»   » ಡೈಸಿ ಎಂಬ ಚಿಗರೆ ಮರಿ ಬಾಲಿವುಡ್‌ಗೆ ಹೋಯ್ತಲ್ಲಪ್ಪೋ...

ಡೈಸಿ ಎಂಬ ಚಿಗರೆ ಮರಿ ಬಾಲಿವುಡ್‌ಗೆ ಹೋಯ್ತಲ್ಲಪ್ಪೋ...

Posted By:
Subscribe to Filmibeat Kannada

‘ರಾಮ ಶಾಮ ಭಾಮ’ ಮತ್ತು ‘ತವರಿನ ಸಿರಿ’ ಸಿನಿಮಾಗಳ ಮೂಲಕ ತಾನೂ ನಟಿಸಬಲ್ಲೆ ಎಂಬುದನ್ನು, ‘ಸ್ಪೈಸಿ’ಗರ್ಲ್‌ ಡೈಸಿ ಬೊಪ್ಪಣ್ಣ ಸಾಬೀತುಪಡಿಸಿದ್ದಾರೆ. ಅವರೀಗ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಡೈಸಿಗೆ ಬಾಲಿವುಡ್‌ ಹೊಸತೇನಲ್ಲ. ಈ ಹಿಂದೆ ಅಕ್ಷಯ್‌ ಕುಮಾರ್‌ ಜೊತೆ ‘ಗರಂ ಮಸಾಲ’ ಚಿತ್ರದಲ್ಲಿ ಗರಂ ಆಗಿ ಮಿಂಚಿದ್ದರು. ಡೈಸಿಗೆ ಐದು ಹಿಂದಿ ಚಿತ್ರಗಳ ಆಫರ್‌ ಬಂದಿದ್ದು, ಅವುಗಳಲ್ಲಿ ಎರಡಕ್ಕೆ ಗ್ರೀನ್‌ಸಿಗ್ನಲ್‌ ನೀಡಿದ್ದಾರಂತೆ.

ಈ ಚಿತ್ರಗಳ ಬಗ್ಗೆ ಸದ್ಯಕ್ಕೆ ಏನನ್ನೂ ಮಾತನಾಡುವುದಿಲ್ಲ. ನಿರ್ಮಾಪಕರ ಕರಾರಿನ ಪ್ರಕಾರ, ಹೆಚ್ಚಿನ ವಿವರಗಳನ್ನು ನೀಡುವಂತಿಲ್ಲ. ಒಂದಂತೂ ನಿಜ, ನಾನು ಇಬ್ಬರು ಪ್ರಮುಖ ನಾಯಕರ ಜೊತೆ ನಟಿಸುತ್ತಿದ್ದೇನೆ. ಮುಂದಿನ ಜೂನ್‌-ಆಗಸ್ಟ್‌ನಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಡೈಸಿ ಪಿಸುಗುಟ್ಟಿದ್ದಾರೆ.

ಸ್ಪೈಸಿ ಎಂದು ಕರೆದರೆ ನನಗೆ ಇಷ್ಟವಾಗುವುದಿಲ್ಲ. ಚಿತ್ರಬದುಕು ಮತ್ತು ರಾಜ್‌ಕುಮಾರ್‌ ಬಗ್ಗೆ ನನಗೆ ಅಪಾರ ಗೌರವವಿದೆ ಎನ್ನುವ ಡೈಸಿ ಅವರ ಮುಂದಿನ ಕನ್ನಡ ಚಿತ್ರ ‘ಐಶ್ವರ್ಯ’. ಉಪೇಂದ್ರ ನಾಯಕನಟರಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ, ಡೈಸಿಗೊಂದು ಚೆಂದದ ಪಾತ್ರವಿದೆಯಂತೆ.

ಕೊಡಗಿನ ಬೆಡಗಿ ಡೈಸಿ, ಸ್ಯಾಂಡಲ್‌ವುಡ್‌ನಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದವರು. ಕವಿತಾ ಲಂಕೇಶ್‌ ನಿರ್ದೇಶನದ ಪ್ರಶಸ್ತಿ ವಿಜೇತ ಚಿತ್ರ ‘ಬಿಂಬ’ ದಲ್ಲಿ ಡೈಸಿ ನಟಿಸಿದರಾದರೂ, ಅವರಿಗೆ ಕುಖ್ಯಾತಿ ನೀಡಿದ ಚಿತ್ರ‘ಭಗವಾನ್‌’. ಅವರ ವರಸೆಗಳನ್ನು ಕಂಡು, ಪ್ರೇಕ್ಷಕರು ಡೈಸಿಗೆ ‘ಸ್ಪೈಸಿ’ ಎಂದು ಪ್ರೀತಿಯಿಂದ ಕರೆದಿದ್ದರು.

Post your views

ಡೈಸಿ ಬೊಪ್ಪಣ್ಣ ಗ್ಯಾಲರಿ


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada