ರಾಜಕೀಯ ಎಂಟ್ರಿ ಬಗ್ಗೆ ಮೌನ ಮುರಿದ ಸುದೀಪ್
ಸಿನಿಮಾ ಜಗತ್ತು ಸಾಕಾಗಿ ಹೋಗಿದೆ ನಿವೃತ್ತಿ ಘೋಷಿಸುತ್ತೇನೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿ ತಿಂಗಳುಗಳೇ ಕಳೆದುಹೋಗಿವೆ. ನಿವೃತ್ತಿ ಘೋಷಿಸಿ ಹಿಮಾಲಯಕ್ಕೆ ಹೋಗುತ್ತೇನೆ ಎಂದೇನು ಸುದೀಪ್ ಹೇಳಿಲ್ಲ. ಆದರೂ ಅವರು ರಾಜಕೀಯ ಸೇರುತ್ತಾರೆ ಎಂಬ ಸುದ್ದಿ ಇದ್ದೇ ಇತ್ತು.
ಅತ್ತ ಜೆಡಿಎಸ್ ಇತ್ತ ಬಿಜೆಪಿ ಇನ್ನೊಂದು ಕಡೆ ಕಾಂಗ್ರೆಸ್ ಸುದೀಪ್ ಅವರನ್ನು ರಾಜಕೀಯ ಕ್ಷೇತ್ರಕ್ಕೆ ಇಳಿಸುವ ವ್ಯರ್ಥ ಕಸರತ್ತನ್ನು ಮಾಡಿದವು. ಆದರೂ ಸುದೀಪ್ ಮಾತ್ರ ತುಟಿಪಿಟಕ್ ಎನ್ನಲಿಲ್ಲ. ಈಗ ಸುದೀಪ್ ತಮ್ಮ ರಾಜಕೀಯ ಎಂಟ್ರಿ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಸದ್ಯಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಡುವ ಆಲೋಚನೆ ಇಲ್ಲ. ರಾಜಕೀಯದಲ್ಲಿ ತನ್ನದೇ ಆದಂತಹ ಸಾಮಾಜಿಕ ಕಾಳಜಿ ಇರಬೇಕು. ಅದೆಲ್ಲಾ ತಮಗೆ ಈಗ ಸಾಧ್ಯವಾಗುವುದಿಲ್ಲ. ಮುಂದೆ ನೋಡಣ. ಆದರೆ ಸದ್ಯಕ್ಕಂತೂ ರಾಜಕೀಯ ಪ್ರವೇಶ ಇಲ್ಲ ಎಂದು ಗೋಣು ಆಡಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
At finally Kannada actor Sudeep breaks silence on politics. He made it clear that politics is definitely not on the cards. He maintained that politics requires living up to certain social responsibilities and admitted that he can't do it at this point of time.


Click it and Unblock the Notifications











