»   » ‘ಕನ್ನಡ ಚಲನಚಿತ್ರ ಇತಿಹಾಸ’ ಪುಸ್ತಕ ಮಾರಾಟ ಸ್ಥಗಿತ - ಲಕ್ಕಪ್ಪಗೌಡ

‘ಕನ್ನಡ ಚಲನಚಿತ್ರ ಇತಿಹಾಸ’ ಪುಸ್ತಕ ಮಾರಾಟ ಸ್ಥಗಿತ - ಲಕ್ಕಪ್ಪಗೌಡ

Posted By: Staff
Subscribe to Filmibeat Kannada

ಬಳ್ಳಾರಿ : ಸ್ಯಾಂಡಲ್‌ವುಡ್‌ನ ಕೆಂಗಣ್ಣಿಗೆ ಗುರಿಯಾಗಿರುವ 'ಕನ್ನಡ ಚಲನಚಿತ್ರ ಇತಿಹಾಸ" ಕೃತಿಯ ಎರಡೂ ಸಂಪುಟಗಳ ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಹಂಪಿ ವಿಶ್ವ ವಿದ್ಯಾಲಯದ ಕುಲಪತಿ ಡಾ। ಎಚ್‌.ಜೆ.ಲಕ್ಕಪ್ಪಗೌಡ ತಿಳಿಸಿದ್ದಾರೆ.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ಅವರು'ಕನ್ನಡ ಚಲನಚಿತ್ರ ಇತಿಹಾಸ" ಸಂಪುಟಗಳ ಬಗ್ಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದರು. ಉದ್ಯಮದ ವಿವಿಧ ಪ್ರಮುಖರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಕೂಡ ಪುಸ್ತಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪುಸ್ತಕ ಮಾರಾಟವನ್ನು ವಿಶ್ವ ವಿದ್ಯಾಲಯ ಸ್ಥಗಿತಗೊಳಿಸಿದೆ.

ಗ್ರಂಥದಲ್ಲಿ ಇರಬಹುದಾದ ಆಕ್ಷೇಪಾರ್ಹ ಅಂಶಗಳ ಕುರಿತು ಪರಿಶೀಲನೆಗೆ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯ ಸದಸ್ಯರನ್ನಾಗಿ ಚಿತ್ರೋದ್ಯಮದ ತಜ್ಞರನ್ನು ನೇಮಿಸಲಾಗುವುದು. 1800 ಪುಟಗಳ ಎರಡೂ ಸಂಪುಟಗಳನ್ನು ಸಮಿತಿಯು ಪುನಃ ಪರಿಶೀಲಿಸುವುದು ಎಂದು ಲಕ್ಕಪ್ಪಗೌಡ ತಿಳಿಸಿದ್ದಾರೆ.

'ಕನ್ನಡ ಚಲನಚಿತ್ರ ಇತಿಹಾಸ" ಪುಸ್ತಕ ಪ್ರಕಟಣೆಗೆ ರಾಜ್ಯ ವಾರ್ತಾ ಇಲಾಖೆ 7 ಲಕ್ಷ ರುಪಾಯಿ ನೀಡಿದೆ. ಹಂಪಿ ವಿಶ್ವ ವಿದ್ಯಾಲಯ ಪುಸ್ತಕವನ್ನು ಪ್ರಕಟಿಸಿದ್ದರೂ, ಪುಸ್ತಕದಲ್ಲಿನ ಅಭಿಪ್ರಾಯಗಳು ಆಯಾ ಲೇಖಕರದ್ದು . ಪ್ರಸ್ತುತ ಉಂಟಾಗಿರುವ ವಿವಾದ ಕೂಡ ಆಯಾ ಲೇಖಕರಿಗೆ ಸಂಬಂಧಿಸಿದ್ದು ಎಂದು ಲಕ್ಕಪ್ಪಗೌಡ ಹೇಳಿದ್ದಾರೆ.
(ಇನ್ಫೋ ವಾರ್ತೆ)

English summary
Sandalwood : Sale of the book, History of kannada film industry has been stopped
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada