ಕಾಣದ ಕೈಗಳ ಕಿತಾಪತಿಗೆ ನಲುಗಿದ ನಯನತಾರಾ

By Rajendra

ನಟಿ ನಯನತಾರಾ ಸಖತ್ ಗರಂ ಆಗಿದ್ದಾರೆ. ಕಾಣದ ಕೈಗಳ ಕಿತಾಪತಿ ಆಕೆಯನ್ನು ಕಂಗೆಡಿಸಿದೆ. ಚಿತ್ರರಂಗಕ್ಕೆ ಗುಡ್ ಬೈ ಹೇಳಲೋ ಬೇಡವೋ ಎಂಬ ಜಿಜ್ಞಾಸೆಯಲ್ಲಿರುವ ನಯನತಾರಾ ಈಗ ಕೆರಳಿದ ಸರ್ಪದಂತಾಗಿದ್ದಾರೆ.

ಈಕೆಯ ಕೋಪಕ್ಕೆ ಕಾರಣವಾಗಿರುವುದು ಈಕೆಯ ಹೆಸರಿನಲ್ಲಿ ಸೃಷ್ಟಿಯಾಗುತ್ತಿರುವ ನಕಲಿ ಟ್ವಿಟ್ಟರ್, ಫೇಸ್‌ಬುಕ್ ಖಾತೆಗಳು. ಇಷ್ಟೇ ಆಗಿದ್ದರೆ ನಯನತಾರಾ ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲವಂತೆ. ಈಕೆಯ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿರುವವರು ಅಭಿಮಾನಿಗಳೊಂದಿಗೆ ತಾವೇ ಅಸಲಿ ನಯನತಾರಾ ಎಂಬಂತೆ ಮಾತುಕತೆಗೂ ಇಳಿದಿದ್ದಾರಂತೆ.

ಇನ್ನೂ ಕೆಲವರು ಈ ನಕಲಿ ಖಾತೆಗಳ ಮೂಲಕ ಇತರೆ ತಾರೆಗಳನ್ನು ಸಂಪರ್ಕಿಸುತ್ತಿದ್ದಾರಂತೆ. ಇವೆಲ್ಲವೂ ಆಕೆಯ ಗಮನಕ್ಕೆ ಬಂದಿದ್ದು ಶೀಘ್ರದಲ್ಲೆ ಇಂತಹವರ ವಿರುದ್ಧ ತೀವ್ರ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಂದಹಾಗೆ ನಯನತಾರಾ ತೆಲುಗಿನಲ್ಲಿ ಅಭಿನಯಿಸಿದ 'ಶ್ರೀರಾಮರಾಜ್ಯಂ' ಚಿತ್ರಕ್ಕೆ ಎಲ್ಲಡೆಯಿಂದಲೂ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಸದ್ಯಕ್ಕೆ ಆಕೆಗೆ ಖುಷಿ ಕೊಡುತ್ತಿರುವ ಸಂಗತಿ ಇದೊಂದೇ. (ಏಜೆನ್ಸೀಸ್)

More from Filmibeat

English summary
Actress Nayantara is worried about creating fake accounts in her name on social networking sites. Many fake profiles have been created on her name in sites like Twitter and Facebook. Nayan reportedly stressed that strong action should be taken on those responsible.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X