»   » ದೆಹಲಿಯಲ್ಲಿ ಪತಿ ಪತ್ನಿ ಮತ್ತು ಅವಳು!

ದೆಹಲಿಯಲ್ಲಿ ಪತಿ ಪತ್ನಿ ಮತ್ತು ಅವಳು!

Posted By: Staff
Subscribe to Filmibeat Kannada

ಕಳೆದ ವಾರ ದೇಶವಿಡೀ ಚುನಾವಣೆಯ ಜ್ವರದಲ್ಲಿ ಬೇಯುತ್ತಿರುವಾಗ ದೆಹಲಿ ಕನ್ನಡಿಗರು ಮಾತ್ರ ಸಿನಿಮಾ ನೋಡುವ ಮೂಡಿನಲ್ಲಿದ್ದರು. ಅಪರೂಪಕ್ಕೊಂದು ಹೊಚ್ಚ ಹೊಸ ಕನ್ನಡ ಸಿನಿಮಾ ನೋಡುವ ಅವಕಾ ಸಿಕ್ಕಿದ್ದು ಅವರ ಸಂಭ್ರಮಕ್ಕೆ ಕಾರಣವಾಗಿತ್ತು .

ಕರ್ನಾಟಕದಿಂದ ಸೀಮೋಲ್ಲಂಘನ ಮಾಡುವ ಕನ್ನಡ ಚಿತ್ರಗಳು ತೀರಾ ಅಪರೂಪವಾದುದರಿಂದ ಅನಿವಾಸಿ ಕನ್ನಡಿಗರಿಗೆ ತಂಗಳು ಚಿತ್ರಗಳೇ ಗತಿ. ಆಗೊಮ್ಮೆ ಈಗೊಮ್ಮೆ ಪ್ರಶಸ್ತಿ ವಿಜೇತ ಚಿತ್ರಗಳ ಪ್ರದರ್ಶನ ನಡೆಯುವುದಾದರೂ, ಅಂಥ ಸಂದರ್ಭಗಳು ಕಡಿಮೆ. ಹೀಗಾಗಿ ಇತ್ತೀಚೆಗೆ ನಡೆದ ಕನ್ನಡ ಚಿತ್ರವನ್ನು ನೋಡಿಲು ದೆಹಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಅಂದಹಾಗೆ, ದೆಹಲಿ ಕನ್ನಡಿಗರು ನೋಡಿದ ಚಿತ್ರ ಯಾವುದು ಗೊತ್ತಾ ?
- ಪಂಚತಾರಾ ಸಿನಿ ಮ್ಯಾಟ್ರಿಕ್‌ ಸಂಸ್ಥೆಯ 'ಪತಿ ಪತ್ನಿ ಮತ್ತು ಅವಳು'.

ದೆಹಲಿಯ ಕರ್ನಾಟಕ ಸಂಘ, ಬಂಟರ ಸಾಂಸ್ಕೃತಿಕ ಸಂಘ ಹಾಗೂ ಕರ್ನಾಟಕ ಭವನ 'ಪತಿ ಪತ್ನಿ ಮತ್ತು ಅವಳು' ಚಿತ್ರದ ಪ್ರದರ್ಶನವನ್ನು ಏರ್ಪಡಿಸಿದ್ದವು. ವೀಕ್ಷಕರಿಗೆ ಚಿತ್ರ, ಹಾಗೂ ಚಿತ್ರದ ನೆಪದಲ್ಲಿನ ಸ್ನೇಹಮಿಲನ ಇಷ್ಟವಾಯಿತು.

ಎನ್‌.ಎ.ಶಿವಕುಮಾರ್‌ ಹಾಗೂ ವಿಜಯ್‌ ಗುಜ್ಜಾರ್‌ 'ಪತಿ ಪತ್ನಿ ಮತ್ತು ಅವಳು' ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಥೆ ಹಾಗೂ ಚಿತ್ರಕಥೆ ಕೂಡ ಅವರದೇ. ರುಚಿತಾ ಪ್ರಸಾದ್‌, ಅಮೃತ, ರೂಪ, ಸಿ.ಆರ್‌.ಸಿಂಹ, ರಮೇಶ್‌ ಭಟ್‌ ಮುಂತಾದವರು ತಾರಾಗಣದಲ್ಲಿದ್ದಾರೆ.

English summary
'Pathi Pathni matthu Avalu', A Kannada film by Vijay Gujjar and Shivakumar screened in Delhi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada