»   » ಬರೀ 5 ಸಾವಿರಕ್ಕಾಗಿ ಡಾ.ರಾಜ್‌ ಪುತ್ಥಳಿಗೆ ಅವಮಾನ!

ಬರೀ 5 ಸಾವಿರಕ್ಕಾಗಿ ಡಾ.ರಾಜ್‌ ಪುತ್ಥಳಿಗೆ ಅವಮಾನ!

Posted By:
Subscribe to Filmibeat Kannada


ಮೈಸೂರು : ಅಂಬೇಡ್ಕರ್‌ ಪುತ್ಥಳಿಯನ್ನು ವಿರೂಪಗೊಳಿಸುವ ಪ್ರಕರಣಗಳು ಆಗಾಗ ನಡೆಯುತ್ತವೆ. ಈಗ ನಟ ರಾಜ್‌ಕುಮಾರ್‌ ಪುತ್ಥಳಿಯನ್ನು ವಿರೂಪಗೊಳಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಲಕ್ಷ್ಮೀ ಟಾಕೀಸ್‌ ಬಳಿ ಇತ್ತೀಚೆಗಷ್ಟೇ ಪ್ರತಿಷ್ಠಾಪಿಸಲಾಗಿದ್ದ ರಾಜ್‌ಕುಮಾರ್‌ ಪುತ್ಥಳಿಯನ್ನು, ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ. ಘಟನೆಯ ಜಾಡು ಹಿಡಿದ ಅಭಿಮಾನಿಗಳು, ಕಿಡಿಗೇಡಿಗಳ ಬೆನ್ನತ್ತಿ ಥಳಿಸಿ, ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೆಲ ಸಮಯ ಈ ಭಾಗದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಮದ್ಯಪಾನ ಮಾಡಿದ್ದ ವ್ಯಕ್ತಿಯಾಬ್ಬ ಪುತ್ಥಳಿ ವಿರೂಪದಲ್ಲಿ ಪ್ರಮುಖ ಪಾತ್ರವಹಿಸಿದ್ದ ಎನ್ನಲಾಗಿದ್ದು, 5000 ರೂ. ಆಮಿಷಕ್ಕೆ ಈ ಕೃತ್ಯಕ್ಕೆ ಒಪ್ಪಿದ್ದ ಎನ್ನಲಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada