»   » ಆಗಸ್ಟ್‌ನಲ್ಲಿ ‘ಜೋಗಿ’ ಜಾತ್ರೆ!

ಆಗಸ್ಟ್‌ನಲ್ಲಿ ‘ಜೋಗಿ’ ಜಾತ್ರೆ!

Posted By:
Subscribe to Filmibeat Kannada
  • ದಟ್ಸ್‌ ಕನ್ನಡ ಸಿನಿಡೆಸ್ಕ್‌
‘ಜೋಗಿ’ ಚಿತ್ರ ಬಿಡುಗಡೆಗೆ ಮೊದಲೇ ಸಂಚಲನ ಉಂಟುಮಾಡಿದೆ. ‘ಜೋಗಿ’ ಜ್ವರ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕಡೆಗೂ ವರಲಕ್ಷ್ಮಿ ಹಬ್ಬ(ಆಗಸ್ಟ್‌ 19)ಕ್ಕೆ ಚಿತ್ರ ತೆರೆ ಕಾಣುತ್ತಿದೆ.

ಅಶ್ವಿನಿ ಸ್ಟುಡಿಯೋದ ರಾಮ್‌ಪ್ರಸಾದ್‌ ಅವರು ಆಡಿಯೋ ಕ್ಷೇತ್ರದಂತೆಯೇ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರುವ ಲಕ್ಷಣಗಳು ಕಾಣಿಸುತ್ತಿವೆ. ‘ಎಕ್ಸ್‌ಕ್ಯೂಸ್‌ ಮಿ’ ಮತ್ತು ‘ಕರಿಯ’ ಚಿತ್ರದ ನಿರ್ದೇಶಕ ಪ್ರೇಮ್‌‘ಜೋಗಿ’ ಮೂಲಕ ಸ್ಟಾರ್‌ವ್ಯಾಲ್ಯು ಪಡೆದಿದ್ದಾರೆ. ಜೊತೆಗೆ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಚಿತ್ರದ ನಾಯಕನ ಪಾತ್ರಕ್ಕೆ ಪ್ರೇಮ್‌ ಬಡ್ತಿ ಪಡೆದಿದ್ದಾರೆ.

ಚಿತ್ರದಲ್ಲಿ ಗುರುಕಿರಣ್‌ ಅವರ ಸಂಗೀತ ಹುಚ್ಚೆದ್ದು ಕುಣಿಸುವಂತಿದೆ ಎನ್ನುವ ಅಭಿಮಾನಿಗಳು, ಕ್ಯಾಸೆಟ್‌ ಮಾರಾಟದ ದಾಖಲೆಗೆ ಕಾರಣಕರ್ತರಾಗಿದ್ದಾರೆ. ಎರಡು ಲಕ್ಷ ಕ್ಯಾಸೆಟ್‌ ಮತ್ತು 60ಸಾವಿರ ಸಿಡಿಗಳು ಮಸಾಲೆದೋಸೆಯಂತೆ ಮಾರಾಟವಾಗಿವೆ.

ಚಿತ್ರದ ಹಾಡುಗಳ ರಿಂಗ್‌ ಟೋನ್‌ ಈಗಾಗಲೇ ಎಲ್ಲರ ಮೊಬೈಲ್‌ಗಳಲ್ಲಿ ರಿಂಗುಣಿಸುತ್ತಿದೆ. ಹೌದು ಕೇವಲ 1.20ಪೈಸೆಗೆ ‘ಜೋಗಿ’ ಹಾಡುಗಳನ್ನು ಮೊಬೈಲ್‌ನಲ್ಲಿ ಕೇಳಬಹುದು! ಚಿತ್ರದ ಮತ್ತೊಂದು ವಿಶೇಷ ಅರುಂಧತಿ ನಾಗ್‌. ಬಹುದಿನಗಳ ನಂತರ ಅವರು ಸಿನಿಮಾದಲ್ಲಿ ಮುಖಕ್ಕೆ ಬಣ್ಣಹಚ್ಚಿದ್ದಾರೆ.

ಶಿವರಾಜ್‌ ಕುಮಾರ್‌ ಅಭಿಮಾನಿಗಳು ಚಿತ್ರದ ಬಗ್ಗೆ ಕಾತರಗೊಂಡಿದ್ದಾರೆ.ಯಾನ ಗುಪ್ತಾಳ ಐಟಂ ಸಾಂಗ್‌ ಒಂದು ಕಡೆಯಾದರೆ, ನಾಯಕಿ ಜೆನ್ನಿಫರ್‌ ಕೊತ್ವಾಲ್‌ ಪಡ್ಡೆ ಹುಡುಗರನ್ನು ಚಿತ್ರ ಬಿಡುಗಡೆಗೆ ಮೊದಲೇ ಕಾಡುತ್ತಿದ್ದಾಳೆ!

ಕರ್ನಾಟಕ ಹಾಗೂ ನೆರೆಯ ರಾಜ್ಯಗಳು ಸೇರಿದಂತೆ ಚಿತ್ರ ಅಮೆರಿಕದಲ್ಲೂ ಏಕಕಾಲದಲ್ಲಿ ತೆರೆಕಾಣಲಿದೆ. ‘ಜೋಗಿ’ಚಿತ್ರದ ರಿಮೇಕ್‌ ಹಕ್ಕುಗಳಿಗಾಗಿ ತೆಲುಗು ಮತ್ತು ತಮಿಳು ಚಿತ್ರರಂಗದಿಂದ ಬೇಡಿಕೆಗಳು ಬಂದಿವೆ. ಜೋಗಿ ಜಾತ್ರೆ ಕಳೆಕಟ್ಟುವುದೇ? ಕಾದು ನೋಡೋಣ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada