»   » ಇಶಾ ಡಿಯೋಲ್‌ 50 ಲಕ್ಷ ಕೇಳಿದಳಂತೆ

ಇಶಾ ಡಿಯೋಲ್‌ 50 ಲಕ್ಷ ಕೇಳಿದಳಂತೆ

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಮಗ ದುಷ್ಯಂತನಿಗೆ ಮೊದಲಿಂದಲೇ ಬಾಲಿವುಡ್‌ ಸಹವಾಸ ದಕ್ಕಿಸಿಕೊಡುತ್ತಿರುವ ರಾಜೇಂದ್ರ ಸಿಂಗ್‌ ಬಾಬು ‘ಲವ್‌’ ಚಿತ್ರದ ನಾಯಕಿಯಾಗಿ ಮೊದಲು ಗೊತ್ತುಮಾಡಲು ಹೋಗಿದ್ದು ಹೇಮಮಾಲಿನಿ ಮಗಳು ಇಶಾ ಡಿಯೋಲ್‌ಳನ್ನು.

ಬಾಲಿವುಡ್‌ ಬೆಡಗಿ ಇಶಾಳನ್ನೇ ನಾಯಕಿಯಾಗಿ ಆರಿಸಬೇಕೆಂದು ವೇದಿಕೆ ಹಾಕಿಕೊಂಡಿದ್ದ ಕಾರಣಕ್ಕೇ ‘ಲವ್‌’ ಚಿತ್ರ ಲಾಂಚ್‌ ಆದ ಸಮಾರಂಭಕ್ಕೆ ಬಂದಿದ್ದ ಮುಖ್ಯ ಆಹ್ವಾನಿತರ ಪೈಕಿ ಹೇಮಮಾಲಿನಿ ಕೂಡ ಇದ್ದರು ಅಂತ ಗಾಂಧಿನಗರ ಮಾತಾಡುತ್ತಿದೆ. ಇಷ್ಟೆಲ್ಲ ಆದರೂ ಕೊನೆಗೆ ಸಿಂಗ್‌ ಬಾಬು ರಕ್ಷಿತಾಳನ್ನು ನಾಯಕಿಯಾಗಿ ಮಾಡಿದ್ದು ಯಾಕೆ?

ಯಾಕೆಂದರೆ, ರಕ್ಷಿತ ತೆಲುಗಲ್ಲಿ ಈಗ ಕ್ಲಿಕ್ಕು. ಕನ್ನಡದಲ್ಲೂ ಪರವಾಗಿಲ್ಲ. ದುಷ್ಯಂತನ ‘ಲವ್‌’ ಚಿತ್ರ ಎರಡೂ ಭಾಷೆಗಳಲ್ಲಿ ಬರುತ್ತಿರುವುದರಿಂದ ರಕ್ಷಿತ ಬೆಸ್ಟ್‌ ಆಯ್ಕೆ ಅನ್ನೋದು ಸಿಂಗ್‌ ಬಾಬುಗೆ ಹೊಳೆದಿದೆ. ಅದಕ್ಕೂ ಮುಂಚೆ ಇಶಾ ಡಿಯೋಲ್‌ ಕೇಳಿದ ಸಂಭಾವನೆಯಿಂದ ಬಾಬುಗೆ ಜ್ಞಾನೋದಯವಾಗಿದೆ.

ಅಂದಹಾಗೆ, ಇಶಾ ಕೇಳಿದ ಸಂಭಾವನೆ ಬರೀ 50 ಲಕ್ಷ ರುಪಾಯಿಯಂತೆ. ನಮ್ಮ ಮೀಸೆ ಗೆಟಪ್ಪಿನ ತರಾವರಿ ಸಿಂಹ ವಿಷ್ಣುವರ್ಧನ್‌ಗೇ ಈ ಪಾಟಿ ರೇಟಿಲ್ಲವಲ್ರೀ ಅಂದುಕೊಂಡ ಬಾಬು ಮತ್ತೆ ಇಶಾ ಡಿಯೋಲ್‌ಗೆ ಫೋನು ಮಾಡುವ ಸಾಹಸಕ್ಕೂ ಕೈಹಾಕಲಿಲ್ಲವಂತೆ.

ಚಿತ್ರಕ್ಕೆ ಅನು ಮಲ್ಲಿಕ್‌ ಕೈಲಿ ಸಂಗೀತ ಕೊಡಿಸುತ್ತಿರುವುದು, ಬಾಲಿವುಡ್‌ನಲ್ಲಿ ಚಿತ್ರದ ಬಗ್ಗೆ ಪ್ರಚಾರ ನಡೆಸುತ್ತಿರುವುದನ್ನು ನೋಡಿದರೆ ಸಿಂಗ್‌ ಬಾಬು ಅವರಿಗೆ ದುಷ್ಯಂತ್‌ನನ್ನು ಹೃತಿಕ್‌ ರೋಷನ್‌ ಪಕ್ಕ ನಿಲ್ಲಿಸುವ ಯೋಚನೆಯಿದೆ ಅನ್ನಿಸುತ್ತದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...