್ತು ಸಿನಿ ಕಲಾವಿದರಿಗೆ ಆಸರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತೇಜನ, ನೇತ್ರದಾನಕ್ಕೆ ಪ್ರೇರಣೆ, ದೃಷ್ಠಿಹೀನರ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮತ್ತಿತರ ಉದ್ದೇಶವನ್ನು ಟ್ರಸ್ಟ್‌ ಹೊಂದಿದೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada