»   » ಶ್ರೀನಿವಾಸ್‌ ಒಟ್ಟಾಗಿ ರಾಮಮಂತ್ರವ ಜಪಿಸುತ್ತಿದ್ದಾರೆ. ಗೆಲ್ಲುತ್ತಾರಾ?

ಶ್ರೀನಿವಾಸ್‌ ಒಟ್ಟಾಗಿ ರಾಮಮಂತ್ರವ ಜಪಿಸುತ್ತಿದ್ದಾರೆ. ಗೆಲ್ಲುತ್ತಾರಾ?

Posted By: Staff
Subscribe to Filmibeat Kannada

'ಶ್ರೀರಾಂ" ನಿರ್ಮಾಪಕ ಕನಕಪುರ ಶ್ರೀನಿವಾಸ್‌ ಅವರ ಹೊಸ ಚಿತ್ರದ ಹೆಸರು.

ನವಂಬರ್‌ನಲ್ಲಿ ಚಿತ್ರ ಸೆಟ್ಟೇರಲಿದೆ. ಚಿತ್ರದ ನಾಯಕ ಶಿವರಾಜ್‌ಕುಮಾರ್‌. ಇಬ್ಬರು ನಾಯಕಿಯರಿರುತ್ತಾರೆ. ಇದು ಅದ್ದೂರಿ ಚಿತ್ರ.. ತಮ್ಮ ನಿರ್ಮಾಣದ ಹೊಸ ಚಿತ್ರದ ಕುರಿತು ಕನಕಪುರ ಶ್ರೀನಿವಾಸ್‌ ಮಾತು ಶುರು ಮಾಡಿದ್ದು ಹೀಗೆ.

ಸುದೀಪ್‌ ಅಭಿನಯದ 'ಧಮ್‌" ಚಿತ್ರ 25 ದಿನಗಳ ಯಶಸ್ವಿ ಪ್ರದರ್ಶನ ಪೂರೈಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಸಂತೋಷ ಹಂಚಿಕೊಂಡ ಕನಕಪುರ ಶ್ರೀನಿವಾಸ್‌, ತಮ್ಮ ಹೊಸ ಚಿತ್ರದ ಕುರಿತು ವಿವರಗಳನ್ನು ನೀಡಿದರು. ಶ್ರೀನಿವಾಸ್‌ ಅವರೊಂದಿಗೆ ಹಾಜರಿದ್ದ 'ಶ್ರೀರಾಂ" ಚಿತ್ರದ ನಿರ್ದೇಶಕ ಎಂ.ಎಸ್‌. ರಮೇಶ್‌ಗೆ ತಮ್ಮ ಚಿತ್ರ ಹಿಟ್‌ ಆಗುವ ಕುರಿತು ಭಯಂಕರ ಆತ್ಮ ವಿಶ್ವಾಸ. 'ಧ್ರುವ" ಗೆದ್ದ ಖುಷಿ ರಮೇಶ್‌ಗೆ ಭೀಮಬಲ ತಂದುಕೊಟ್ಟಂತಿದೆ.

'ಶ್ರೀರಾಂ" ಹೀರೊ ಓರಿಯೆಂಟೆಡ್‌ ಚಿತ್ರ. ಚಿತ್ರದಲ್ಲಿ ಎಲ್ಲವೂ ಅದ್ದೂರಿಯೇ. ನಾಯಕಿಯರು ಇಬ್ಬರು, ಇಬ್ಬರು ಅಮ್ಮಂದಿರು, ಫೈಟ್‌ಗಳೂ ಎರಡು ಎಂದು ಎರಡರ ಜಪ ಮಾಡಿದ ರಮೇಶ್‌, ಎರಡರಲ್ಲೊಂದು ಫೈಟ್‌ ಈವರೆಗೆ ಕನ್ನಡ ಚಿತ್ರರಂಗ ಕಾಣದಷ್ಟು ವಿಭಿನ್ನವಾಗಿರುತ್ತದೆ ಎಂದರು. ಚಿತ್ರದ ಆಕರ್ಷಣೆ ಅದೇ ಫೈಟ್‌ ಅಂತೆ.

'ವಿ" ಚಾನಲ್‌ನ ಮೇಘನಾ ರೆಡ್ಡಿ ಅವರನ್ನು 'ಶ್ರೀರಾಂ" ಚಿತ್ರಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಮೇಶ್‌ ಸಂಭ್ರಮದಿಂದ ಹೇಳಿದರು.

ಅಂದಹಾಗೆ, ಈ ಮುನ್ನ ಪ್ರಕಟಿಸಿದ್ದ 'ರಾಮಜನ್ಮ ಭೂಮಿ" ಚಿತ್ರಕ್ಕೂ 'ಶ್ರೀರಾಂ"ಗೂ ಸಂಬಂಧವಿಲ್ಲ ಎನ್ನುವ ಸ್ಪಷ್ಟನೆಯನ್ನೂ ಅವರು ನೀಡಿದರು. ಬಾಲಿವುಡ್‌ನ ಕೆಲವು ನಟರ ಡೇಟ್ಸ್‌ ಸಿಗುವುದು ಬಾಕಿಯಿದೆ. ಜನ್ಮಭೂಮಿಗೆ ಯಾವಾಗ ಮುಹೂರ್ತ ಕೂಡಿ ಬರುತ್ತೋ ಏನೋ ಎಂದು ರಮೇಶ್‌ ಮಾತು ಮುಗಿಸಿದರು. 'ಧಮ್‌" ಚಿತ್ರದ ತಾಂತ್ರಿಕ ವರ್ಗವೇ 'ಶ್ರೀರಾಂ"ಗೂ ಮುಂದುವರಿಯಲಿದೆ !

English summary
Meghana reddy to act in a new kannada movie Shreeram
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada