ಐಟಂ ಸಾಂಗ್ ಸಹವಾಸ ಮಾಡೊಲ್ಲ ಅಂದ ರಾಧಿಕಾ

"ಗ್ಲಾಮರಸ್ ಹಾಡಿನಲ್ಲಿ ಕುಣಿಯುವುದು ತಪ್ಪೇನೂ ಅಲ್ಲ. ಆದರೆ ಅದಕ್ಕೆ ಐಟಂ ಸಾಂಗ್ ಎಂದು ಬ್ರಾಂಡ್ ಮಾಡಿದಾಗ ಏನೋ ಒಂಥರಾ ಅನ್ ಕಂಫರ್ಟಬಲ್ ಅನ್ನಿಸುತ್ತೆ. ಆ ಹಣೆಪಟ್ಟಿ ಇದ್ದರೆ ಹೆಜ್ಜೆಹಾಕುವುದಕ್ಕೆ ಮುಜುಗರ ಆಗುತ್ತೆ. ಹಾಗಾಗಿ ನನಗೆ ಈ ಐಟಂ ಸಾಂಗ ಸಹವಾಸ ಬೇಡ" ಅನ್ನುತ್ತಾರೆ ಕನ್ನಡದ ಪ್ರತಿಭಾವಂತ ನಟಿ ಈ ರಾಧಿಕಾ.
"ಐಟಂ ಸಾಂಗ್ ನಲ್ಲಿ ಕುಣಿಯುವುದೂ ಬೇಡ, ಅದರ ವಿವಾದದಲ್ಲಿ ಸಿಲುಕುವುದೂ ಬೇಡ" ಎನ್ನುತ್ತಾ ಪ್ರಬುದ್ಧವಾಗುತ್ತಾರೆ ರಾಧಿಕಾ. ಹೊಸ ನಾಯಕ, ನಿರ್ದೆಶಕರ ಜೊತೆ ಕೆಲಸ ಮಾಡಲು ನಾನು ಸಿದ್ಧ, ಆದರೆ ನನ್ನ ಪಾತ್ರ ಹಾಗೂ ಕಥೆಗೆ ಹೆಚ್ಚಿನ ಮಹತ್ವ ಕೊಡುತ್ತೇನೆ. ನನ್ನ ಪಾತ್ರ ಎಕ್ಸೈಟ್ ಅನಿಸುವ ಸ್ಟೋರಿ ಹೊಂದಿರಬೇಕು" ಎನ್ನುತ್ತಾ ಹೆಚ್ಚು ಸ್ಪಷ್ಟವಾಗುತ್ತಾರೆ.
More from Filmibeat
English summary
Kannada Actress Radhika Pandit Rejects to act in Item Song. She told she wont accept item song. Now she is acting in Brecking News and Alemari.


Click it and Unblock the Notifications











