twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ಯಸಭೆ ಸದಸ್ಯತ್ವಕ್ಕೆ ರೇಖಾ ಹೆಸರು ಶಿಫಾರಸು

    |

    ಚಿರಯೌವನೆ ರೇಖಾ ರಾಜ್ಯಸಭಾ ಸದಸ್ಯತ್ವದ ನಾಮಕರಣಕ್ಕೆ ಶಿಫಾರಸುಗೊಂಡಿದ್ದಾರೆ. 80ರ ದಶಕದಲ್ಲಿ ತಮ್ಮ ಅಮೋಘ ನಟನೆ ಹಾಗೂ ಮಾದಕ ಸೌಂದರ್ಯದಿಂದ ಚಿತ್ರರಸಿಕರಿಗೆ ಹುಚ್ಚುಹಿಡಿಸಿದ್ದ ರೇಖಾ, ಸಿನಿಅಭಿಮಾನಿಗಳು ಮರೆಯಲಾಗದ ಮೋಹಕ ನಟಿ. ಇಂಥಹ ರೇಖಾ, ಇದೀಗ ರಾಜ್ಯಸಭೆಯ ಮೇಲ್ಮನೆಯ 12 ಸದಸ್ಯರುಗಳ ಸಾಲಿನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

    ಪ್ರಧಾನಿ ಮನಮೋಹನ ಸಿಂಗ್, ರೇಖಾ ಹಾಗೂ ಇತರ 11 ಮಂದಿ ನಾಮಕರಣಕ್ಕೆ ಶಿಫಾರಸುಗೊಂಡಿರುವವರ ಪಟ್ಟಿಯನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಕಳಿಸಿಕೊಟ್ಟಿದ್ದಾರೆ ಎಂದು ಸುದ್ದಿಮೂಲಗಳಿಂದ ತಿಳಿದುಬಂದಿದೆ. ಭಾರತೀಯ ಸಂವಿಧಾನ 80ನೇ ಪರಿಚ್ಛೇದದ ಪ್ರಕಾರ, ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾಮಾಜಿಕ ಸೇವೆ ಇವುಗಳಲ್ಲಿ ವಿಶೇಷ ಜ್ಞಾನ, ಕೌಶಲ್ಯ ಹಾಗೂ ಕೆಲಸಮಾಡಿದ ಅನುಭವಗಳ ಆಧಾರದ ಮೇಲೆ ಈ ನಾಮಕರಣ ಪ್ರಕ್ರಿಯೆ ನಡೆಯುವುದು ವಾಡಿಕೆ.

    ಆ ಕಾರಣಕ್ಕಾಗಿ ನಟಿ ರೇಖಾ ಹೆಸರು ಸೇರ್ಪಡೆಯಾಗಿದೆ. 57 ವರ್ಷದ ರೇಖಾ ತಮ್ಮ ಅಮೋಘ ನಟನೆಗೆ ಸಾಕಷ್ಟು ರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಇದೀಗ ರಾಜ್ಯಸಭೆ ಸದಸ್ಯತ್ವಕ್ಕೆ ಶಿಫಾರಸು ಪಡೆದು ಎಲ್ಲರ ಗಮನಸೆಳೆದಿದ್ದಾರೆ. ಇದು ರೇಖಾ ಜನಪ್ರಿಯತೆಗೆ ಸಾಕ್ಷಿ. (ಒನ್ ಇಂಡಿಯಾ ಕನ್ನಡ)

    English summary
    Actress of yesteryear Rekha is among four eminent persons who have been recommended for nomination as members of Rajya Sabha. 57-year-old Rekha was one of the top heroines of the 80s in Hindi films and and had won several national awards in her acting career.
 
    Thursday, April 26, 2012, 18:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X