»   » ಹಂಸ ನಡಿಗೆಯ ಹಂಸಿಕಾ ಕಾಲ್ಗುಣ ಸುಪರ್ರೋ ಸೂಪರ್ರು!

ಹಂಸ ನಡಿಗೆಯ ಹಂಸಿಕಾ ಕಾಲ್ಗುಣ ಸುಪರ್ರೋ ಸೂಪರ್ರು!

Subscribe to Filmibeat Kannada


ಈಕೆ ಕಾಲಿಟ್ಟಲ್ಲೆಲ್ಲ ಕಾಂಚಾಣದ ಸುರಿಮಳೆ, ಹೆಜ್ಜೆ ಹಾಕಿದಲ್ಲೆಲ್ಲ ಚಪ್ಪಾಳೆಗಳ ಬಿರುಮಳೆ. ಈಕೆ ಹಂಸ ನಡಿಗೆಯ ಹಂಸಿಕಾ ಮೋತ್ವಾನಿ. ಮೊನ್ನೆ ಮೊನ್ನೆ ತಾನೆ ಕೋಯಿ ಮಿಲ್‌ಗಯಾ ಚಿತ್ರದಲ್ಲಿ ಬಾಲೆಯಾಗಿ ನಟಿಸಿದ್ದ ಹುಡುಗಿ, ಈಗ ಎಲ್ಲರೂ ಆಶ್ಚರ್ಯ ಪಡುವಷ್ಟು ಪ್ರಬುದ್ಧ ನಟಿಯಂತೆ ಸೊಂಟವನ್ನು ಬಳುಕಿಸುತ್ತಿದ್ದಾಳೆ.ಈಕೆ ಈಗ ಪುನೀತ್ ಚಿತ್ರದ ನಾಯಕಿ.

ಬಂಗಾರದ ಕಾಲ್ಗಳ ನಟಿಎಂದೇ ಎಲ್ಲೆಡೆ ಬಣ್ಣಿತವಾಗುತ್ತಿರುವ ಹಂಸಿಕಾ ನಟನೆಯ ಚಿತ್ರಗಳೆಲ್ಲ ಸೂಪರ್ ಹಿಟ್. ಅನುನಾಸಿಕ ಗಾಯಕ ಹಿಮೇಶ್ ರೇಶ್ಮಿಯಾನೊಂದಿಗೆ ನಟಿಸುತ್ತಿರುವ ಆಪ್ ಕಾ ಸುರೂರ್ ಚಿತ್ರ ಈ ವರ್ಷದ ಸೂಪರ್ ಹಿಟ್ ಎಂಬ ಹಣೆಪಟ್ಟಿ ಗಿಟ್ಟಿಸಿಕೊಂಡಿದೆ.

ಹಿಂದಿಯಲ್ಲೇ ಅಭೂತಪೂರ್ವ ಆಫರ್‌ಗಳು ಬರುತ್ತಿದ್ದರೂ ಕಾಲು ಮಡಿಚಿಕೊಂಡು ಕೂಡದೆ, ತನ್ನ ಬಂಗಾರದ ಕಾಲ್ಗಳನ್ನು ದಕ್ಷಿಣ ಚಿತ್ರರಂಗದಲ್ಲಿಯೂ ಇರಿಸಿದ್ದಾಳೆ ಈ ಜಾಣೆ. ಪೂರಿ ಜಗನ್ನಾಥ್ ನಿರ್ದೇಶನದ ಅಲ್ಲು ಅರ್ಜುನ್ ನಟನೆಯ ದೇಶಮುಡುಎಲ್ಲೆಡೆ ಜಯಭೇರಿ ಬಾರಿಸುತ್ತಿದೆ. ಹಂಸಿಕಾಳ ಅದ್ಭುತ ನರ್ತನದಿಂದಲೇ ಚಿತ್ರ ಓಡುತ್ತಿದೆಯೆಂಬ ಮಾತುಗಳು ಕೇಳಿಬರುತ್ತಿವೆ.

ಈಕೆಯ ಕಾಲ್ಚಳಕವನ್ನು ಅರಿತ ಪುನೀತ್ ರಾಜಕುಮಾರ್ ತಮ್ಮ ಮುಂದಿನ ಚಿತ್ರ ಬಿಂದಾಸ್‌ಗೆ ಹಂಸಿಕಾಳನ್ನು ತಂದಿದ್ದಾರೆ.

ರೇಶ್ಮಿಯಾನ ನಾಸಿಕೋಪದೇಶದಂತೆ ಹಂಸಿಕಾ ಎಂಬ ಹೆಸರಲ್ಲಿ ಒಂದೆರಡು ಅಕ್ಷರಗಳನ್ನು ಸೇರಿಸಿಕೊಂಡಿದ್ದೇ ತನ್ನ ಅದೃಷ್ಟದ ಬಾಗಿಲು ತೆರೆದಿದೆ ಎಂದು ಹಂಸಿಕಾ ನಂಬಿದ್ದಾಳೆ. ಇಂಗ್ಲಿಷ್ ಸ್ಪೆಲ್ಲಿಂಗ್‌ನಲ್ಲಿ ಎರಡಕ್ಷರ ಹೆಚ್ಚಿಗೆಯಾದರೇನಂತೆ ಕನ್ನಡದಲ್ಲಿ ಹಂಸಿಕಾ ಹಂಸಿಕಾನೇ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada