»   » ಇಂದ್ರಜಿತ್‌ ಹುಟ್ಟುಹಬ್ಬದಲ್ಲಿ ‘ಐಶ್ವರ್ಯ’ಳ ಧ್ಯಾನ!

ಇಂದ್ರಜಿತ್‌ ಹುಟ್ಟುಹಬ್ಬದಲ್ಲಿ ‘ಐಶ್ವರ್ಯ’ಳ ಧ್ಯಾನ!

Subscribe to Filmibeat Kannada

ಇಂದ್ರಜಿತ್‌ ಲಂಕೇಶ್‌ ಅವರ ಹುಟ್ಟುಹಬ್ಬದಲ್ಲಿ ಎರಡು ವಿಶೇಷತೆಗಳಿದ್ದವು. ಬಡ ಮತ್ತು ಅಂಗವಿಕಲ ಮಕ್ಕಳಿಗೆ ಪುಸ್ತಕ-ಬಟ್ಟೆ ವಿತರಣೆಯಂತಹ ಕಲ್ಯಾಣ ಕಾರ್ಯಗಳು ಬೆಳಗ್ಗೆ ನಡೆದವು. ಸಂಜೆ ಪತ್ರಕರ್ತರಿಗೆ ಭರ್ಜರಿ ಪಾರ್ಟಿ ನೀಡಿ, ಹುಟ್ಟುಹಬ್ಬವನ್ನು ಅವರು ಸಾರ್ಥಕಪಡಿಸಿಕೊಂಡರು!

ಅವರ ಹುಟ್ಟುಹಬ್ಬದ ಖುಷಿ ಇಮ್ಮಡಿಗೊಳಿಸಿದ್ದು, ‘ಐಶ್ವರ್ಯ’ ಗೆಲುವು. ತಮ್ಮ ಮಿರಮಿರ ಹೊಳೆವ ಬೋಳು ತಲೆಯಾಂದಿಗೆ, ಕನಕಾಂಬರ ಬಣ್ಣದ ಕೋಟಿನಲ್ಲಿ ಲವ್ವರ್‌ ಬಾಯ್‌ನಂತೆ ಇಂದ್ರಜಿತ್‌ ಪಾರ್ಟಿಯಲ್ಲಿ ಮಿಂಚುತ್ತಿದ್ದರು. ನಂತರ ಮಾತು ಆರಂಭಿಸಿದ ಅವರು, ಸ್ಯಾಂಡಲ್‌ವುಡ್‌ನಲ್ಲಿ ‘ಐಶ್ವರ್ಯ’ ಹೇಗೆಲ್ಲ ಮಿಂಚುತ್ತಿದೆ. ಏನೆಲ್ಲ ಸಂಚಲನ ಹುಟ್ಟಿಸಿದೆ ಅನ್ನುವುದರ ಬಗ್ಗೆ ಪುಟ್ಟದೊಂದು ಭಾಷಣ ಬಿಗಿದರು.

‘ಐಶ್ವರ್ಯ’ಳನ್ನು ಪ್ರಶಂಸಿಸಿ ವಿಮರ್ಶೆ ಬರೆದು, ಚಿತ್ರದ ಗೆಲುವಿಗೆ ನೀವೂ ಕಾರಣರಾಗಿದ್ದೀರಿ ಎಂದು ಪತ್ರಕರ್ತರಿಗೆ ಧನ್ಯವಾದ ಅರ್ಪಿಸಿದರು. ಆ ಮೂಲಕ ತಮ್ಮ ಯಶಸ್ಸಿನಲ್ಲಿ ಪಾಲು ನೀಡಿದರು. ನಂತರ ತಮ್ಮ ವೃತ್ತಿ ಬಾಂಧವರೊಂದಿಗೆ ಗ್ರೂಪ್‌ ಪೋಟೊ ತೆಗೆಸಿಕೊಂಡರು.

ಜನಪ್ರಿಯ(?) ಚಿತ್ರವನ್ನು ತಯಾರಿಸೋದು ಹೇಗೆ? ಚಿತ್ರ ಗೆಲ್ಲಿಸೋಕೆ ತಂತ್ರ ಹೂಡೋದು ಹೇಗೆ ಎಂಬ ರಹಸ್ಯಗಳು ಸ್ವಯಂ ಘೋಷಿತ ‘ಸ್ಟಾರ್‌ ನಿರ್ದೇಶಕ’ ಇಂದ್ರಜಿತ್‌ಲಂಕೇಶ್‌ಗೆ ಕರಗತವಾಗಿವೆ. ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಚಿತ್ರರಂಗದ ಗ್ಲ್ಯಾಮರ್‌ ಮತ್ತು ಗ್ರಾಮರ್‌ ಎರಡೂ ಅವರಿಗೆ ಗೊತ್ತು. ಇಂಥ ಇಂದ್ರಜಿತ್‌, ಜನಪ್ರಿಯ(?) ಚಿತ್ರಗಳನ್ನು ಇನ್ನಷ್ಟು ನಿರ್ದೇಶಿಸಲಿ. ಮಧ್ಯೆ ಮಧ್ಯೆ ಜನಹಿತ ಚಿತ್ರಗಳನ್ನೂ ನೀಡಲಿ ಎಂಬುದು ನಮ್ಮ ಆಶಯ. ಜೊತೆಗೆ ಹುಟ್ಟುಹಬ್ಬದ ಶುಭಾಶಯಗಳು.

Post your views

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada