»   » ಜೈಲಿಂದ ಹೊರಬಂದ ಮೋನಿಕಾ ಕಣ್ಣಲ್ಲೀಗ ನೂರು ಕನಸು!

ಜೈಲಿಂದ ಹೊರಬಂದ ಮೋನಿಕಾ ಕಣ್ಣಲ್ಲೀಗ ನೂರು ಕನಸು!

Subscribe to Filmibeat Kannada


ಹೈದರಾಬಾದ್‌, ಜುಲೈ 25 : ಭೂಗತ ಪಾತಕಿ ಅಬು ಸಲೇಂ ಪ್ರಿಯತಮೆ ಮತ್ತು ನಟಿ ಮೋನಿಕಾ ಬೇಡಿ ಬುಧವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.ತಮ್ಮ ಮುಂದಿನ ದಿನಗಳ ಬಗ್ಗೆ ಮೋನಿಕಾ ಕನಸು ಕಟ್ಟಿದ್ದಾರೆ.

ನಕಲಿ ಪಾಸ್‌ಪೋರ್ಟ್ ಪ್ರಕರಣವೊಂದರ ಹಿನ್ನೆಲೆಯಲ್ಲಿ 3 ವರ್ಷ ಸೆರೆಮನೆವಾಸಕ್ಕೆ ಗುರಿಯಾಗಿದ್ದ ಅವರು, ಚೆಂಚಲಗುಡ್ಡ ಮಹಿಳಾ ಕಾರಾಗೃಹದಲ್ಲಿಇರಿಸಲ್ಪಟ್ಟಿದ್ದರು. ತಂದೆ ಪ್ರೇಮ್‌ಕುಮಾರ್ ಬೇಡಿ, ಚಿಕ್ಕಪ್ಪ ಪುರುಷೋತ್ತಮ್ ಬೇಡಿ ಮೋನಿಕಾರನ್ನು ಬುಧವಾರ ಬರಮಾಡಿಕೊಂಡರು.

ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿರುವುದರಿಂದ, ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಲಯ ಮಂಗಳವಾರ ಬಿಡುಗಡೆಗೆ ಆದೇಶಿಸಿತ್ತು.

ಚಿತ್ರರಂಗದಲ್ಲಿ ಮುಂದುವರಿಯುವೆ...

ಜೈಲಿನಿಂದ ಬಿಡುಗಡೆಯಾದ ಖುಷಿಯಲ್ಲಿದ್ದ ಮೋನಿಕಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಾಲಿವುಡ್ ಹಾಗೂ ಟಾಲಿವುಡ್(ತೆಲುಗು ಚಿತ್ರರಂಗ)ನಿಂದ ಅವಕಾಶಗಳು ಬರುತ್ತಿವೆ. ಹಾಗಾಗಿ ಚಿತ್ರರಂಗದಲ್ಲಿ ಮುಂದುವರಿಯುವ ಆಸಕ್ತಿಯಿದೆ ಎಂದು ಹೇಳಿದರು.

ಈ ಪ್ರಕರಣದಿಂದ ಪಾಠ ಕಲಿತಿದ್ದೇನೆ.ಭವಿಷ್ಯದಲ್ಲಿ ಹುಷಾರಾಗಿರುತ್ತೇನೆ. ಇನ್ನುಮುಂದೆ ನನ್ನ ಜೀವನದಲ್ಲಿ ಇಂತಹ ಘಟನೆಗಳು ಮರುಕಳಿಸುವುದಿಲ್ಲ. ಈಗ ನಾನು ಸಂತಸದಲ್ಲಿದ್ದೇನೆ. ಇದಕ್ಕಾಗಿ ದೇವರಿಗೆ ಕೃತಜ್ಞಳಾಗಿದ್ದೇನೆ ಎಂದು ತಿಳಿಸಿದರು.

ಸದ್ಯಕ್ಕೆ ಮದುವೆಯಾಗಲಾರೆ. ನನ್ನ ವೃತ್ತಿಯ ಕಡೆಗೆ ಗಮನ ಹರಿಸುತ್ತೇನೆ. ಕೆಲದಿನಗಳ ಮಟ್ಟಿಗೆ ನನ್ನ ಕುಟುಂಬದೊಡನೆ ಕಾಲಕಳೆಯುತ್ತೇನೆ. ಆನಂತರ ಪಾತ್ರಗಳನ್ನು ಆಯ್ದುಕೊಂಡು ಅಭಿನಯಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಜೈಲಿನಲ್ಲಿ ಹೆಚ್ಚು ಕಾಲ ಪುಸ್ತಕ ಓದುತ್ತಿದ್ದ ಮೋನಿಕಾ, ಇತರೆ ಕೈದಿಗಳಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದರು.

(ಯುಎನ್ಐ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada