»   » ದಕ್ಷಿಣ ಭಾರತದ ಪ್ರಖ್ಯಾತ ಚಲನಚಿತ್ರ ನಟಿ ಪದ್ಮಿನಿ ನಿಧನ

ದಕ್ಷಿಣ ಭಾರತದ ಪ್ರಖ್ಯಾತ ಚಲನಚಿತ್ರ ನಟಿ ಪದ್ಮಿನಿ ನಿಧನ

Subscribe to Filmibeat Kannada

ಚೆನ್ನೈ : ದಕ್ಷಿಣ ಭಾರತದ ಹೆಸರಾಂತ ಚಿತ್ರನಟಿ ಮತ್ತು ಭರತನಾಟ್ಯ ಕಲಾವಿದೆ ಪದ್ಮಿನಿ(74) ಹೃದಯಾಘಾತದಿಂದ ನಿಧನರಾದರು.

ಉಸಿರಾಟದ ತೊಂದರೆಯಿಂದ ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಭಾನುವಾರ ರಾತ್ರಿ ಕೊನೆ ಉಸಿರೆಳೆದರು. ಪದ್ಮಿನಿ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ತಮಿಳು ಚಿತ್ರರಂಗದ ಪ್ರಪ್ರಥಮ ನಾಯಕ ನಟಿ ಎಂಬ ಹೆಗ್ಗಳಿಕೆಗೆ ಪದ್ಮಿನಿ ಪಾತ್ರರಾಗಿದ್ದರು. ತಮಿಳು, ಮಲಯಾಳಂ, ತೆಲುಗು, ಹಿಂದಿ ಮತ್ತು ಕನ್ನಡ ಸೇರಿದಂತೆ ಸುಮಾರು 250ಚಿತ್ರಗಳಲ್ಲಿ ಅವರು ನಟಿಸಿದ್ದರು.

1960ರಲ್ಲಿ ನಿರ್ಮಾಣವಾದ ರಾಜ್‌ ಕಪೂರ್‌ ಅವರ ಜಿಸ್‌ ದೇಶ್‌ಮೆ ಗಂಗಾ ಬೆಹತಿ ಹೈ ಚಿತ್ರದಲ್ಲಿ ಪದ್ಮಿನಿಯವರ ತುಟಿಗೆ ಭರ್ಜರಿ ಮುತ್ತಿಟ್ಟು ರಾಜ್‌ ಭಾರೀ ಸಂಚಯವನ್ನುಂಟು ಮಾಡಿದ್ದರು.

(ಯುಎನ್‌ಐ)

Post your views
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada