»   » ಕನ್ನಡ ನಿರ್ಮಾಪಕರ ಗಾಳಕ್ಕೆ ಬಿದ್ದ ತ್ರಿಶಾ

ಕನ್ನಡ ನಿರ್ಮಾಪಕರ ಗಾಳಕ್ಕೆ ಬಿದ್ದ ತ್ರಿಶಾ

Posted By:
Subscribe to Filmibeat Kannada
trisha
ಕಡೆಗೂ ತೆಲಗು ಮತ್ತು ತಮಿಳು ಚಿತ್ರರಂಗ ಬಹುಬೇಡಿಕೆಯ ನಟಿ ತ್ರಿಶಾ ಕನ್ನಡ ನಿರ್ಮಾಪಕರ ಗಾಳಕ್ಕೆ ಬಿದ್ದಿದ್ದಾರೆ. ಅವರನ್ನು ಸ್ಯಾಂಡಲವುಡ್ ಗೆ ರಸಗುಲ್ಲ ನಿರ್ದೇಶಕ ಗೋವರ್ಧನ್ ಕರೆತರುತ್ತಿದ್ದಾರೆ. ತೆಲುಗಿನಲ್ಲಿ ಪ್ರಚಂಡ ಜಯಭೇರಿ ಬಾರಿಸಿದ್ದ ಮಹೇಶ್ ಬಾಬು ಅಭಿನಯದ 'ಅತಡು' ಚಿತ್ರದಲ್ಲಿ ತ್ರಿಶಾ ನಟಿಸಿದ್ದರು. ಈಗ ಅದೇ ಚಿತ್ರ ಕನ್ನಡಕ್ಕೆ ರೀಮೇಕ್ ಆಗುತ್ತಿದೆ.

ಅತಡು ಚಿತ್ರದಲ್ಲಿ ನಾನೇ ನಾಯಕಿಯಗಿದ್ದೆ ಮತ್ತು ಅದು ನನ್ನ ಮೆಚ್ಚಿನ ಪಾತ್ರ. ಇದೇ ಪಾತ್ರವನ್ನು ಕನ್ನಡದಲ್ಲಿ ಮಾಡಲು ನನಗೇನು ಸಮಸ್ಯೆಯಿಲ್ಲ, ಡೇಟ್ಸ್ ನೋಡಿ ಮುಂದಿನ ನಿರ್ಧಾರ ತಿಳಿಸುತ್ತೇನೆ. ಕಥೆ ಮತ್ತು ಚಿತ್ರಕಥೆ ಚೆನ್ನಾಗಿರುವುದರಿಂದ ಈ ಚಿತ್ರ ಕನ್ನಡದಲ್ಲೂ ಗೆಲ್ಲುತ್ತದೆ ಎನ್ನುವ ವಿಶ್ವಾಶ ಇದೆ ಎಂದು ಕನ್ನಡದಲ್ಲಿ ನಟಿಸಲು ಒಪ್ಪಿಗೆ ನೀಡಿರುವುದನ್ನು ತ್ರಿಶಾ ಖಚಿತ ಪಡಿಸುತ್ತಾರೆ.ಈ ಹಿಂದೆ ಯೋಗರಾಜ್ ಭಟ್ ರ ಲಗೋರಿ ಚಿತ್ರದಲ್ಲಿ ತ್ರಿಶಾ ನಟಿಸುತ್ತಾರೆ ಎಂದು ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ತಾನು ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ತ್ರಿಶಾ ತಣ್ಣೀರೆರಚಿದ್ದರು.

ಸುಮಾರು 5 ಅಥವಾ 6 ಕೋಟಿ ರೂಪಾಯಿಗಳಲ್ಲಿ ಚಿತ್ರ ನಿರ್ಮಿಸ ಬೇಕೆಂದು ನಿರ್ಧರಿಸಿದ್ದೇನೆ. ಇದಕ್ಕೆ ಪುನೀತ್ ರಾಜಕುಮಾರ್ ಅಥವಾ ದರ್ಶನ್ ನಾಯಕರಾಗಿ ನಟಿಸಬೇಕೆಂಬುದು ನನ್ನ ಆಸೆ. ಈಗಾಗಲೆ ಅವರ ಜೊತೆ ಮಾತನಾಡಿದ್ದೇನೆ. ಡೇಟ್ಸ್ ಇನ್ನು ಹೊಂದಾಣಿಕೆಯಾಗಿಲ್ಲ ಎಂದು ಗೋವರ್ಧನ್ ವಿವರ ನೀಡಿದ್ದಾರೆ. ಅತಡು ಚಿತ್ರವನ್ನು ತೆಲುಗಿನಲ್ಲಿ 25 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿದ್ದ್ದರು. ಆಂಧ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಆ ಚಿತ್ರ ಪಡೆದುಕೊಂಡಿತ್ತು.
(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada