ಕನ್ನಡ ಚಿತ್ರರಂಗದಲ್ಲಿ ಮತ್ತೆ ರಮ್ಯಾ ವಸಂತ ಕಾಲ ಆರಂಭ

By Rajendra

ಕನ್ನಡಚಿತ್ರರಂಗದಲ್ಲಿ ತಲೆದೋರಿದ ಅಂತಃ ಕಲಹಗಳಿಂದ ಮನನೊಂದಿದ್ದ ರಮ್ಯಾ ಚಿತ್ರರಂಗಕ್ಕೆ ದಂಡಂ ದಶಗುಣಂ ಎಂದು ನಮಸ್ಕಾರ ಹಾಕಿದ್ದರು. ಈಗ ಸಮಸ್ಯೆ ಮಂಜಿನಂತೆ ಕರಗಿ ಹೋಗಿದೆ. ಇದರಿಂದ ಮತ್ತೆ ಉತ್ಸಾಹದ ಬುಗ್ಗೆಯಂತಾಗಿರುವ ರಮ್ಯಾ ಚಿತ್ರಗಳಲ್ಲಿ ಅಭಿನಯಿಸುವುದಾಗಿ ಹೇಳಿದ್ದಾರೆ. ರಮ್ಯ ವಸಂತಕಾಲ ಮತ್ತೆ ಆರಂಭವಾಗಿದೆ.

"ನನ್ನ ಅಭಿಮಾನಿಗಳಿಗೆ ನಾನು ಚಿತ್ರರಂಗ ಬಿಡುವುದು ಇಷ್ಟವಿಲ್ಲ. ಹಾಗಾಗಿ ಮತ್ತೆ ಬರುತ್ತಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ. ದಂಡಂ ದಶಗುಣಂ ವಿವಾದದ ಕಾರಣ ಮಾಧ್ಯಮಗಳಿಗೂ ದೂರವಾಗಿದ್ದ ರಮ್ಯಾ ಈಗ ಮತ್ತೆ ಮಾಧ್ಯಮಗಳಲ್ಲಿ ದರ್ಶನ ನೀಡುತ್ತಿದ್ದಾರೆ. ರಮ್ಯಾ ಅಭಿಮಾನಿಗಳಿಗೆ ಇದಕ್ಕಿಂತಲೂ ಸಂತಸದ ವಿಷಯ ಇನ್ನೇನು ಬೇಕು.

ಕನ್ನ್ನಡ ಚಿತ್ರರಂಗದ ನಿರ್ಮಾಪಕರೆಲ್ಲಾ ರಮ್ಯಾ ವಿರುದ್ಧ ತೆರೆಮರೆಯ ಕಸರತ್ತುಗಳನ್ನು ನಡೆಸುತ್ತಿದ್ದರೆ, ಮುನಿರತ್ನ ಮಾತ್ರ ರಮ್ಯಾ ಬೆಂಬಲಕ್ಕೆ ನಿಂತಿದ್ದರು. ಈಗ ಅವರೇ ಮುಂದೆ ಬಂದಿದ್ದು ರಮ್ಯಾಗೆ ಒಳ್ಳೆ ಆಫರ್ ನೀಡಿದ್ದಾರೆ. ಚಿತ್ರವನ್ನು ಕೂಡಲೆ ಆರಂಭಿಸುವುದಾಗಿ ಮುನಿರತ್ನ ಘೋಷಿಸಿದ್ದಾರೆ. ರಮ್ಯಾ ಅಭಿನಯದ ಮಥುರಾನಗರಿ, ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್, ಸಿದ್ದಲಿಂಗು, ಸಂಜು ವೆಡ್ಸ್ ಗೀತಾ ಚಿತ್ರಗಳು ಬಿಡುಗಡೆಯಾಗಬೇಕಿವೆ.

More from Filmibeat

English summary
Actress Ramya says I am coming back to acting. She tweeted, "I am coming back because my fans did not want me to quit. I will accept some exciting offers with a good story". At the same time Producer Munirathna offered her a film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X