»   » ವಿನ್‌ಟಿವಿ ಕನ್ನಡ-ಲೋಗೋ ಉದ್ಘಾಟನೆ

ವಿನ್‌ಟಿವಿ ಕನ್ನಡ-ಲೋಗೋ ಉದ್ಘಾಟನೆ

Posted By: Staff
Subscribe to Filmibeat Kannada

ಕನ್ನಡ ಮಾಧ್ಯಮ ರಂಗದಲ್ಲಿ ಕ್ಷಿಪ್ರ ಗತಿಯ ಬೆಳವಣಿಗೆಯಾಗುತ್ತಿದೆ. ದಿನಪತ್ರಿಕೆಯಾಂದರ ಸೂರ್ಯೋದಯವಾದರೆ, ಟಿವಿ ಬಳಗಕ್ಕೆ ಇನ್ನೊಂದು ಸೇರ್ಪಡೆ.

ಬೆಂಗಳೂರಿನ ತಾಜ್‌ ರೆಸಿಡೆನ್ಸಿಯಲ್ಲಿ ವಿನ್‌ಟಿವಿ- ಕನ್ನಡ ಲೋಗೋ ಉದ್ಘಾಟನಾ ಸಮಾರಂಭ ನೆರವೇರಿತು. ಟಿವಿ ಚಾನೆಲ್‌ಗಳಲ್ಲಿ ಈಗೀಗ ದೇಶಭಕ್ತಿಯ ಮತ್ತು ಶೈಕ್ಷಣಿಕ ವಿಚಾರಗಳು ಕಡಿಮೆಯಾಗಿವೆ ಎಂದು ವರ್ತೂರಿನ ಶಾಸಕ ಎ ಕೃಷ್ಣಪ್ಪ ಟಿವಿಯ ಲೋಗೋ ಬಿಡುಗಡೆ ಮಾಡಿ ಹೇಳಿದರು. ಅವರಿಗೂ ವಿನ್‌ಬಳಗಕ್ಕೂ ಹಳೆಯ ನಂಟು.

ವಿನ್‌ ಬಳಗದ ದೇವನಾಥನ್‌ ಮಾತನಾಡಿ ಸದ್ಯದ ಪರಿಸ್ಥಿತಿಯಲ್ಲಿ ಚಾನೆಲ್‌ಗಳಲ್ಲಿ ಸಿನಿಮಾ ಮತ್ತು ಮೆಗಾ ಧಾರವಾಹಿಗಳೇ ಹೆಚ್ಚಾಗಿ ಬರುತ್ತಿದೆ. ಆದರೆ ನಮ್ಮ ಟಿವಿಯು ಗ್ರಾಮೀಣ ವಿಚಾರ ಮತ್ತು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಿದೆ ಎಂದು ತಿಳಿಸಿದರು. ಈ ಚಾನೆಲ್‌ ಗಲ್ಫ್‌ ಭಾರತೀಯರಿಗಾಗಿ ವಿಶೇಷ ವಾರ್ತೆಯನ್ನು ಹೊಂದಲಿದೆ. ಟಿವಿಯ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ನಟರಾಜ ಕಾನಗೋಡು ಕಾರ್ಯನಿರ್ವಹಿಸಲಿದ್ದಾರೆ. ವಿನ್‌ಟಿವಿಯು ಜೂನ್‌30ರಿಂದ ಕಾರ್ಯ ನಿರ್ವಹಿಸುವ ನಿರೀಕ್ಷೆಯಿದೆ.

English summary
Inauguration of WINtv kannada channels logo
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada