ಜೈಲಿನಲ್ಲಿ ನಟ ದರ್ಶನ್‌ಗೆ ನಾಟಕ ಪಾರ್ಟ್‌ಗೆ ಚಾನ್ಸ್

ಬೆಳಗ್ಗೆ 6.30ಕ್ಕೆಲ್ಲಾ ಎದ್ದೇಳುವ ದರ್ಶನ್ ಕೈಕಾಲು ಮುಖ ತೊಳೆದುಕೊಂಡು ಒಂಚೂರು ಮೈಬಗ್ಗಿಸಿ ಕೆಲಸ ಮಾಡಿದ್ದಾರೆ. ಜೈಲಿನಲ್ಲಿರುವ ಹೂಗಿಡಗಳಿಗೆ ನೀರು ಹಾಕಿವುದು ಬಳಿಕ 7.30ಕ್ಕೆ ಬೆಳಗಿನ ಉಪಹಾರ, ಕಾಫಿ ಸೇವನೆ. ನಂತರ ತನಗಿಷ್ಟವಾದ ಪುಸ್ತಕ ಓದುವುದು.
ಮಧ್ಯಾಹ್ನ ಯಥಾರೀತಿ ಜೈಲಿನಲ್ಲಿ ನೀಡುವ ಅನ್ನ ಸಾಂಬಾರ್ ಸೇವನೆ. ಆದರೆ ಭಾನುವಾರ (ಸೆ.25) ಕಟ್ಟಾ ಜಗದೀಶ್‌ಗೆ ಮನೆಯಿಂದ ಬಂದಿದ್ದ ಊಟದ ಪಾರ್ಸಲನ್ನು ದರ್ಶನ್ ಸವಿದಿದ್ದಾರೆ. ಜೈಲಿನಲ್ಲಿ ಕೈದಿಗಳೆಲ್ಲಾ ನಾಟಕವೊಂದರನ್ನು ಪ್ರದರ್ಶಿಸುವ ತಯಾರಿಯಲ್ಲಿದ್ದು ದರ್ಶನ್‌ಗೆ ಒಂದು ಪಾತ್ರ ಕೊಡುವ ಸಿದ್ಧತೆಗಳೂ ನಡೆಯುತ್ತಿವೆ.
ಆದರೆ ಕೈದಿಗಳು ಜೈಲಿನಲ್ಲಿ ಆಡಲಿರುವ ನಾಟಕ ಪೌರಾಣಿಕವೇ, ಸಾಮಾಜಿಕವೇ, ಹಾಸ್ಯ, ಗಂಭೀರ ಅಥವಾ ಐತಿಹಾಸಿಕ ನಾಟಕವೇ ಎಂಬುದು ತಿಳಿದುಬಂದಿಲ್ಲ. ಒಟ್ಟಿನಲ್ಲಿ ಜೈಲಿನಲ್ಲಿ ದರ್ಶನ್‌ಗೆ ಉತ್ತಮ ಗೆಳೆಯ ಜೂ.ಕಟ್ಟಾ ಸಿಕ್ಕಂತಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
'Challenging Star' Darshan is back in Parappana Agrahara jail. And guess who his cellmates are? None other than the Katta Jagadish. He wake up at 6.30 am than he watering plants at 7.30 am he takes break fast.
ದರ್ಶನ್ ಚಾಲೆಂಜಿಂಗ್ ಸ್ಟಾರ್ ಕಟ್ಟಾ ಜಗದೀಶ್ ಅಪರಾಧ ನಿಖಿತಾ ಕಿರಿಕಿರಿ ಜೈಲು ಜಾಮೀನು darshan challenging star katta jagadish crime nikita thukral jail


Click it and Unblock the Notifications











