»   » ‘ಸಂಜನಾ ಗಾಂಧಿ -ಈ ಹೆಸರಿಂದ ನನ್ನನ್ನು ಕೂಗಬೇಡಿ’

‘ಸಂಜನಾ ಗಾಂಧಿ -ಈ ಹೆಸರಿಂದ ನನ್ನನ್ನು ಕೂಗಬೇಡಿ’

Subscribe to Filmibeat Kannada


‘ಮುಂಗಾರು ಮಳೆ’ ನಾಯಕಿ ಸಂಜನಾ ಗಾಂಧಿ, ತಮ್ಮ ಹೆಸರು ಬದಲಿಸಿಕೊಳ್ಳಲು ಬಯಸಿದ್ದಾರೆ. ‘ನನ್ನನ್ನು ಎಲ್ಲರೂ ಪೂಜಾ ಗಾಂಧಿ ಎಂದು ಕರೆದರೆ ಖುಷಿಯಾಗುತ್ತದೆ’ ಎಂದು ಅವರು ಸ್ಪಷ್ಪಪಡಿಸಿದ್ದಾರೆ.

ಹೆಸರಲ್ಲಿ ಏನಿದೆ ಬಿಡಿ, ನಿಮ್ಮನ್ನು ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ ಅಷ್ಟು ಸಾಕಲ್ಲವೇ? ಅನ್ನೋ ಮಾತನ್ನು ಸಂಜನಾ ಒಪ್ಪುವುದಿಲ್ಲ. ‘ನನ್ನ ಅಸಲಿ ಹೆಸರು ಪೂಜಾ. ಹೀಗಾಗಿ ಮಾಧ್ಯಮಗಳು ಮತ್ತು ಅಭಿಮಾನಿಗಳು ದಯವಿಟ್ಟು ಪೂಜಾ ಗಾಂಧಿ ಎಂದೇ ಗುರ್ತಿಸಬೇಕು’ ಎಂಬುದು ಅವರ ವಿನಂತಿ. ಮತ್ತು ಇಷ್ಟ.

‘ಗಂಡ ಹೆಂಡತಿ’ ಚಿತ್ರದ ಕುಖ್ಯಾತ ಚುಂಬಕ ಚೆಲುವೆ ಸಂಜನಾಳಿಂದಾಗಿ, ಅಂದರೆ ಹೆಸರುಗಳಲ್ಲಿನ ಗೊಂದಲ ತಪ್ಪಿಸುವುದು ಸಂಜನಾ ಗಾಂಧಿಯ ಉದ್ದೇಶವೇ? -ಈ ಬಗ್ಗೆ ವಿವರಗಳು ಲಭ್ಯವಿಲ್ಲ.

‘ಮುಂಗಾರು ಮಳೆ’ ನಂತರ ಜಗ್ಗೇಶ್‌ರೊಂದಿಗೆ ‘ಕೋಡಗನ ಕೋಳಿ ನುಂಗಿತ್ತಾ..’ ಹಾಗೂ ಇತರೆ ಚಿತ್ರಗಳಲ್ಲಿ ಸಂಜನಾ ಗಾಂಧಿ, ಕ್ಷಮಿಸಿ ಪೂಜಾ ಗಾಂಧಿ ಸದ್ಯಕ್ಕೆ ಅಭಿನಯಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada