ಅನ್ನಿಯನ್ ವಿಕ್ರಮ್ ಕನ್ನಡಕ್ಕೆ ಕರೆತಂದ ಕೊಬ್ರಿ ಮಂಜು
ಅಂಥ ವಿಕ್ರಮ್ ಈಗ ಕನ್ನಡಕ್ಕೆ ಬರುತ್ತಿದ್ದಾರೆ. ಈ ಸುದ್ದಿ ಕೇಳಿ ಸ್ಯಾಂಡಲ್ ವುಡ್ ಸಿನಿಮಾಪ್ರಿಯರು ರೋಮಾಂಚನಗಿಳ್ಳುವುದು ಗ್ಯಾರಂಟಿ. ಏಕೆಂದರೆ ಅಷ್ಟು ದೊಡ್ಡ ಸ್ಟಾರ್ ಉತ್ತುಂಗದಲ್ಲಿರುವಾಗಲೇ ಕನ್ನಡದಲ್ಲಿ ನಟಿಸುವುದೆಂದರೆ? ಎಂಬ ಪ್ರಶ್ನಾರ್ಥಕ ಚಿನ್ಹೆ ಮೂಡಬಹುದು.
ಆದರೆ ಹೌದು, ಖಂಡಿತ ಕನ್ನಡಕ್ಕೆ ಬರುತ್ತಿದ್ದಾರೆ. ಅವರನ್ನು ಕರೆತರುತ್ತಿರುವವರು ನಿರ್ಮಾಪಕರಾದ ಕೆ. ಮಂಜು. ಇದಕ್ಕೆ ವಿಕ್ರಮ್ ಕೂಡ ಒಪ್ಪಿಕೊಂಡಾಗಿದೆ. ಅದರ ಬಗ್ಗೆ ವಿಕ್ರಮ್ "ಮಂಜು ನನಗೆ ಆಫರ್ ಮಾಡಿರವುದು ಹೌದು. ಮಾತುಕತೆ ನಡೆಯುತ್ತಿದೆ. ಡೇಟ್ಸ್ ಸಮಸ್ಯೆಯಿಂದಾಗಿ ಅಂತಿಮ ತೀರ್ಮಾನ ಆಗಿಲ್ಲ. ನಾನು ಕನ್ನಡದಲ್ಲಿ ನಟಿಸೋದಂತೂ ಖಂಡಿತ" ಎಂದು ಹೇಳಿದ್ದಾರೆ.
ವಿಕ್ರಮ್ ಅವರ ಕಾಲ್ ಶೀಟ್ 2012 ರ ಫೆಬ್ರವರಿ, ಮಾರ್ಚ್ ತನಕ ಬುಕ್ ಆಗಿದ್ದು ಅಲ್ಲಿಯವರೆಗೂ ಕಾಯಲು ಮಂಜು ರೆಡಿ. ಹಾಗಾಗಿ ಕನ್ನಡ ಸಿನಿಮಾದಲ್ಲಿ ವಿಕ್ರಮ್ ನೋಡಲು ಸಿನಿಪ್ರಿಯರು ರೆಡಿ ಆಗಬಹುದು. ವಿಕ್ರಮ್ ಅಂತಿಂಥವರಲ್ಲ, ದೈತ್ಯ ಪ್ರತಿಭೆ. ಕನ್ನಡಿಗರಿಗೆ ಇವರು 'ವಿಜಯ ವಿಕ್ರಮ' ಆಗುವರೇ ಎಣಬುದನ್ನು ಕಾಲವೇ ಹೇಳಬೇಕು.


Click it and Unblock the Notifications












