»   » ಸಿನಿಮಾಗಳಲ್ಲಿ ಧೂಮಲೀಲೆ ನಿಷೇಧಿಸದಂತೆ ಆಗ್ರಹ

ಸಿನಿಮಾಗಳಲ್ಲಿ ಧೂಮಲೀಲೆ ನಿಷೇಧಿಸದಂತೆ ಆಗ್ರಹ

Subscribe to Filmibeat Kannada

ಬೆಂಗಳೂರು : ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ, ಸಿನಿಮಾಗಳಲ್ಲಿ ಸಿಗರೇಟ್‌ ಸೇವನೆ ದೃಶ್ಯಗಳನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿದ್ದು, ನಿರ್ಧಾರವನ್ನು ಮರುಪರಿಶೀಲಿಸಲು ಆಗ್ರಹಿಸಿದೆ.

ನಗರದಲ್ಲಿ ಸಭೆ ಸೇರಿದ್ದ ಕಾರ್ಯಕಾರಿ ಮಂಡಳಿ ಈ ನಿರ್ಣಯವನ್ನು ಕೈಗೊಂಡಿದೆ. ಈ ನಿಷೇಧದಿಂದ ನಿರ್ದೇಶಕರ ಸ್ವಾತಂತ್ರ್ಯಮೊಟಕಾಗಲಿದೆ ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು ಸಭೆ ನಂತರ ಸುದ್ದಿಗಾರರಿಗೆ ತಿಳಿಸಿದರು.

ಅಲ್ಲದೇ ಸೆನ್ಸಾರ್‌ ಮಂಡಳಿ ಸದಸ್ಯರ ನೇಮಕಾತಿಯಲ್ಲಿ ಶೇ.50ರಷ್ಟು ಚಿತ್ರೋದ್ಯಮಕ್ಕೆ ಸಂಬಂಧಿಸಿದವರನ್ನೇ ಪರಿಗಣಿಸುವಂತೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಣಯ ಕೈಗೊಂಡಿದೆ.

ಮಂಡಳಿಯ ಅಧ್ಯಕ್ಷ ಶ್ರೀನಿವಾಸನ್‌ ಮತ್ತು ಸದಸ್ಯರು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಅವರನ್ನು ಭೇಟಿ ಮಾಡಿ, ಚಿತ್ರೋದ್ಯಮಕ್ಕೆ ಸರ್ಕಾರ ನೀಡಿರುವ ಸೌಲಭ್ಯಗಳಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಡಾ.ರಾಜ್‌ಕುಮಾರ್‌ ನಿವಾಸಕ್ಕೆ ತೆರಳಿದ ಮಂಡಳಿ, ರಾಜ್‌ರ ಐದು ದಶಕಗಳ ಸಿನಿ ಸಾಧನೆಯನ್ನು ಶ್ಲಾಘಿಸಿ, ಸನ್ಮಾನಿಸಿತು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada