ಶಿವಣ್ಣನ ಜೊತೆ ರೆಬೆಲ್ ಆದಿತ್ಯ ಹೊಸ ಚಿತ್ರ ನಿಜವೇ?

By Mahesh

ರೆಬೆಲ್ ಚಿತ್ರದ ಮೂಲಕ ಆದಿತ್ಯ ನಿರ್ಮಾಪಕರಾಗಿದ್ದು ಓದಿದ್ದೀರಾ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಲಾಪ್ ಮಾಡಿ, ಚಿತ್ರಕ್ಕೆ ಶುಭ ಹಾರೈಸಿದ್ದು ಆಯ್ತು. ಎಸ್ ವಿ ಆರ್ ಸಿಂಗ್ ಆಗಿರುವ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಅವರು ತಮ್ಮ ಮಗನನ್ನು ಬೆಳೆಸಲು ರೆಬೆಲ್ ಚಿತ್ರಕ್ಕೆ ಉತ್ತಮ ಕಥೆ ಹೆಣೆದಿದ್ದಾರಂತೆ. ಆದಿತ್ಯ ಹಾಗೂ ಶಿವರಾಜ್ ಜೋಡಿ ಹೊಸ ಚಿತ್ರ ಬರಲಿದೆ ಎಂಬ ಸುದ್ದಿ ಹೊರಬಿದ್ದಿದೆ.

ಈ ಬಗ್ಗೆ ಶಿವಣ್ಣನ ಕೇಳಿದರೆ, ಅದಕ್ಕೇನಂತೆ ರಾಜೇಂದ್ರ ಸಿಂಗ್ ಬಾಬು ಅವರು ಒಳ್ಳೆ ಕಥೆ ರೆಡಿ ಮಾಡ್ಲಿ ಇಬ್ಬರು ಒಟ್ಟಿಗೆ ನಟಿಸ್ತೀನಿ ಅಂದಿದ್ದಾರೆ. ಶಿವಣ್ಣ ಯಾರಿಗೆ ಇಲ್ಲ ಅಂದಿದ್ದಾರೆ ಹೇಳಿ. ಕನ್ನಡ ನಿರ್ಮಾಪಕರ ಪಾಲಿನ ದೈವವಾಗಿರುವ ಶಿವರಾಜ್ ಕುಮಾರ್, ಒಂದರ ಮೇಲೆ ಒಂದು ಚಿತ್ರ ಸೋತರೂ, ಬಿಗ್ ಬ್ಯಾನರ್, ಇಮೇಜ್ ಎಂದು ನೆಚ್ಚಿಕೊಳ್ಳದೆ ಸಾಲು ಸಾಲು ಚಿತ್ರಗಳನ್ನು ಪೂರೈಸುತ್ತಾ ಸೆಂಚುರಿ ಸ್ಟಾರ್ ಎನಿಸಿಕೊಂಡಿದ್ದಾರೆ.

ಈ ಹಿಂದೆ ಎಸ್ ವಿಆರ್ ಸಿಂಗ್ ಬಾಬು ಅವರ ಭೂಮಿ ತಾಯಿ ಚೊಚ್ಚಲ ಮಗ ಹಾಗೂ ಕಾಂಚನ ಗಂಗಾ ಚಿತ್ರಗಳಲ್ಲಿ ಶಿವರಾಜ್ ನಟಿಸಿದ್ದರು. ಚಿತ್ರಗಳು ವಿಮರ್ಶಕ ಮೆಚ್ಚುಗೆ ಗಳಿಸಿದರು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿರಲಿಲ್ಲ. ಶಿವಣ್ಣ ಇದ್ದ ಕಡೆ ವಿದ್ಯುತ್ ಸಂಚಾರವಾದ್ದಂತೆ, ಫುಲ್ ಎನರ್ಜಿಟಿಕ್ ಆಗಿರುತ್ತಾರೆ. ರೆಬೆಲ್ ಚಿತ್ರ ಮುಗಿದ ಮೇಲೆ ಶಿವಣ್ಣ ಹಾಗೂ ಆದಿತ್ಯ ಜೋಡಿ ಸಿನಿಮಾ ಮಾಡುವ ಇಚ್ಛೆ ಇದೆ ಎಂದು ಬಾಬು ಹೇಳಿದರು.

ಬಾಬು ನಂತರ ಮಾತಿಗಿಳಿದ ಶಿವಣ್ಣ, ಸುಮಾರು 67 ವರ್ಷ ಹಳೆ ಬ್ಯಾನರ್, ಅವರ ಕುಟುಂಬದವರ ಪ್ರೀತಿ, ವಿಶ್ವಾಸದ ಋಣ ನನ್ನ ಮೇಲಿದೆ. ಅಭಿಮಾನಿಗಳ ಹಾರೈಕೆಯಿಂದ 100 ಚಿತ್ರ ಪೂರೈಸಿ, 25 ವರ್ಷ ಕಳೆದಿದ್ದೇನೆ. ಬಾಬು ಅವರ ಜೊತೆ ವರ್ಕ್ ಮಾಡೋಕೆ ತುಂಬಾ ಸಂತೋಷವಾಗುತ್ತದೆ ಎಂದರು.

ಶಿವಣ್ಣ ಹಾಗೂ ಅಪ್ಪಾಜಿ ಬಾಬು ಹೊಸ ಸಿನಿಮಾ ಬಗ್ಗೆ ಘೋಷಿಸುತ್ತಿದ್ದಂತೆ, ಚಿಕ್ಕಂದಿನಿಂದ ಶಿವರಾಜ್ ಅವರ ಸಿನಿಮಾ ನೋಡುತ್ತಾ ಬೆಳೆದ ಆದಿ, ಆಗಲೇ ಕನಸಿನ ಲೋಕದಲ್ಲಿ ತೇಲುತ್ತಿದ್ದ. ಆಕಾಶದಲ್ಲಿ ಚಂದಿರನ ಹುಡುಕುತ್ತಿದ್ದ ಆದಿ ಕಣ್ಣಿಗೆ ಏಟ್ರಿಯಾ ಹೋಟೆಲಿನ ಸೀಲಿಂಗ್ ಅಡ್ಡ ಬಂದಿತ್ತು. ಅಷ್ಟರಲ್ಲಿ ಶಿವಣ್ಣನ ಕೈ ಕುಲುಕಿ, ಆದಿ ಬೀಳ್ಕೊಟ್ಟರು.

More from Filmibeat

English summary
Deadly fame Actor Aditya was on cloud nine after Shivaraj kumar anounced that he is ready to act with Adi in upcoming movie. S.V.Rajendra Singh Babu also confirmed he will make a script suitable for both of them. Adi turned producer with Rebel movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X