»   » ಕಾಮಿಡಿ ಪಂಚ್ ಉಳ್ಳ ಹೊಸ ಚಿತ್ರದಲ್ಲಿ ದರ್ಶನ್

ಕಾಮಿಡಿ ಪಂಚ್ ಉಳ್ಳ ಹೊಸ ಚಿತ್ರದಲ್ಲಿ ದರ್ಶನ್

Subscribe to Filmibeat Kannada
darshan
ಚಾಲೆಂಜಿಂಗ್ ಸ್ಟಾರ್ ದರ್ಶನ್ ರ ಹೊಸ ಚಿತ್ರ 'ಅಭಯ್' ಡಿಸೆಂಬರ್ 5ರಂದು ಸೆಟ್ಟೇರಲಿದೆ. ಅಭಯ್ ಚಿತ್ರವನ್ನು 'ಹುಡುಗಾಟ' ನಿರ್ಮಿಸಿದಬಾಬು ರೆಡ್ಡಿ ನಿರ್ಮಿಸುತ್ತಿದ್ದಾರೆ. ಶಿವರಾಜ್ ಕುಮಾರ್ 'ಪರಮೇಶ ಪಾನ್ ವಾಲ' ಚಿತ್ರದ ನಿರ್ದೇಶಕ ಮಹೇಶ್ ಬಾಬು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

ದರ್ಶನ್ ಹಾಗೂ ಮಹೇಶ್ ಬಾಬು ಅವರ ಮೆಚ್ಚಿನ ಸಂಗೀತ ನಿರ್ದೇಶಕ ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ. ರಮೇಶ್ ಬಾಬು ಛಾಯಾಗ್ರಹಣ, ರವಿವರ್ಮ ಸಾಹಸ ಸಂಯೋಜಿಸುತ್ತಿದ್ದಾರೆ. 'ಗಜ' ಚಿತ್ರದಲ್ಲಿ ದರ್ಶನ್ ರ ಪಾತ್ರ ಕಚಗುಳಿ ಇಡುವಂತಿತ್ತು. ದರ್ಶನ್ ರ ಹಾಸ್ಯ ರಸಾಯನ ಪ್ರೇಕ್ಷಕರಿಗೆ ಇಷ್ಟವಾಗಿತ್ತ್ತು. ಈಗ ಅಂತಹದ್ದೇ ಕಾಮಿಡಿ ಪಂಚ್ ಉಳ್ಳ ಪಾತ್ರವನ್ನು ದರ್ಶನ್ ನಿರ್ವಹಿಸುವುದಾಗಿ ನಿರ್ದೇಶಕರು 'ಅಭಯ'ಹಸ್ತ ನೀಡಿದ್ದಾರೆ.

ಅಂದ ಹಾಗೆ ಚಿತ್ರದ ನಾಯಕಿಗಾಗಿ ಹುಡುಕಾಟ ಆರಂಭವಾಗಿದೆ. ತ್ರಿಶಾ, ಭೂಮಿಕಾ, ಚಾವ್ಲಾರಂತಹ ನಾಯಕಿಯರಲ್ಲದಿದ್ದರೂ ಅದೇ ತರದ ಮುಗ್ಧ ಮುಖಗಳಿಗಾಗಿ ಹುಡುಕಾಟ ನಡೆದಿದೆ!
(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada