»   » ನಾಟಕದ ನಟನೆಗೂ ರಾಧಿಕಾ ಸೈ

ನಾಟಕದ ನಟನೆಗೂ ರಾಧಿಕಾ ಸೈ

Posted By: Super
Subscribe to Filmibeat Kannada
  • ಸಿನಿಮಾಗಳಲ್ಲಿ ಅವಕಾಶ ಸಿಗದಿದ್ದರೆ, ನಾಟಕಗಳಲ್ಲಿ ನಟಿಸುವುದಾಗಿ ರಾಧಿಕಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅಲ್ಲದೇ 'ರೋಡಿಗಿಳಿದ ರಾಧಿಕಾ ..." ಎಂದು ಯಾರಾದರೂ ರಸ್ತೆಯಲ್ಲಿ ಚುಡಾಯಿಸಿದರೆ, ಆಕೆಗೆ ಖುಷಿ ಬೇರೆ ಆಗುತ್ತಂತೆ!
  • ಸಿನಿಮಾ ಬೋರ್‌ ಆಗಿದೆ. ಸ್ವಲ್ಪ ದಿನ ರೆಸ್ಟ್‌ ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದ ನಟಿ ರಮ್ಯ, ದರ್ಶನ್‌ ಜೊತೆಯಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ನಾಗಣ್ಣ ಈ ಚಿತ್ರದ ನಿರ್ದೇಶಕರು.
  • ಫ್ಯಾಂಟಸಿ ಪ್ರಯೋಗಗಳು ಸಾಕು, ಇನ್ನು ಮುಂದೆ ರಿಯಲಿಸ್ಟಿಕ್‌ ಚಿತ್ರದ ಕತೆಯನ್ನು ಹೇಳೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ನಟ-ನಿರ್ದೇಶಕ ರವಿಚಂದ್ರನ್‌. ಅವರ 'ಪಾಂಡುರಂಗವಿಠಲ" ಸದ್ಯದಲ್ಲಿಯೇ ತೆರೆಗೆ ಬರಲಿದೆ.
  • ಮಚ್ಚಿನ ಚಿತ್ರಗಳ ನಡುವೆ ಬಂದ 'ಅಮೃತಧಾರೆ" ಚಿತ್ರ ಗೆದ್ದಿದೆ. ಚಿತ್ರದ ಯಶಸ್ಸಿನಿಂದ ಾಗತಿಹಳ್ಳಿ ಖುಷಿಯಲ್ಲಿದ್ದಾರೆ. ಚಿತ್ರ ನೋಡಿದ ರವಿಚಂದ್ರನ್‌ ನಾಗತಿಗೆ ಥ್ಯಾಂಕ್ಸ್‌ ಮೇಲೆ ಥ್ಯಾಂಕ್ಸ್‌ ಹೇಳಿದ್ದಾರೆ!
  • 'ಜೋಗಿ" ಯಶಸ್ಸಿನಿಂದ ಪ್ರೇಮ್‌ ಒಂದು ಗೇಣು ಬೆಳೆದಿದ್ದಾರೆ. ಅವರ ಮುಂದಿನ ಚಿತ್ರ 'ಪ್ರೀತಿ ಏಕೆ ಭೂಮಿ ಮೇಲಿದೆ" ಚಿತ್ರದಲ್ಲಿ ಅವರು ನಾಯಕರಾಗಿ ನಟಿಸುತ್ತಿಲ್ಲವಂತೆ!
  • ಬೆಳ್ಳಿ ತೆರೆಯಲ್ಲಿ ಅವಕಾಶವಿಲ್ಲದೇ ಉಮೇಶ್‌, ಮನದೀಪ್‌ ರಾಯ್‌, ಡಿಂಗ್ರಿ ನಾಗರಾಜ್‌, ಬ್ಯಾಂಕ್‌ ಜನಾರ್ದನ ಸೇರಿದಂತೆ ವಿವಿಧ ಹಾಸ್ಯ ನಟರು ಕಿರುತೆರೆಯಲ್ಲಿ ಅನ್ನದಾತರನ್ನು ಹುಡುಕುತ್ತಿದ್ದಾರೆ.
  • ರಿಮೇಕ್‌ ಚಿತ್ರಗಳನ್ನು ರಾಜ್ಯ ಸರ್ಕಾರದ ಪ್ರಶಸ್ತಿಗಳಿಗೆ ಆಯ್ಕೆ ಮಾಡುವುದಿಲ್ಲ. ಆದರೆ 'ಗೌಡ್ರು" ಚಿತ್ರ ಈ ನಿಯಮದಿಂದ ವಿನಾಯಿತಿ ಪಡೆದಿದೆ! ಆಯ್ಕೆ ಸಮಿತಿಯವರಿಗೆ ಈ ಚಿತ್ರ ರಿಮೇಕ್‌ ಎಂಬುದು ಗೊತ್ತಿರಲಿಲ್ಲವಂತೆ
English summary
Success of Amritadhare and Jogi has put Nagati and Prem hot favourites. Tired Ramya signs another one with Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada