ರೆಬಲ್ ಸ್ಟಾರ್ ಅಂಬರೀಷ್ ಬಗ್ಗೆ ನಿಮಗೆಷ್ಟು ಗೊತ್ತು?
‘ಮಂಡ್ಯದ ಗಂಡು’ ನವದೆಹಲಿಯ ಪಾರ್ಲಿಮೆಂಟ್ ಮೆಟ್ಟಿದ್ದಾನೆ! ಆ ಹೆಜ್ಜೆ ಗುರುತುಗಳು ಇಲ್ಲಿವೆ.
- ಹೆಸರು - ಎಂ.ಎಚ್. ಅಮರನಾಥ್ ಅಲಿಯಾಸ್ ಅಂಬರೀಷ್(ಪಿಟೀಲು ಚೌಡಯ್ಯನ ಮೊಮ್ಮಗ)
- ಹುಟ್ಟಿದ ದಿನಾಂಕ -1951 ನವೆಂಬರ್ 30
- ವಿದ್ಯಾರ್ಹತೆ -ಪಿಯೂಸಿ(ಅನುತ್ತೀರ್ಣ)
- ತಂದೆ - ಹುಚ್ಚೇಗೌಡ
- ತಾಯಿ -ಪದ್ಮಮ್ಮ
- ಒಡ ಹುಟ್ಟಿದವರು -ಮೂವರು ಸೋದರರು, ಮೂವರು ಸೋದರಿಯರು.
- ಹುಟ್ಟಿದ ಊರು - ದೊಡ್ಡರಸಿನಕೆರೆ, ಮದ್ದೂರು ತಾಲೂಕು, ಮಂಡ್ಯ ಜಿಲ್ಲೆ.
- ವೃತ್ತಿ -ಚಲನಚಿತ್ರ ನಟ, ರಾಜಕೀಯ
- ಪ್ರವೃತ್ತಿ -ಸಮಾಜಸೇವೆ, ವಕ್ಕಲಿಗರ ಸಂಘಟನೆ ಇತ್ಯಾದಿ.
- ಅಭಿಮಾನಿಗಳು ನೀಡಿದ ಬಿರುದುಗಳು -ಅಂಬಿ, ಮಂಡ್ಯದ ಗಂಡು, ಮೈಸೂರು ಜಾಣ, ದಾನಶೂರ ಕರ್ಣ, ಕಲಿಯುಗ ಕರ್ಣ..
- ರಾಜಕಾರಣ ಪ್ರವೇಶ -ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 1994ರ ವಿಧಾನಸಭೆ ಚುನಾವಣೆ ವೇಳೆ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ.
- 1996ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ಅತೃಪ್ತಿಯಿಂದ ಜನತಾದಳಕ್ಕೆ ಪಕ್ಷಾಂತರ.
- ಎಚ್.ಡಿ.ದೇವೇಗೌಡರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಕ್ಷೇತ್ರದ ಮರುಚುನಾವಣೆಯಲ್ಲಿ ಜಾ.ದಳದಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಸಿ.ಎಂ.ಲಿಂಗಪ್ಪ ಎದುರು 9ಸಾವಿರ ಮತಗಳಿಂದ ಸೋಲು.
- 1998ರ ಲೋಕಸಭೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸಿ, ಕಾಂಗ್ರೆಸ್‌ನ ಜಿ.ಮಾದೇಗೌಡ ಎದುರು 1.80ಲಕ್ಷ ಮತಗಳ ಅಂತರದಿಂದ ಗೆಲುವು.
- 1999ರ ಲೋಕಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್‌ಗೆ ಪಕ್ಷಾಂತರ. ಚುನಾವಣೆಯಲ್ಲಿ ಜಾ.ದಳದ ಕೆ.ಆರ್.ಪೇಟೆ ಕೃಷ್ಣ ಎದುರು 1.65ಲಕ್ಷ ಮತಗಳ ಅಂತರದಿಂದ ಗೆಲುವು.
- 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಜಾ.ದಳದ ಡಾ.ಎಸ್.ರಾಮೇಗೌಡ ವಿರುದ್ಧ 1.24 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆ.
- 2006(ಅ.24) -ಕೇಂದ್ರ ಸಂಪುಟದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆಯ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕಾರ.
- 34 ವರ್ಷಗಳ ಬಣ್ಣದ ಬದುಕಿನಲ್ಲಿ, 250 ಚಿತ್ರಗಳಲ್ಲಿ ಅಭಿನಯ.
- ‘ನಾಗರಹಾವು’ ಚಿತ್ರದ ಖಳನಾಯಕನ ಪಾತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ(ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಪ್ರತಿಭೆ)
- ‘ಅಂತ’ ಚಿತ್ರದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ. ಇದು ಅಭಿಮಾನಿಗಳ ಮನೆಸೆಳೆದ ಪಾತ್ರ.
- ‘ಚಕ್ರವ್ಯೂಹ’ದಂಥ ಚಿತ್ರಗಳ ಮೂಲಕ ರೆಬಲ್ ಸ್ಟಾರ್ ಎಂಬ ಬಿರುದು ಪಡೆದವರು. ಭ್ರಷ್ಟ ರಾಜಕೀಯ ವ್ಯವಸ್ಥೆ ವಿರುದ್ಧ ತಮ್ಮ ಚಿತ್ರಗಳಲ್ಲಿ ಸಮರ ಸಾರಿದವರು, ಅಂಬರೀಷ್.
- ಚಕ್ರವ್ಯೂಹ, ಅಂತ, ಅಂತ(ಭಾಗ-2), ನ್ಯೂಡೆಲ್ಲಿ, ಏಳು ಸುತ್ತಿನ ಕೋಟೆ, ರಂಗನಾಯಕಿ, ಟೋಣಿ, ರಾಣಿ ಮಹಾರಾಣಿ, ಮಣ್ಣಿನ ದೋಣಿ, ಮುಂಜಾನೆ ಮಂಜು, ಒಡಹುಟ್ಟಿದವರು(ರಾಜ್ ಕುಮಾರ್ ಸಹೋದರನಾಗಿ ಅಭಿನಯ) ಮತ್ತಿತರ ಚಿತ್ರಗಳಲ್ಲಿ ಸ್ಮರಣೀಯ ಅಭಿನಯ.
- ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮೀಣ ಜಿಲ್ಲೆಗಳಲ್ಲಿ ಅಂಬಿ ಎಂದರೇ ಎಲ್ಲರಿಗೂ ಪ್ರಾಣ.
- ಬಹುಭಾಷಾ ನಟಿ ಸುಮಲತಾ ಜೊತೆ ವಿವಾಹ. ಈ ತಾರಾಜೋಡಿಯ ಒಬ್ಬನೇ ಮಗ ಅಭಿಷೇಕ್ ಗೌಡ.
ಅಂಬರೀಷ್‌ಗೆ ಸಚಿವ ಸ್ಥಾನವನ್ನು ಯಾಕೆ ಕೊಟ್ಟರು ಗೊತ್ತೆ?
ಅಂಬರೀಷಣ್ಣನಿಗೆ ಜೈಜೈ : ಮಂಡ್ಯದಲ್ಲಿ ಸಂಭ್ರಮದ ಹಬ್ಬ


Click it and Unblock the Notifications